ವಿವಾಹದ ನಂತರ ಮಹಿಳೆಗೆ ದೈಹಿಕ, ಮಾನಸಿಕ ಹಿಂಸೆ: ವರದಕ್ಷಿಣೆಗೆ ಬಲವಂತ, ಕೊನೆಗೆ ವಿಷ ಸೇವನೆ.
Taluknewsmedia.com ನಾಗಮಂಗಲ ತಾಲ್ಲೂಕಿನ ಸುಖಧರೆ ಗ್ರಾಮದ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಗಂಡ ಹಾಗೂ ಗಂಡನ ಕುಟುಂಬದವರಿಂದ ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಪೀಡೆಗೆ ಒಳಗಾಗಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಸುಮಾ ಎಂ ಎಸ್ ಅವರ ಮಹಿಳೆಯು 2022ರಲ್ಲಿ ಸುನೀಲ್.ಎಸ್.ಎನ್ ಎಂಬವರೊಂದಿಗೆ ವಿವಾಹವಾದ ಬಳಿಕ, ಪ್ರಾರಂಭದಲ್ಲಿ ಮೂರು ತಿಂಗಳ ಕಾಲ ಸಹಜ ದಾಂಪತ್ಯ ಜೀವನ ನಡೆಸಿದರೂ ನಂತರದಿಂದವೇ ಅವರ ಅತ್ತೆ ಹಾಗೂ ಮಾವನಿಂದ ವರದಕ್ಷಿಣೆಗೆ ಒತ್ತಡ ಹೆಚ್ಚಾಗಿತ್ತು. ವರದಕ್ಷಿಣೆಗಾಗಿ ಬೈದು, ಅವಮಾನಿಸುವುದರ ಜೊತೆಗೆ, ಗಂಡನೂ ಸಹ ಜಮೀನು ಹೆಸರಿನಲ್ಲಿ ಬರೆಸಿಕೊಳ್ಳುವಂತೆ ಬಲವಂತ ಮಾಡಿದ ಬಗ್ಗೆ ಅವರು ದೂರಿನಲ್ಲಿ ತಿಳಿಸಿದ್ದಾರೆ.ಇದೇ ಹಿನ್ನೆಲೆಯಲ್ಲಿ ಪತ್ನಿ ವಿರುದ್ದ ಹಲ್ಲೆ ನಡೆಸಿದ ಸಂದರ್ಭ, ಮಾನಸಿಕವಾಗಿ ಸಹಿಸಲಾಗದೆ ವಿಷ ಸೇವಿಸಿದ ಮಹಿಳೆಯನ್ನು ಗಂಡನೇ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಬಳಿಕ, ಗಂಡನ ಕುಟುಂಬದಿಂದ ದೂರವಿರುವ ವೇಳೆ, ಪತ್ನಿಗೆ ವಿಚ್ಛೇದನ ನೋಟಿಸ್ ಕಳಿಸಲಾಗಿದೆ ಹಾಗೂ ಬಟ್ಟೆಗಳನ್ನು ಮನೆ…
ಮುಂದೆ ಓದಿ..
