ಸುದ್ದಿ 

ಜಕ್ಕೂರು ಮುಖ್ಯರಸ್ತೆಯಲ್ಲಿ ಹೊಂಡಾ ಆಕ್ಟಿವಾ ಕಳ್ಳತನ: ಪೊಲೀಸ್ ತನಿಖೆ ಆರಂಭ

Taluknewsmedia.com

Taluknewsmedia.comನಗರದ ಜಕ್ಕೂರು ಮುಖ್ಯರಸ್ತೆಯಲ್ಲಿ ಹೊಂಡಾ ಆಕ್ಟಿವಾ ವಾಹನವೊಂದು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಾಜಿದ್ ಎಂಬುವವರು ತಮ್ಮ KA-50 EN-8847 ನೋಂದಣಿ ಸಂಖ್ಯೆಯ ಹೊಂಡಾ ಆಕ್ಟಿವಾನ್ನು ನಿಲ್ಲಿಸಿ ನೀರು ಕುಡಿಯಲು ಹೋದಾಗ ಈ ಕೃತ್ಯ ನಡೆದಿದೆ. ಘಟನೆ ಜೂನ್ 15 ರಂದು ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದ್ದು, ಲಾಗ್-9 ಆಫೀಸ್ ಎದುರು ಸ್ಕೂಟರ್ ನಿಲ್ಲಿಸಿದ್ದಾಗಿ ದೂರುದಾರರಾದ ಹೊನ್ನಪ್ಪ ತಿಳಿಸಿದ್ದಾರೆ. ಅವರು ಅರ್ಧ ಗಂಟೆಯ ಬಳಿಕ ಸಂಜೆ 5:30ಕ್ಕೆ ಹಿಂದಿರುಗಿದಾಗ, ಬೈಕ್ ಕಣ್ಮರೆಯಾದ್ದು ಗಮನಕ್ಕೆ ಬಂದಿದೆ. ಸ್ಥಳದಲ್ಲಿ ಹಾಗೂ ಸುತ್ತಮುತ್ತಲೆ ಎಲ್ಲೆಡೆ ಹುಡುಕಿದರೂ ವಾಹನ ಪತ್ತೆಯಾಗಿಲ್ಲ. ಕಳ್ಳತನವಾದ ವಾಹನವು ಮೆ 2024ರಲ್ಲಿ ತಯಾರಿಸಲಾದ ಹೆವಿ ಗ್ರೇ ಮೆಟಾಲಿಕ್ ಬಣ್ಣದ ಹೊಂಡಾ ಆಕ್ಟಿವಾವಾಗಿದ್ದು, ಇದರ ಮೌಲ್ಯ ₹89,000 ಆಗಿದೆ. ಇಂಜಿನ್ ನಂ. JK13EG7169239 ಮತ್ತು ಚಾಸಿಸ್ ನಂ. ME4JK13CERG110578 ಆಗಿದೆ. ಅಮೃತಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಮೊಬೈಲ್ ಟವರ್ ಉಪಕರಣಗಳ ಕಳ್ಳತನ – ₹9.45 ಲಕ್ಷ ನಷ್ಟ

