ಸುದ್ದಿ 

ವಕೀಲೆಯ ವಿರುದ್ಧ ಜಾತಿ ನಿಂದನೆ, ಮಾನಹಾನಿ ಹಾಗೂ ಬ್ಲಾಕ್‌ಮೇಲ್ ಮೂರು ಮಹಿಳೆಯರ ವಿರುದ್ಧ ದೂರು

Taluknewsmedia.com

Taluknewsmedia.comಬೆಂಗಳೂರು, ಜುಲೈ 3 : 2025 ನಗರದ ಪ್ರಖ್ಯಾತ ವಕೀಲೆಯಾಗಿರುವ ಶ್ರೀಮತಿ ಜಿ. ತೇಜಸ್ವಿನಿ ಅವರು ತಮ್ಮ ಮೇಲೆ ನಡೆದಿರುವ ಜಾತಿ ನಿಂದನೆ, ಮಾನಹಾನಿ, ಮತ್ತು ಹಣದ ಬೇಡಿಕೆ ಹಾಗೂ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಮತಿ ಕೀರ್ತಿ ಎಸ್. ಸರಸ್ವತಿ, ಅವರ ತಾಯಿ ಸ್ವಾತಿ ಸುರೇಶ್, ಮತ್ತು ಮತ್ತೊಬ್ಬರು ಸಾವಿತ್ರಿ ಮೂರ್ತಿ ಎಂಬವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೊಡಿಗೆಹಳ್ಳಿ ಪೊಲೀಸ್ ದೂರು ದಾಖಲಿಸಿದ್ದಾರೆ. ತೇಜಸ್ವಿನಿ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ವಕೀಲ ವೃತ್ತಿಯಲ್ಲಿ ವಾದ ಪ್ರಾರಂಭಿಸಿದ ಬಳಿಕ, 2024ರ ಅಕ್ಟೋಬರ್ 24ರಂದು ಶ್ರೀಮತಿ ಕೀರ್ತಿ ಅವರ ಪರವಾಗಿ ಎಂ.ಸಿ. ನಂ-1505/2020ರಲ್ಲಿ ಕೋರ್ಟ್‌ನಲ್ಲಿ ವಕಾಲತ್ ಹಾಕಿದ್ದರು. ಅವರು ಅವರು ಕೇಸಿನಲ್ಲಿ ಕೆಲವೊಂದು ಅರ್ಜಿಗಳನ್ನು ಸಲ್ಲಿಸಿ, ಕ್ರಿಮಿನಲ್ ಕೇಸ್ ವಾಪಸ್ ಪಡೆಯಲು ಸಹಾಯ ಮಾಡಿದ್ದರು. ಅವರ ಆರೋಗ್ಯದ ದೃಷ್ಟಿಯಿಂದ ಧ್ಯಾನ ಮಾಡಬೇಕು, ಪೆರ್ಸನಲ್ ಆಗಿ ಮುಂದೆ…

ಮುಂದೆ ಓದಿ..
ಸುದ್ದಿ 

ಬಿಬಿ ಸರ್ವಿಸ್ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಯು ಮತ್ತು ಪುಟಪಾತ್‌ ಅನ್ನು ಆವರಿಸಿಕೊಂಡ ಗ್ಯಾರೇಜ್ – ಸಾರ್ವಜನಿಕರಿಗೆ ತೀವ್ರ ಅಡಚಣೆ

