ಸುದ್ದಿ 

ಅಪಘಾತದಲ್ಲಿ ಯುವಕನ ದುರ್ಘಟನಾತ್ಮಕ ಸಾವು, ಮತ್ತೊಬ್ಬ ಗೆಳೆಯನಿಗೆ ಗಂಭೀರ ಗಾಯ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 25: ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ 10.00 ಗಂಟೆಗೆ ನಡೆದಿದೆ. ಮೃತ ಯುವಕನನ್ನು ಚಿನ್ಮಯ ಶಿವಶಂಕರಯ್ಯ ಹಿರೇಮಠ (ವಯಸ್ಸು: 19), ನಿವಾಸಿ ಕೇಶ್ವಾಪುರ, ಹುಬ್ಬಳ್ಳಿ ಎಂದು ಗುರುತಿಸಲಾಗಿದೆ. ಚಿನ್ಮಯ ತನ್ನ ಗೆಳೆಯ ಲೋಹಿತ ನಂದ್ಯಾಳ (ವಯಸ್ಸು: 19, ಸಾ: ಆಂಜನೇಯನಗರ, ಹುಬ್ಬಳ್ಳಿ) ಅವರನ್ನು ಜೊತೆಯಲ್ಲಿ ಕೂಡಿ, ತಮ್ಮ ಮೋಟಾರ್ ಸೈಕಲ್ ನಂಬರ್ ಕೆಎ-63 ಜೆ-4294 ಮೇಲೆ ಅಕ್ಷಯ ಪಾರ್ಕ್ ಸರ್ಕಲ್ ಕಡೆಯಿಂದ ಕೆ.ಎಲ್.ಇ ಕಾಲೇಜ್ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಟ್ರಾಕ್ಟರ್ ನಂಬರ್ ಕೆಎ-25 ಸಿ-8861/62 ಅನ್ನು ನವೀನ ನಾಗರಾಜ ಸಾರಗೆ (ವಯಸ್ಸು: 26, ಸಾ: ಭಾರತಿ ನಗರ, ಗೋಕುಲ ರೋಡ್, ಹುಬ್ಬಳ್ಳಿ) ಎಂಬಾತ ಅತೀ ವೇಗ ಹಾಗೂ ನಿರ್ಲಕ್ಷತನದಿಂದ…

ಮುಂದೆ ಓದಿ..
ಸುದ್ದಿ 

ಅಪಘಾತ ಪ್ರಕರಣ : ಹುಬ್ಬಳ್ಳಿ: ನಾಯಿ ತಪ್ಪಿಸಲು ಹೋಗಿ ವಿಮಾನ ನಿಲ್ದಾಣದ ಕಂಪೌಂಡ್‌ಗೆ ಕಾರು ಡಿಕ್ಕಿ

Taluknewsmedia.com

Taluknewsmedia.comಹುಬ್ಬಳ್ಳಿ: ದಿನಾಂಕ 15.06.2025 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ, ವಿದ್ಯಾನಗರದ ಶಿರೂರ ಪಾರ್ಕ ನಿವಾಸಿ ಸಾಯಿಪ್ರಭು ತಂದೆ ಸತೀಶ ಜಾಧವ ಎಂಬವರು ಕಾರು ನಂಬರ ಕೆಎ-63 ಎಂ-3577 ನೇ ನಂಬರಿನ ಪಿರ್ಯಾಧಿದಾರರೊಂದಿಗೆ ಪ್ರಯಾಣಿಸುತ್ತಿದ್ದರು. ಇವರು ಗೋಕುಲ ರೋಡದಲ್ಲಿರುವ ತ್ರಿಲೋಕ ಲಾನ್ಸ್ ಹಾಲ್ ಬಳಿಯಿಂದ ಸಾರ್ವಜನಿಕ ರಸ್ತೆಯ ಮೂಲಕ ಅಕ್ಷಯ ಪಾರ್ಕ ಸರ್ಕಲ್ ಕಡೆಗೆ ಯು-ಟರ್ನ್ ತೆಗೆದುಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ರಸ್ತೆಯಲ್ಲಿ ನಾಯಿ ಅಡ್ಡ ಬಂದ ಪರಿಣಾಮ, ಚಾಲಕನಾದ ಸಾಯಿಪ್ರಭುನವರು ಅದನ್ನು ತಪ್ಪಿಸಲು ಪ್ರಯತ್ನಿಸಿದ್ದು, ನಿರ್ಲಕ್ಷತೆಯಿಂದ ಕಾರಿನ ನಿಯಂತ್ರಣ ತಪ್ಪಿ, ಕಾರು ಎಡಬದಿಗೆ ಸರಿದು ವಿಮಾನ ನಿಲ್ದಾಣದ ಕಂಪೌಂಡ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಅಪಘಾತದಿಂದ ಕಾರು ನಂಬರ ಕೆಎ-63 ಎಂ-3577 ಗೆ ನಷ್ಟ ಉಂಟಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್9886063123