Taluknewsmedia.com

Taluknewsmedia.comನಗರದ ಶಿವಾಜಿನಗರದಲ್ಲಿರುವ ಜಿ.ಟಿ.ಎಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (GTL) ಕಂಪನಿಗೆ ಸೇರಿದ ಮೊಬೈಲ್ ಟವರ್ ಹಾಗೂ ಇತರೆ ಉಪಕರಣಗಳು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅನ್ಸಲ್ ಪಾಷಾ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನ್ಸಲ್ ಪಾಷಾ (47), ಬಿಸ್ಮರ್‌ಟೌನ್‌ನ ಕನೋಟ್ ರೋಡ್ ನಿವಾಸಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ GTL ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಅವರು ನೀಡಿದ ದೂರಿನ ಪ್ರಕಾರ, ಕಂಪನಿಯ ಟೆಕ್ನಿಷಿಯನ್‌ಗಳು ಸಂಜೀವಿನಿನಗರದ 11ನೇ ಕ್ರಾಸ್, ಮನೆ ಸಂಖ್ಯೆ 2159 ರಲ್ಲಿ ಟವರ್ ಇರುವ ಸ್ಥಳವನ್ನು ಪರಿಶೀಲನೆಗೆ ಭೇಟಿ ನೀಡಿದಾಗ, ಅಲ್ಲಿನ ಟವರ್, ಡಿಸೆಲ್ ಜನರೇಟರ್ ಮತ್ತು ಇತರೆ ಉಪಕರಣಗಳು ಕಾಣೆಯಾಗಿದ್ದವು. ಕಂಪನಿಗೆ ಯಾವುದೇ ಮಾಹಿತಿ ನೀಡದೇ, ಅಪರಿಚಿತ ವ್ಯಕ್ತಿಗಳು ಸುಮಾರು ₹9,45,546 ಮೌಲ್ಯದ ಉಪಕರಣಗಳನ್ನು ಕಳವು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಘಟನೆಯಿಂದ ಕಂಪನಿಗೆ ಭಾರೀ ಆರ್ಥಿಕ ನಷ್ಟವಾಗಿದ್ದು, ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕೆಂದು FIR ದಾಖಲಿಸಲಾಗಿದೆ.…

ಮುಂದೆ ಓದಿ..
ಸುದ್ದಿ 

ವೈದೇಹಿ ಮೆಡಿಕಲ್ ಅಕಾಡೆಮಿ ಬಳಿಯ ಅಂಗಡಿಯಲ್ಲಿ ಸಾರ್ವಜನಿಕ ತಂಬಾಕು ಮಾರಾಟ: ಎಫ್‌ಐಆರ್ ದಾಖಲೆ

Taluknewsmedia.com

Taluknewsmedia.comರಾಜೀವ್ ಗಾಂಧಿ ನಗರ ಎನ್.ಟಿ.ಐ ಲೇಔಟ್ ಬಳಿಯ ವೈದೇಹಿ ಮೆಡಿಕಲ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಸಮೀಪದ ಅಂಗಡಿಯಲ್ಲಿ ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ ನಂತರ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 23/06/2025 ರಂದು ಎರಡು ಬಗ ಮತ್ತು ಹಗಲು ಶಿಫ್ಟ್ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ, ತಮ್ಮ ವರದಿಯನ್ನು ಠಾಣಾ ಉಸ್ತುವಾರಿ ಅಧಿಕಾರಿಗಳಿಗೆ ಸಲ್ಲಿಸಿ, ಠಾಣಾ ವ್ಯಾಪ್ತಿಯಲ್ಲಿನ ಡೇ ರೌಂಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಈ ಸಂದರ್ಭದಲ್ಲಿ ಬಾತ್ಮೀದಾರರಿಂದ ದೊರೆತ ಮಾಹಿತಿಯಂತೆ, ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಹತ್ತಿರದ ಅಂಗಡಿಯೊಂದರಲ್ಲಿ ಸಾರ್ವಜನಿಕವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿತು. ಕೊಡಿಗೆಹಳ್ಳಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಮಾರಾಟ ನಡೆಯುತ್ತಿರುವುದು ದೃಢಪಟ್ಟಿತು. ಪೊಲೀಸರು ತಕ್ಷಣವೇ ಠಾಣೆಗೆ ಮರಳಿ ಬಂದು,…

ಮುಂದೆ ಓದಿ..
ಸುದ್ದಿ 

ಪಿಜಿ ಕೋಣೆಯಲ್ಲಿ ಎಚ್ಚರಿಕೆಯ ಕೊರತೆ: ಮ್ಯಾಕ್‌ಬುಕ್ ಮತ್ತು ಎರಡು ಮೊಬೈಲ್ ಕಳ್ಳತನ!