Taluknewsmedia.com

Taluknewsmedia.comಬೆಂಗಳೂರು, 28 ಜೂನ್ 2025:ನಗರದ ಬಿಬಿ ಸರ್ವಿಸ್ ರಸ್ತೆಯ ರೈತ ಸಂತೆಯ ಬಸ್ ನಿಲ್ದಾಣದಿಂದ ಕೋಗಿಲು ಕ್ರಾಸ್ ಸಿಗ್ನಲ್ ತನಕ ಇರುವ ಸಾರ್ವಜನಿಕ ರಸ್ತೆಯ ಮೇಲೆ ಮತ್ತು ಪುಟಪಾತ್‌ ನಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸಿ ದುರಸ್ತಿಗೆ ಹಾಕುತ್ತಿರುವ ವಿ.ಎಚ್ ಕಾರ್ ಗ್ಯಾರೇಜ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಬ್ರಾ ಗಸ್ತು ಕರ್ತವ್ಯದಲ್ಲಿ ನೇಮಿಸಲಾದ ಯಲಹಂಕ ಸಂಚಾರಿ ಪೊಲೀಸ್ ಸಿಬ್ಬಂದಿ ಅವರು ಸಂಜೆ 6.15ರ ಸುಮಾರಿಗೆ ಗಸ್ತು ಮಾಡುತ್ತಿದ್ದಾಗ ಈ ಅಕ್ರಮ ದೃಶ್ಯ ಕಂಡುಬಂದಿದೆ. ಗ್ಯಾರೇಜ್ ಮಾಲೀಕರು ಸಾರ್ವಜನಿಕ ಓಡಾಟಕ್ಕೆ ಅಡ್ಡಿಯಾಗುವ ರೀತಿಯಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ವ್ಯಾಪಿಸಿಕೊಂಡು ದುರಸ್ತಿ ಕಾರ್ಯ ನಡೆಸುತ್ತಿದ್ದು, ಇದು ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಯಲಹಂಕ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬಾರದಂತೆ ಗ್ಯಾರೇಜ್ ಮಾಲೀಕರಿಗೆ ಮೌಖಿಕ ಎಚ್ಚರಿಕೆ ನೀಡಲಾಗಿದ್ದು, ನೋಟಿಸ್ ಸಹ ನೀಡಲಾಗಿದೆ. ಆದರೂ ಯಾವುದೇ ಬದಲಾವಣೆ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಮನೆಗೆ ನುಗ್ಗಿ ಲ್ಯಾಪ್‌ಟಾಪ್, ಡಾಕ್ಯುಮೆಂಟ್ ಸೇರಿದಂತೆ ಮೌಲ್ಯವಾದ ವಸ್ತುಗಳ ಕಳವು

Taluknewsmedia.com

Taluknewsmedia.comಬೆಂಗಳೂರು, ಜೂನ್ 30:ನಗರದ ನಿವಾಸಿಯೊಬ್ಬರು ತಮ್ಮ ಮನೆಗೆ ಕಳ್ಳರು ನುಗ್ಗಿ ಸುಮಾರು ಮೂರು ಲಕ್ಷ ರೂಪಾಯಿಗಳ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂಬ ದೂರು ದಾಖಲಾಗಿದೆ. ಸತ್ಯಂ ರಾಜ್ ಅವರ ಹೇಳಿಕೆಯಂತೆ, ಅವರು ಜೂನ್ 25, 2025 ರಂದು ರಾತ್ರಿ 11.50ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದು ಮನೆಯ ಬಾಗಿಲು ತೆರೆಯುವ ವೇಳೆ ಕೀ ಅನ್ನು ನೆಲದ ಮೇಲೆ ಇಡಲಾಗಿತ್ತು. ಬೆಳಗ್ಗೆ, ಜೂನ್ 26 ರಂದು ಸುಮಾರು 9.00 ಗಂಟೆಗೆ ಎದ್ದು ನೋಡಿದಾಗ ಆಫೀಸ್ ಬ್ಯಾಗ್, HP Pavilion ಲ್ಯಾಪ್‌ಟಾಪ್ (ಸೀರಿಯಲ್ ನಂ. 5CD207G0F8), ವ್ಯಾಲೆಟ್, ಡಾಕ್ಯುಮೆಂಟ್‌ಗಳು, ಚೆಕ್ ಬುಕ್ ಮತ್ತು ವೈರ್‌ಲೆಸ್ ಇಯರ್‌ಬಡ್ಸ್ ನಾಪತ್ತೆಯಾಗಿರುವುದು ಗೊತ್ತಾಗಿದೆ. ಆಫೀಸ್ ಬ್ಯಾಗಿನಲ್ಲಿ ಪ್ರಮುಖ ದಾಖಲೆಪತ್ರಗಳು ಮತ್ತು ನಗದು ಹಣವೂ ಇದ್ದು, ಒಟ್ಟು ಕಳವಾದ ವಸ್ತುಗಳ ಅಂದಾಜು ಮೌಲ್ಯ ರೂ. 3,00,000 ಆಗಿದೆ ಎಂದು ಅವರು ತಿಳಿಸಿದ್ದಾರೆ.ಬಾಗಲೂರು ಪೊಲೀಸ್…