ಮುಂದೆ ಓದಿ..
ಸುದ್ದಿ 

ವಾಹನ ಅಪಘಾತ: ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ

Taluknewsmedia.com

Taluknewsmedia.comಹುಬ್ಬಳ್ಳಿ, 24 ಜೂನ್ 2025:ನಗರದ ರಿಂಗರೋಡ್ ರಸ್ತೆಯಲ್ಲಿ ಇಂದು ಮುಂಜಾನೆ ಸುಮಾರು 04:30 ಗಂಟೆಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕೆಎ-01/ಎಆರ್-1667 ನಂಬರಿನ ಟ್ಯಾಂಕರ್ ಅನ್ನು ಚಾಲನೆ ಮಾಡುತ್ತಿದ್ದ ಕೃಷ್ಣಮೂರ್ತಿ ತಂದೆ ಅಮಾಸೆಗೌಡ, ಸಾ|| ಚಿಕ್ಕಗಂಡಸೆ, ತಾ|| ಅರಸಿ ಕೆರೆ, ಜಿ|| ಹಾಸನ, ಈತನು ಅಪಘಾತಕ್ಕೆ ಕಾರಣನಾಗಿದ್ದಾನೆ. ಚಾಲಕನು ಟ್ಯಾಂಕರ್‌ನ್ನು ರಿಂಗರೋಡ್ ಕಡೆಯಿಂದ ಅಂಚಟಗೇರಿ ದಿಕ್ಕಿಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದ ವೇಳೆ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರಿನ ರಸ್ತೆಯ ಪಕ್ಕದಲ್ಲಿರುವ ತೆರಿಗೆ (ಕಟ್ಟಡ ಭಾಗ) ಮೇಲೆ ನುಗ್ಗಿ ಈ ಘಟನೆ ವೇಳೆ ಲಾರಿಯ ಬಲಭಾಗವು ಗಂಭೀರವಾಗಿ ಜಖಂಗೊಂಡಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ವಾಹನ ಚಾಲಕರಿಂದ ಸಂಭವಿಸುವ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯ ವಿರುದ್ಧ ಸಾರ್ವಜನಿಕರಲ್ಲಿ ಕಳವಳ ವ್ಯಕ್ತವಾಗಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿ ಮಹಿಳೆ ಮೇಲೆ ಗಂಡನಿಂದ ಕ್ರೂರ ಹಲ್ಲೆ ಹಾಗೂ ಕೊಲೆ ಯತ್ನ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 25 : ಪತ್ನಿಯನ್ನು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳಿಸಿ ಕೊಲೆ ಮಾಡಲು ಯತ್ನಿಸಿದ ಗಂಭೀರ ಆರೋಪದಡಿ ಫಯಾಜ್ ಅಹ್ಮದ ವಿರುದ್ಧ ಇಬ್ಬರು ದೂರುದಾರೆಯರ ವತಿಯಿಂದ ಇಬ್ಬರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಪಿರ್ಯಾದಿದಾರಳಾದ ಮಹಿಳೆ ತನ್ನ ಗಂಡನಾದ ಫಯಾಜ್ ಅಹ್ಮದ (ತಂದೆ: ಮಹ್ಮದ ಇಕಾಲ ಕುಸುಗಲಿ) ಈತನ ವಿರುದ್ಧ ಹುಬ್ಬಳ್ಳಿ-ಧಾರವಾಡ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಿಂದಿನಿಂದಲೇ ಎರಡು ಪ್ರಕರಣಗಳನ್ನು ದಾಖಲಿಸಿದ್ದಳು. ಇದಕ್ಕೆ ಸೇಡಾಗಿ, ದಿನಾಂಕ 12/06/2025 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ, ಮಹಿಳೆ ವಾಸವಿದ್ದ ಚೇತನಾನಗರ, ಗೋಕುಲ ರಸ್ತೆಯ ಬಾಡಿಗೆ ಮನೆಯಲ್ಲಿ ಈತನಿಂದ ಹಲ್ಲೆ ನಡೆಯಿತು. “ನನ್ನನ್ನು ಜೈಲಿಗೆ ಕಳಿಸಿದ್ದೀಯಾ ಎಂದು ತುಂಬಾ ಕೀಳುಮಟ್ಟದ ಅವಾಚ್ಯ ಶಬ್ದಗಳಿಂದ ಬೈದು ಹೀಯಾಳಿಸಿ ಇವತ್ತು ನಿನ್ನ ಜೀವಸಹಿತ ಬಿಡುವುದಿಲ್ಲ, ನಿನ್ನನ್ನು ಕೊಲೆ ಮಾಡಿಯೇ ಹೋಗುತ್ತೇನೆ” ಎಂದು ಬೆದರಿಕೆ…