Taluknewsmedia.com

Taluknewsmedia.comನಗರದ ಪನ್ನೀರ್ ರಸ್ತೆ ಬಳಿ ಇರುವ ಪಿಜಿ ಗೃಹದಲ್ಲಿ 21 ಜೂನ್ 2025ರಂದು ಬೆಳಗಿನ ಜಾವ ಸಂಭವಿಸಿದ ಕಳ್ಳತನದ ಘಟನೆ ಆತಂಕ ಉಂಟುಮಾಡಿದೆ. ಪಿಜಿಯಲ್ಲಿ ವಾಸಿಸುತ್ತಿದ್ದ ವೀಡಿಯೋ ಎಡಿಟರ್‌ನ ಮ್ಯಾಕ್‌ಬುಕ್ ಲ್ಯಾಪ್‌ಟಾಪ್ ಹಾಗೂ ಇನ್ನಿಬ್ಬರ ಮೊಬೈಲ್‌ಗಳನ್ನು ಅಪರಿಚಿತ ಕಳ್ಳ ಕದ್ದೊಯ್ದಿದ್ದಾನೆ. ಅಸ್ವಾಲ್ ಸ್, ಪದ್ಮೇಶ್ ರಾಠೋಡ್ ಮತ್ತು ಆಶೋಕ್‌ಟೋಪ್‌ ಎಂಬುವವರು ತಮಗೆ ಸೇರಿದ ಸಾಧನಗಳನ್ನು ಬೆಡ್ ಹತ್ತಿರ ಇಟ್ಟು ಮಲಗಿದ್ದರು. ಬೆಳಿಗ್ಗೆ 6:30ರ ವೇಳೆಗೆ ಎಚ್ಚರವಾದಾಗ, ಮ್ಯಾಕ್‌ಬುಕ್ ಮತ್ತು ಮೊಬೈಲ್‌ಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಕಳ್ಳತನವಾದ ವಸ್ತುಗಳು: ಆಪಲ್ ಮ್ಯಾಕ್‌ಬುಕ್ ಪ್ರೋ ಲ್ಯಾಪ್‌ಟಾಪ್ ಒನ್‌ಪ್ಲಸ್ ನಾರ್ಡ್ ಮೊಬೈಲ್ ಸ್ಯಾಮ್‌ಸಂಗ್ ಎ-36 ಮೊಬೈಲ್ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಯುತ್ತಿದೆ.

ಮುಂದೆ ಓದಿ..
ಸುದ್ದಿ 

ಮಾಲೀಕತ್ವದ ಕಟ್ಟಡಕ್ಕೆ ಬೆದರಿಕೆ: 50 ಲಕ್ಷ ರೂ ಬೇಡಿಕೆಯ ಆರೋಪ

Taluknewsmedia.com

Taluknewsmedia.comನಗರದ ಸಹಕಾರ ನಗರ ಪ್ರದೇಶದಲ್ಲಿ ಖಾಸಗಿ ಆಸ್ತಿಗೆ ಸಂಬಂಧಿಸಿದವಾಗಿ ಜಮೀನುದಾರರೊಬ್ಬರು ತಮಗೆ ಕಟ್ಟಡವನ್ನು ನೆಲಸಮಗೊಳಿಸುವ ಬೆದರಿಕೆ ಬಂದಿದ್ದು, ಹಣ ನೀಡುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀ ರವೀಶ್ ಗೌಡ ಹಳೆಯ ಸೈಟ್ ನಂ. 61/5ರಲ್ಲಿ ಶಾಂತಿಯುತವಾಗಿ ಸ್ವಾಧೀನ ಹೊಂದಿದ ಭೂಮಿಯಲ್ಲಿ B.B.M.P. ಯೋಜನೆ ಅನುಮತಿಗೆ ಅನುರೂಪವಾಗಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಈ ಭೂಮಿ ಹಲವು ಹಂತಗಳಲ್ಲಿ ಪರಿವರ್ತನೆಗೊಂಡು ಪ್ರಸ್ತುತ ಸೈಟ್ ನಂ. 61/8 ಆಗಿದ್ದು, ಸಂಬಂಧಿತ ದಾಖಲೆಗಳು ಸಹ ಇವೆ ಎಂದು ಅವರು ತಿಳಿಸಿದ್ದಾರೆ. ಆದರೆ ಈ ಆಸ್ತಿಗೆ ಸಂಬಂಧವಿಲ್ಲದ ಬಿ.ಪಿ. ಮಂಜುನಾಥ್ ಗೌಡ ಎಂಬವರು, ಶ್ರೀ ರವೀಶ್ ಗೌಡ ವಿರುದ್ಧ RTI ಮೂಲಕ ಮಾಹಿತಿ ಪಡೆದು, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳಿಗೆ ದೂರುಗಳನ್ನು ನೀಡುತ್ತಿದ್ದಾರೆ. ಕಟ್ಟಡವನ್ನು “ಅಕ್ರಮ ಆಶ್ರಮ” ಎಂದು ಗುರುತಿಸಿ ವಿವಿಧ ದಿಕ್ಕಿನಲ್ಲಿ…