ಮುಂದೆ ಓದಿ..
ಸುದ್ದಿ 

ಕಂಬದಹಳ್ಳಿಯಲ್ಲಿ ಅಕ್ರಮ ಜಾನುವಾರು ಸಾಗಾಣಿಕೆ ಪತ್ತೆ: ಮೂರು ಮಂದಿ ವಿರುದ್ಧ ಪ್ರಕರಣ

Taluknewsmedia.com

Taluknewsmedia.comಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಲ್ಲಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ, ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಹಿಂದ್ರಾ ಬೊಲೆರೂ ಮ್ಯಾಕ್ಸ್ ಪಿಕಪ್ ಗೂಡ್ಸ್ ವಾಹನವೊಂದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ.ಮಾರುತಿ ಪಿಎಸ್‌ಐ ಅವರು ಸ್ಥಳೀಯ ಬಾತ್ಮಿದಾರರಿಂದ ಪಡೆದ ಮಾಹಿತಿಯಂತೆ, ಮಹೀಂದ್ರ ಬೊಲೆರೊ ಮ್ಯಾಕ್ಸ್ ಪಿಕಪ್ (ನಂ. ಕೆಎ-53 ಎಬಿ-6149) ವಾಹನದಲ್ಲಿ ಜಾನುವಾರುಗಳನ್ನು ತುಂಬಿಕೊಂಡು ಶ್ರವಣಬೆಳಗೊಳದ ದಾರಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ಕೇಶವೇಗೌಡ, ಪರಶುರಾಮ್ ರಾಥೋಡ್ ಮತ್ತು ಚಾಲಕ ಶೇಷಗಿರಿಯವರ ಸಹಾಯದಿಂದ ತಪಾಸಣೆಗೆ ಮುಂದಾದಾಗ, ಆರೋಪಿಗಳು ವಾಹನ ನಿಲ್ಲಿಸಿ ಓಡಲು ಯತ್ನಿಸಿದರು. ಆದರೆ ಅವರನ್ನು ಸ್ಥಳದಲ್ಲಿಯೇ ಬಂಧಿಸಲಾಯಿತು.ವಾಹನದ ಹಿಂಭಾಗವನ್ನು ಪರಿಶೀಲಿಸಿದಾಗ, 03 ಎಮ್ಮೆಗಳು, 01 ಎಮ್ಮೆ ಕರು, 01 ಹೆಚ್.ಎಫ್ ಹಸು ಮತ್ತು 01 ಜೆರ್ಸಿ ಹಸು, ಒಟ್ಟು 06 ಜಾನುವಾರುಗಳು ಕ್ರೂರವಾಗಿ ತುಂಬಲಾಗಿದ್ದು, ಆಹಾರ ಮತ್ತು…

ಮುಂದೆ ಓದಿ..
ಸುದ್ದಿ 

ಬೈಕ್ ಡಿಕ್ಕಿ ಅಪಘಾತ: ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲು – ಬಸವೆಗೌಡ ರಿಗೆ ಗಂಭೀರ ಗಾಯ