ಮುಂದೆ ಓದಿ..
ಸುದ್ದಿ 

ಪತ್ನಿಗೆ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆ ನೀಡಿದ ಪತಿ ಹಾಗೂ ಮನೆಯವರ ವಿರುದ್ಧ ಪೊಲೀಸ್ ಪ್ರಕರಣ

Taluknewsmedia.com

Taluknewsmedia.comನಾಗಮಂಗಲ ತಾಲೂಕಿನಲ್ಲಿ ದೌರ್ಜನ್ಯದಿಂದ ಮಹಿಳೆಯೊಬ್ಬರು ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ಹಾಗೂ ಮನೆಯ ಇತರ ಸದಸ್ಯರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಅಶ್ವಿನಿ ಎಸ್ ಎಚ್ ಶಿಲ್ಪಾಪುರ ಗ್ರಾಮದಿಂದಾಗಿದ್ದು, ಮೊದಲ ಮದುವೆಯ ಪತಿ ಮೃತರಾದ ಬಳಿಕ ಅವರು ತಮ್ಮ ಮಕ್ಕಳೊಂದಿಗೆ ಕೆ.ಮಲ್ಲೇನಹಳ್ಳಿಗೆ ಬಂದು ನೆಲೆಸಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮಣಶೆಟ್ಟಿ ಎಂಬುವವರ ಪುತ್ರ ವಿನೋದ್ ಕುಮಾರ್ ಎಂಬಾತನೊಂದಿಗೆ ಪ್ರೀತಿ ಬೆಳಸಿ, ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಮದುವೆಯ ನಂತರ ಆರಂಭದಲ್ಲಿ ದಾಂಪತ್ಯ ಜೀವನ ಸುಖಮಯವಾಗಿದ್ದರೂ, ಕೆಲ ತಿಂಗಳುಗಳಲ್ಲಿ ಪತ್ನಿ ಮೇಲೆ ದೈಹಿಕ, ಮಾನಸಿಕ ಮತ್ತು ಲೈಂಗಿಕ ಹಿಂಸೆ ಆರಂಭವಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಪತಿ, ಅತ್ತೆ ಮತ್ತು ಗಂಡನ ಅಕ್ಕ ಸೇರಿ ಪತ್ನಿಗೆ ವರದಕ್ಷಿಣೆಗಾಗಿ ಒತ್ತಡ ಹೇರಿದಷ್ಟೇ ಅಲ್ಲದೆ, ಕುಡಿದು ಬಂದು ಗಲಾಟೆ ಮಾಡುವುದು, ಬಟ್ಟೆ ಹರಿದು ಬೀದಿಯಲ್ಲಿ ಅವಮಾನ ಮಾಡುವುದು, ಬಲವಂತದಿಂದ ಖಾಸಗಿ ಅಂಗಾಂಗಗಳ ವಿಡಿಯೋ ಚಿತ್ರೀಕರಣ ಮಾಡಿ…