ಮುಂದೆ ಓದಿ..
ಸುದ್ದಿ 

ಭೂಪಸಂದ್ರದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ! ಅಕ್ರಮ ಸೇಲ್ ಡೀಡ್ ಮಾಡಿದ ದೂರು

Taluknewsmedia.com

Taluknewsmedia.comಬೆಂಗಳೂರು ಉತ್ತರ ತಾಲ್ಲೂಕಿನ ಭೂಪಸಂದ್ರ ಪ್ರದೇಶದಲ್ಲಿ ನ್ಯಾಯಾಲಯದ ತಡೆ ಆದೇಶವಿರುವ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸೈಯದ್ ಮೊಹಮ್ಮದ್ ಎಂಬವರು ನ್ಯಾಯಾಲಯದ ಅನುಮತಿಯಿಂದ ಠಾಣೆಗೆ ದೂರು ನೀಡಿ, ತಮ್ಮ ಜಿಪಿಎ ಕ್ಲೈಯಂಟ್‌ಗಳಾದ ಜೈಹರುನ್ನಿಸಾ, ಸೈಯದ್ ಪ್ರೈರಾಜನ್ ಹಾಗೂ ಬೇಬಿ ಹಾಜಿರಾ ಅವರ ಹೆಸರಿನಲ್ಲಿ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆದಿರುವ O.S. No.10243/2014 ದಾವೆಯ ವಿವರ ನೀಡಿದ್ದಾರೆ. ಈ ಭೂಮಿ ಸಂಬಂಧಿಸಿದ ಸೈಟ್ ನಂ.19, ಭೂಪಸಂದ್ರ ಪ್ರದೇಶದಲ್ಲಿ ಒಂದೆಕರೆ ವಿಸ್ತೀರ್ಣದ ಜಾಗವಿದ್ದು, ಈ ಆಸ್ತಿಗೆ ಸಂಬಂಧಿಸಿ ಯಾವುದೇ ಮೂರನೇ ವ್ಯಕ್ತಿಗೆ ಮಾರಾಟ ಮಾಡಬಾರದು ಎಂಬಂತೆ ಸಿಸಿಹೆಚ್-14 ನ್ಯಾಯಾಲಯ ಮಧ್ಯಂತರ ತಡೆ ಆದೇಶ ನೀಡಿತ್ತು. ಆದೇಶ ಇನ್ನೂ ಜಾರಿಯಲ್ಲಿಯೇ ಇತ್ತು. ಆದರೆ, ಈ ಆದೇಶವಿದ್ದರೂ ಸಹ ಕೆ.ಜೆ. ಜಾನ್ ಎಂಬವರು ತಾವು ಹಕ್ಕುದಾರರಲ್ಲದಿದ್ದರೂ, 15 ಮಾರ್ಚ್ 2024ರಂದು ಕೆ. ರವಿಕುಮಾರ್ ಎಂಬುವವರಿಗೆ ಅಕ್ರಮವಾಗಿ ಸೇಲ್…