Taluknewsmedia.com

Taluknewsmedia.comಮಂಡ್ಯ-ನಾಗಮಂಗಲ ರಸ್ತೆಯ ಕರಡಹಳ್ಳಿ ಗೇಟ್ ಹತ್ತಿರ ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರಾದ ಬಸವೇಗೌಡರಿಗೆ ತಲೆ, ಎದೆ, ಬಲಗಾಲು ಮತ್ತು ಸೊಂಟಕ್ಕೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಎ.ಸಿ.ಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿ ಕುಮಾರಸ್ವಾಮಿ ಎಸ್ ಅವರು ನೀಡಿದ ದೂರಿನ ಪ್ರಕಾರ, ಅಪಘಾತ ಸಂಭವಿಸಿದ ವೇಳೆ ಅವರು ಅಂಗಡಿಯ ಬಳಿಯಲ್ಲಿ ಸಹಗ್ರಾಮಸ್ಥ ಮಹೇಶ್ ಅವರೊಂದಿಗೆ ನಿಂತುಕೊಂಡು ಮಾತನಾಡುತ್ತಿದ್ದರು. ಅದೇ ಸಮಯದಲ್ಲಿ ಮಂಡ್ಯ ಕಡೆಯಿಂದ ಬಸವೇಗೌಡರು ಪ್ಯಾಷನ್ ಪ್ರೋ ಬೈಕ್ (ನಂ. ಕೆಎ-54 F-9070) ಮೇಲೆ ನಿಯಮಾನುಸಾರ ರಸ್ತೆಯ ಎಡಭಾಗದಲ್ಲಿ ಬಂದು ಬಲದಿಕ್ಕಿಗೆ ತಿರುಗುತ್ತಿದ್ದಾಗ, ಮತ್ತೊಂದು ಬೈಕ್ (ಹೀರೋ ಹೊಂಡಾ ಸ್ಟೇಡರ್, ನಂ. ಕೆಎ-16 ET-1522) ಅತೀವೇಗದಲ್ಲಿ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯಿಂದ ಇಬ್ಬರೂ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡರು. ಅಪಘಾತದ ತಕ್ಷಣ ಅಲ್ಲಿಯ ಜನರು…

ಮುಂದೆ ಓದಿ..
ಸುದ್ದಿ 

ಆನೇಕಲ್: ಜಮೀನಿನ ದಾರಿಗೆ ಅಡ್ಡಕಟ್ಟು – ಸಂಬಂಧಿಕರಿಂದ ಬೈಗುಳ, ಬೆದರಿಕೆ ಆರೋಪ

Taluknewsmedia.com

Taluknewsmedia.comಆನೇಕಲ್ ಟೌನ್‌ನ ತಿಮ್ಮರಾಯಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಜಮೀನಿನ ದಾರಿಗೆ ಸಂಬಂಧಿಸಿದಂತೆ ನಡೆದ ಗಲಾಟೆಯ ಕುರಿತು ಭರತ್ ಬಿನ್ ಬಾಸ್ಕರ್ ಎಂಬುವರು ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಸಂಬಂಧಿಕರಿಂದ ಬೈಗುಳ, ಅಡ್ಡಕಟ್ಟು ಮತ್ತು ಪ್ರಾಣ ಬೆದರಿಕೆ ಆರೋಪಿಸಿದ್ದಾರೆ. ಭರತ್ ಬಿನ್ ಭಾಸ್ಕರ ರವರ ಪ್ರಕಾರ, ಆನೇಕಲ್ ಗ್ರಾಮಾಂತರದ ಸರ್ವೆ ನಂ 148/2ರಲ್ಲಿ 0.08 ಗುಂಟೆ ಜಮೀನಿನ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಮುಂದುವರೆದಿದೆ. ಈ ಜಾಗದಲ್ಲಿ ತಮಗೂ ಬಾಗಾಂಶವಿದ್ದು, ತಮ್ಮ ಮನೆಗೆ ಹೋಗುವ ದಾರಿ ಈ ಜಮೀನಿನಲ್ಲಿಯೇ ಇರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಸಂಬಂಧಿಕರಾದ ಶ್ರೀದರ್, ಅವರ ಪತ್ನಿ ಕಾರ್ತಿಕ್ ವೇಣಿ, ಶ್ರೀನಾಥ್ ಪತ್ನಿ ವಿಜಯ ಮತ್ತು ಪ್ರಸಾದ್ ಪತ್ನಿ ಕವಿತಾ ಸೇರಿ, ಈ ದಾರಿಗೆ ಜೆ.ಸಿ.ಬಿ ಯಂತ್ರದ ಮೂಲಕ ಅಡ್ಡಕಟ್ಟು ಹಾಕಿದ್ದು, ದಾರಿ ತಡೆದಿದ್ದಾರೆ. ಮೇಲೆಮೇಲಾಗಿ, ದಾರಿ ಕೇಳಿದ ಕಾರಣಕ್ಕೆ ದುಷ್ಪ್ರಯೋಗಪೂರಿತ ಭಾಷೆಯಲ್ಲಿ ಬೈದು,ಭರತ್ ರವರ ತಾಯಿಯವರಿಗೂ…