ಮುಂದೆ ಓದಿ..
ಸುದ್ದಿ 

ಗೊಲ್ಲರಹಳ್ಳಿ ಗೇಟು ಬಳಿ ಪೆಟ್ಟಿ ಅಂಗಡಿಯಲ್ಲೇ ಸಾರ್ವಜನಿಕ ಮದ್ಯ ಸೇವನೆ – ವ್ಯಾಪಾರಿ ಬಂಧನ

Taluknewsmedia.com

Taluknewsmedia.comಬೋಗಾದಿ ರಸ್ತೆಯ ಗೊಲ್ಲರಹಳ್ಳಿ ಗೇಟಿನ ಸಮೀಪವಿರುವ ಪೆಟ್ಟಿ ಅಂಗಡಿಯೊಂದರಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ನೀಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ರಾಜೇಂದ್ರ ಜೆ ಪಿಎಸ್‌ಐ ಅವರಿಗೆ ಬಂದ ಖಚಿತ ಮಾಹಿತಿಯಂತೆ, ಗೊಲ್ಲರಹಳ್ಳಿ ಗ್ರಾಮದ ನಿವಾಸಿ ರಾಮದಾಸ್ (54) ಎಂಬವರು ತಮ್ಮ ಅಂಗಡಿಮುಂಭಾಗದಲ್ಲೇ ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದರೆಂದು ತಿಳಿದು, ಪೊಲೀಸ್ ಸಿಬ್ಬಂದಿಗಳು ಮತ್ತು ಇಬ್ಬರು ಪಂಚಾಯತ್‌ಪಟ್ಟರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಅಂಗಡಿಯ ಮುಂದೆ ನಾಲ್ಕು ಜನರು ಮದ್ಯ ಸೇವಿಸುತ್ತಿರುವುದು ಕಂಡುಬಂದಿದ್ದು, ಪೊಲೀಸರನ್ನು ನೋಡಿ ಓಡಿಹೋದರು. ಸ್ಥಳ ಪರಿಶೀಲನೆ ವೇಳೆ ಪ್ಲಾಸ್ಟಿಕ್ ಕವರ್‌ನಲ್ಲಿ 90 ಎಂಎಲ್ ಗಾತ್ರದ 9 ರಜಾ ವಿಸ್ಕಿ ಪೌಚ್‌ಗಳು (₹450 ಮೌಲ್ಯ) ಮತ್ತು 3 ಹೇವರ್ಡ್ಸ್ ಚಿಯರ್ಸ್ ವಿಸ್ಕಿ ಪ್ಯಾಕ್‌ಗಳು (₹150 ಮೌಲ್ಯ) ಪತ್ತೆಯಾಗಿದ್ದು, ಒಟ್ಟು ₹600 ಮೌಲ್ಯದ 1080 ಎಂಎಲ್ ಮದ್ಯ ವಶಪಡಿಸಿಕೊಳ್ಳಲಾಗಿದೆ.…

ಮುಂದೆ ಓದಿ..
ಸುದ್ದಿ 

ಗಂಗಸಮುದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ: ಅಂಗಡಿ ಮಾಲೀಕನ ವಿರುದ್ಧ ಕಾನೂನು ಕ್ರಮ