ಮುಂದೆ ಓದಿ..
ಸುದ್ದಿ 

ಅತ್ತಿಬೆಲೆ ಸರ್ಕಲ್‌ನಲ್ಲಿ 13 ವರ್ಷದ ಬಾಲಕ ನಿಥಿನ್ ಕಾಣೆಯಾದ ಘಟನೆ – ಪೋಷಕರ ಆತಂಕ

Taluknewsmedia.com

Taluknewsmedia.comನಗರದ ಅತ್ತಿಬೆಲೆ ಸರ್ಕಲ್ ಬಳಿ 13 ವರ್ಷದ ಬಾಲಕ ನಿಥಿನ್ ಎಂಬವರು ಶಂಕಾಸ್ಪದ ರೀತಿಯಲ್ಲಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಿಥಿನ್ ಜಯಭಾರತಿ ಸರ್ಕಾರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಪ್ರತಿದಿನದಂತೆ ದಿ. 22/06/2025 ರಂದು ಶಾಲೆಯಿಂದ ಮನೆಗೆ ಬರುವ ಸಂದರ್ಭ ಸಂಜೆ 5:30ರ ವೇಳೆಗೆ ತನ್ನ ತಾಯಿಯೊಂದಿಗೆ ನಡೆದುಕೊಂಡು ಬರುತ್ತಿದ್ದಾಗ, ಅತ್ತಿಬೆಲೆ ಸರ್ಕಲ್ ಬಳಿ ಏಕಾಏಕಿ ಕಾಣೆಯಾಗಿದ್ದಾನೆ. ಪೋಷಕರು ತಮ್ಮ ಮಗನನ್ನು ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೋಷಕರ ಪ್ರಕಾರ, ನಿಥಿನ್ ನೋಡಲು ಎಣ್ಣೆ ಗೆಂಪು ಮೈಬಣ್ಣ ಹೊಂದಿದ್ದು, ಸುಮಾರು 4 ಅಡಿ ಎತ್ತರವಿದೆ. ಆತನಿಗೆ ಕಪ್ಪು ಕೂದಲು ಇದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಕಂಡುಹಿಡಿಯುವ ಪ್ರಮುಖ ಲಕ್ಷಣವೆಂದರೆ, ನಿಥಿನ್‌ನ ಮುಂಭಾಗದ ಮೇಲಿನ ಹಲ್ಲು ಅರ್ಧ ಮುರಿದಿರುತ್ತದೆ. ಕಾಣೆಯಾದಾಗ ನಿಥಿನ್ ನೀಲಿ ಬಣ್ಣದ ಗೆರೆ-ಗೆರೆ ಶರ್ಟ್ ಹಾಗೂ ಕ್ರೀಂ ಬಣ್ಣದ ಪ್ಯಾಂಟ್ ಧರಿಸಿಕೊಂಡಿದ್ದನು.…

ಮುಂದೆ ಓದಿ..
ಸುದ್ದಿ 

ಚಿನ್ನಪ್ಪ ಗಾರ್ಡನ್ ಬಳಿ ರಸ್ತೆ ದಾಟುತ್ತಿದ್ದ 7 ವರ್ಷದ ಬಾಲಕನಿಗೆ ಸ್ಕೂಟರ್ ಡಿಕ್ಕಿ – ಪ್ರಕರಣ ದಾಖಲಾಗಿದೆ.

Taluknewsmedia.com

Taluknewsmedia.comಚಿನ್ನಪ್ಪ ಗಾರ್ಡನ್ ಬಳಿ ರಸ್ತೆ ದಾಟುತ್ತಿದ್ದ 7 ವರ್ಷದ ಬಾಲಕನಿಗೆ ಸ್ಕೂಟರ್ ಡಿಕ್ಕಿ – ಪ್ರಕರಣ ದಾಖಲಾಗಿದೆ. ನಗರದ ಚಿನ್ನಪ್ಪ ಗಾರ್ಡನ್ ಮುಖ್ಯ ರಸ್ತೆಯಲ್ಲಿ ನಡೆದ ದುರಂತದಲ್ಲಿ, 7 ವರ್ಷದ ಬಾಲಕ ಆರೀಜ್ ದೌಲತ್ ಅವರು ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್ ಡಿಕ್ಕಿಗೆ ಒಳಗಾದ ಘಟನೆ ನಡೆದಿದೆ. ಘಟನೆ ಜೂನ್ 23ರಂದು ಸಂಜೆ ಸುಮಾರು 6:40ರ ಸಮಯದಲ್ಲಿ ಮಕಾ ಮಸೀದಿಯ ಹತ್ತಿರದ ರಸ್ತೆ ದಾಟುವಾಗ ಸಂಭವಿಸಿದೆ. ದೌಲತ್ ಭಾಷಾ ಅವರ ಪುತ್ರ ಆರೀಜ್ ದೌಲತ್ ರಸ್ತೆಯನ್ನು ದಾಟುತ್ತಿದ್ದ ವೇಳೆ, KA-03-KY-7568 ಸಂಖ್ಯೆಯ ಸ್ಕೂಟರ್ ವೇಗವಾಗಿ ಬರುತ್ತಿದ್ದು, ಎಚ್ಚರಿಕೆ ಇಲ್ಲದೆ ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಾಲಕ ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಘಟನೆಯ ಬಳಿಕ ಸ್ಥಳೀಯರು ಕೂಡಲೇ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಸಹಾಯ ಮಾಡಿದ್ದು, ಪೋಷಕರು ತಕ್ಷಣವೇ ಸ್ಥಳೀಯ ಆರ್ ಟಿ ನಗರ ಟ್ರಾಫಿಕ…

ಮುಂದೆ ಓದಿ..
ಅಂಕಣ 

ದಿಢೀರ್ ಸಾವುಗಳ ಸುತ್ತಾ…..ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು..

Taluknewsmedia.com

Taluknewsmedia.comದಿಢೀರ್ ಸಾವುಗಳ ಸುತ್ತಾ….. ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು, ವಿದ್ಯಾರ್ಥಿಗಳು ಹೃದಯಘಾತದಿಂದ ದಿಢೀರನೆ ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಸಾಯುತ್ತಿರುವುದು ಹೆಚ್ಚಾಗುತ್ತಿದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಅದನ್ನು ವೈದ್ಯಕೀಯ ಸಂಶೋಧನಾ ಕ್ಷೇತ್ರ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಮತ್ತು ಸರ್ಕಾರವು ಆ ನಿಟ್ಟಿನಲ್ಲಿ ಪ್ರಯತ್ನ ಪಡಲಿ…… ಆದರೆ ಈ ಕ್ಷಣದಲ್ಲಿ ಆ ವಿಷಯಗಳ ಬಗ್ಗೆ ನಾವು ಹೊಂದಬಹುದಾದ ಕೆಲವು ಮಾನಸಿಕ ಮತ್ತು ದೈಹಿಕ ಪೂರ್ವ ತಯಾರಿಗಳ ಬಗ್ಗೆ ನನ್ನ ವೈಯಕ್ತಿಕ ಅನಿಸಿಕೆ. ಯಾರಿಗೂ ಮನುಷ್ಯನ ಆಯಸ್ಸಿನ ಬಗ್ಗೆ, ಮನುಷ್ಯನ ಬದುಕಿನ ಬಗ್ಗೆ ಸಂಪೂರ್ಣ ಖಚಿತತೆ ಇರುವುದಿಲ್ಲ. ನಾವು ವಾಸಿಸುವ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ, ನಮ್ಮ ಅನುವಂಶೀಯ ದೇಹ ಪ್ರಕೃತಿಯ ಅನುಸಾರವಾಗಿ, ನಮ್ಮ ಬುದ್ಧಿ ಶಕ್ತಿಯ ಬೆಳವಣಿಗೆಯ ರೀತಿಗೆ ತಕ್ಕಂತೆ, ನಮ್ಮ ಆಡಳಿತ ವ್ಯವಸ್ಥೆ ಮತ್ತು ಒಟ್ಟು ವ್ಯವಸ್ಥೆಗೆ ನಾವು ಪ್ರತಿಕ್ರಿಯಿಸುವ ರೀತಿ ಸಾಮಾನ್ಯವಾಗಿ…