Taluknewsmedia.com

Taluknewsmedia.comಹೊಣಕೆರೆ ಹೋಬಳಿ ವ್ಯಾಪ್ತಿಯ ಗಂಗಸಮುದ್ರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟ ಅಂಗಡಿ ಮಾಲೀಕನ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆಗೆ ಬಂದ ಖಚಿತ ಮಾಹಿತಿಯ ಆಧಾರದಲ್ಲಿ ಪಿಎಸ್‌ಐ ಅವರು ಸಿಪಿಸಿ ಪ್ರದೀಪ್, ಸಿಪಿಸಿ ಪ್ರಕಾಶ್ ಹಾಗೂ ಚಾಲಕ ಚೇತನ ಅವರೊಂದಿಗೆ ಗಂಗಸಮುದ್ರಕ್ಕೆ ತೆರಳಿದರು. ಮಾರ್ಗಮಧ್ಯೆ ಇಬ್ಬರು ಪಂಚಾಯತ್ ಸದಸ್ಯರನ್ನು ಕೂಡ ಕರೆದುಕೊಂಡು ತೆರಳಿದ ಪೊಲೀಸರು ಬಾಬು ಪ್ರಾವಿಜನ್ ಸ್ಟೋರ್ ಬಳಿ ದಾಳಿ ನಡೆಸಿದರು. ದಾಳಿಯ ವೇಳೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ನಾಲ್ಕು ಮಂದಿ ಮದ್ಯಪಾನ ಮಾಡುತ್ತಿರುವುದನ್ನು ಕಂಡು, ಆ ವ್ಯಕ್ತಿಗಳು ಸ್ಥಳದಿಂದ ಓಡಿ ಹೋಗಿದರು. ನಂತರ ಅಂಗಡಿಯಲ್ಲಿ ಹಾಜರಿದ್ದ ಮಾಲೀಕ ಲೋಕೇಶ್ ಜಿ.ಡಿ (28) ಅವರನ್ನು ವಿಚಾರಿಸಲಾಯಿತು. ಅವರು ಮದ್ಯಪಾನಕ್ಕೆ ಸ್ಥಳ ನೀಡಿದ್ದನ್ನು ಒಪ್ಪಿಕೊಂಡು, ಮದ್ಯಪಾನ ಮಾಡಿದವರು ಯಾರು ಎಂಬುದು ಅವರಿಗೆ ತಿಳಿಯದು ಎಂದು ತಿಳಿಸಿದರು. ಪೋಲೀಸರು ಸ್ಥಳ ಪರಿಶೀಲನೆ…

ಮುಂದೆ ಓದಿ..
ಸುದ್ದಿ 

ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ 11 ಹಸುವಿನ ಕರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಆರೋಪಿಗಳು ಬಂಧನ

Taluknewsmedia.com

Taluknewsmedia.comದೇವಲಾಪುರ ಹೋಬಳಿಯ ಕುಂಟಾನಕೊಪ್ಪಲು ಗ್ರಾಮ ಗೇಟ್ ಬಳಿ ಸಂಭವಿಸಿದ ಕಾರು ಅಪಘಾತದಿಂದ ಹಸುವಿನ ಕರುಗಳ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ನಾಗಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಾಗಮಂಗಲ ಕಡೆಯಿಂದ ಹುಲಿಯೂರುದುರ್ಗ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು (ನಂ. ಕೆಎ 01 ಎಂಡಿ 9542) ನಿಗದಿತ ವೇಗ ಮೀರಿ ಅಜಾಗರೂಕತೆಯಿಂದ ಚಾಲನೆ ಮಾಡಲಾಗಿದ್ದು, ಕುಂಟಾನಕೊಪ್ಪಲು ಗೇಟ್ ಬಳಿ ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆ ಕುರಿತು ಮಾಹಿತಿ ಪಡೆದ ನಾಗಮಂಗಲ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಜೆ ಅವರು ಠಾಣೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಕಾರಿನೊಳಗೆ ಸುಮಾರು ಒಂದು ತಿಂಗಳೊಳಗಿನ 11 ಹಸುವಿನ ಕರುಗಳನ್ನು ಪತ್ತೆಹಚ್ಚಲಾಯಿತು. ಈ ಕರುಗಳ ಬಾಯಿ ಮತ್ತು ಕಾಲುಗಳನ್ನು ದಾರಯಿಂದ ಕಟ್ಟಲಾಗಿದ್ದು, ಅವುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿತ್ತು. ಪೊಲೀಸರು ಸ್ಥಳದಲ್ಲಿದ್ದ ಇಬ್ಬರನ್ನು ಬಂಧಿಸಿದ್ದು, ಆರೋಪಿತರನ್ನು…

ಮುಂದೆ ಓದಿ..
ಅಂಕಣ 

ಒಂದು ಕಹಿ ನೆನಪು ಮತ್ತು ಎಚ್ಚರಿಕೆ…..

Taluknewsmedia.com

Taluknewsmedia.comಜೂನ್ 25 – 1975,ಜೂನ್ 25 – 2025….ಸರಿಯಾಗಿ 50 ವರ್ಷಗಳ ಹಿಂದೆ…..ತುರ್ತು ಪರಿಸ್ಥಿತಿ ( ಎಮರ್ಜೆನ್ಸಿ ) ಜಾರಿಯಾದ ದಿನ…… ಸ್ವತಂತ್ರ ಭಾರತದ, ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ ರಾಜಕೀಯ ಇತಿಹಾಸದಲ್ಲಿ ಕೆಲವೇ ಅತ್ಯಂತ ಕಹಿ ಘಟನೆಗಳಲ್ಲಿ ರಾಷ್ಟ್ರಪತಿಗಳು ಸಹಿ ಹಾಕಿದ ಈ ದಿನವೂ ಒಂದು. ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ಅಪಾಯವಿದೆ ಎಂಬ ನೆಪದಿಂದ, ತಮ್ಮ ಅಧಿಕಾರ ಉಳಿಸಿಕೊಳ್ಳಲು ಈ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು….. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸದಸ್ಯರುಗಳು ಅತ್ಯಂತ ಗಂಭೀರವಾಗಿ ಒಂದು ವಿಷಯವನ್ನು ಸಂವಿಧಾನದಲ್ಲಿ ಸೇರಿಸಿರುತ್ತಾರೆ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ನಿಜವಾಗಲೂ ದುಷ್ಟ ಶಕ್ತಿಗಳಿಂದ ಅತ್ಯಂತ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾದಾಗ ದೇಶವನ್ನು ರಕ್ಷಿಸಲು ಈ ಒಂದು ಸ್ವಯಂ ವಿವೇಚನೆಯ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿ: ಎಮ್.ಡಿ.ಎಮ್.ಎ ಮಾದಕ ವಸ್ತು ವಶಪಡಿಕೆ – ಆರೋಪಿತರ ಬಂಧನ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 24: ದಿನಾಂಕ 22.06.2025 ರಂದು ಮಧ್ಯಾಹ್ನ 2-15 ಗಂಟೆ ಸುಮಾರಿಗೆ ಹುಬ್ಬಳ್ಳಿಯ ವಿದ್ಯಾನಗರದ ಕಲ್ಯಾಣನಗರದಲ್ಲಿರುವ ಗೋಲ್ಡನ್ ಸ್ಟಾರ್ ಅಪಾರ್ಟ್‌ಮೆಂಟ್‌ನ ಎಫ್-2 ಮನೆನಲ್ಲಿ ನಿಷೇಧಿತ ಮಾದಕ ವಸ್ತುವಿನ ಸಂಬಂಧ ಕಾರ್ಯಾಚರಣೆ ನಡೆಸಲಾಯಿತು.ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ, ಆರೋಪಿತರು ಸಂಬಂಧಪಟ್ಟ ಸ್ಥಳದಲ್ಲಿ ನಿಷೇಧಿತ ಎಮ್.ಡಿ.ಎಮ್.ಎ ಮಾದಕ ವಸ್ತುವನ್ನು ತಮ್ಮ ವಶದಲ್ಲಿ ಇಟ್ಟುಕೊಂಡು ಸೇವನೆ ಮಾಡುವ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.ಫಿರ್ಯಾದಿದಾರರು ಹಾಗೂ ಸಿಬ್ಬಂದಿ ಸದಸ್ಯರು ಸೇರಿ ತಕ್ಷಣದ ದಾಳಿಯಲ್ಲಿ ಎಮ್.ಡಿ.ಎಮ್.ಎ ಮಾದಕ ವಸ್ತು ಒಟ್ಟು 43.08 ಗ್ರಾಂ ತೂಕದ ಮೊತ್ತ – ರೂ. 2,19,000/- ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿತರ ಬಳಿ ಇದ್ದ ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ.ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಪರವಾಗಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೀತಾ ಇದೆ. ವರದಿ : ವಿಜಯಕುಮಾರ…

ಮುಂದೆ ಓದಿ..