ಮುಂದೆ ಓದಿ..
ಸುದ್ದಿ 

ನಾಗಮಂಗಲ : ಗಂಗನಹಳ್ಳಿಯ ಹಿರಿಯರಾದ ಜೆ.ವಿ. ತಿಮ್ಮೇಗೌಡರು ( ಚಿಕ್ಕಣ್ಣ) ಇನ್ನಿಲ್ಲ – ಕುಟುಂಬದಿಂದ ಶ್ರದ್ಧಾಂಜಲಿ ಸಭೆಗೆ ಆಹ್ವಾನ

Taluknewsmedia.com

Taluknewsmedia.comಗಂಗನಹಳ್ಳಿಯ ಹಿರಿಯರಾದ ಜೆ.ವಿ. ತಿಮ್ಮೇಗೌಡರು ( ಚಿಕ್ಕಣ್ಣ) ಇನ್ನಿಲ್ಲ – ಕುಟುಂಬದಿಂದ ಶ್ರದ್ಧಾಂಜಲಿ ಸಭೆಗೆ ಆಹ್ವಾನ ಗಂಗನಹಳ್ಳಿಯ ಹಿರಿಯ ನಾಗರಿಕರು ಹಾಗೂ ಸಮುದಾಯದಲ್ಲಿ ಹೆಸರುವಾಸಿಯಾದ ಶ್ರೀ ಜೆ.ವಿ. ತಿಮ್ಮೇಗೌಡರು (ಚಿಕ್ಕಣ್ಣ) ಅವರು ದಿನಾಂಕ 21-06-2025 ರಂದು ನಿಧನರಾದರು. ಅವರು ತಮ್ಮ ಜೀವಿತಾವಧಿಯಲ್ಲಿ ಗ್ರಾಮ ಅಭಿವೃದ್ಧಿಗೆ ಶ್ರದ್ಧೆಯಿಂದ ಕೆಲಸಮಾಡಿದವರು. ಅವರ ನಿಧನದಿಂದ ಊರಿನಲ್ಲಿ ಶೋಕಚ್ಛಾಯೆ ನೆಲೆಸಿದೆ. ಶ್ರೀ ತಿಮ್ಮೇಗೌಡರು ಅವರು ಬಹುಮಾನ್ಯ ವ್ಯಕ್ತಿತ್ವದವರು. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ನಿರಂತರ ಸೇವೆಯಿಂದ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು. ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಟಿ.ಬಿ.ಚನ್ನಮ್ಮರವರು ಹಾಗೂ ಮಕ್ಕಳು ಸೇರಿದಂತೆ ಸಮೃದ್ಧ ಕುಟುಂಬವನ್ನು ಅಗಲಿದ್ದಾರೆ. ಶ್ರದ್ಧಾಂಜಲಿ ಹಾಗೂ ಉತ್ತರಕ್ರಿಯೆಯ ಕಾರ್ಯಕ್ರಮ ಮೃತರ ಆತ್ಮಕ್ಕೆ ಶಾಂತಿ ಲಭಿಸಬೇಕೆಂಬ ಉದ್ದೇಶದಿಂದ ಶ್ರದ್ಧಾಂಜಲಿ ಸಭೆ ಹಾಗೂ ಉತ್ತರಕ್ರಿಯೆಯ ಕಾರ್ಯಕ್ರಮವನ್ನು ಅವರ ಪುತ್ರ ಶ್ರೀ ಜೆ.ವಿ. ಶಾಂತಕುಮಾರ ಹಾಗೂ ಕುಟುಂಬದ ಸದಸ್ಯರು ಅವರಿಂದ ದಿನಾಂಕ 01-07-2025 ರಂದು ಮಂಗಳವಾರ…

ಮುಂದೆ ಓದಿ..