ಮುಂದೆ ಓದಿ..
ಸುದ್ದಿ 

ರಸ್ತೆ ಅಪಘಾತ: ಶಿಕ್ಷಕಿ ಮತ್ತು ಸಹೋದ್ಯೋಗಿಗೆ ತೀವ್ರ ಗಾಯ – ಲಾರಿ ಚಾಲಕರ ವಿರುದ್ಧ ಪ್ರಕರಣ ದಾಖಲು

Taluknewsmedia.com

Taluknewsmedia.comಚಿಕ್ಕಬಿದಿರುಕಲ್ಲು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಸ್‌.ಎನ್‌.ಎಸ್ ಪಬ್ಲಿಕ್ ಶಾಲೆಯ ಶಿಕ್ಷಕಿ ಮತ್ತು ಸಹೋದ್ಯೋಗಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ರಾ.ಹೆ. 4ರ 8ನೇ ಮೈಲಿನ ಶೋಭಾ ಅಪಾರ್ಟ್ಮೆಂಟ್ ಎದುರು ಸಂಭವಿಸಿದೆ. ಶ್ರೀಮತಿ ಆಶಾರಾಣಿ ಎಚ್.ಸಿ (36), ನಂದಿನಿ ಲೇಔಟ್ 4ನೇ ಬ್ಲಾಕ್ ನಿವಾಸಿ ಹಾಗೂ ಶಾಲಾ ಶಿಕ್ಷಕಿ, ಅವರು ತಮ್ಮ ಯಮಹಾ ಸ್ಕೂಟರ್ (ನಂ. KA-03-HT-0464)ನಲ್ಲಿ ಸಹೋದ್ಯೋಗಿ ಆಯಾ ಶಾರಧಾ (45) ಅವರನ್ನು ಹಿಂಬದಿ ಸವಾರಳಾಗಿ ಕೂರಿಸಿಕೊಂಡು, ಸರ್ಕಾರಿ ಪಠ್ಯಪುಸ್ತಕ ತರಲೆಂದು ಚಿಕ್ಕಬಿದಿರುಕಲ್ಲು ಸರ್ಕಾರಿ ಪ್ರೌಢಶಾಲೆಗೆ ತೆರಳುತ್ತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಶೋಭಾ ಅಪಾರ್ಟ್ಮೆಂಟ್ ಎದುರು ಸವಾರಿಯಲ್ಲಿದ್ದಾಗ, ಹಿಂದಿನಿಂದ ಅತೀ ವೇಗವಾಗಿ ಹಾಗೂ ನಿರ್ಲಕ್ಷತೆಯಿಂದ ಚಾಲನೆ ಮಾಡುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ (ನಂ KA-01-AL-6959) ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಝಟ್ಟಿನಿಂದ…

ಮುಂದೆ ಓದಿ..
ಸುದ್ದಿ 

ಮರಿಯಣ್ಯಪಾಳ್ಯದಲ್ಲಿ ಅಪಘಾತ: ಹಿರಿಯ ನಾಗರಿಕನಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲು

Taluknewsmedia.com

Taluknewsmedia.comಮರಿಯಣ್ಯಪಾಳ್ಯದ ಸೆಂಟ್ ಪೀಟರ್ ಚರ್ಚ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತರುಣ್ ಕುಮಾರ್ ಮಂಡಲ್ (63) ಎಂಬ ಹಿರಿಯ ನಾಗರಿಕ ಗಾಯಗೊಂಡ ಘಟನೆ ನಡೆದಿದೆ. ಶ್ರೀ ಶಾಂತನ್ ಮೋದಕ್ (32) ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 26.06.2025 ರಂದು ಸಂಜೆ 7.30 ಗಂಟೆ ಸುಮಾರಿಗೆ ತರುಣ್ ಕುಮಾರ್ ಮಂಡಲ್ ಅವರು ವಾಕಿಂಗ್ ಹೋಗುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ಕೊನೆಯ ಸಂಖ್ಯೆಯು 5441 ಆಗಿರುವ ದ್ವಿಚಕ್ರ ವಾಹನದ ಸವಾರನು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತರುಣ್ ಕುಮಾರ್ ಮಂಡಲ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ನಂತರ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ತರುಣ್ ಕುಮಾರ್ ಅವರನ್ನು ಸಾರ್ವಜನಿಕರ ನೆರವಿನಿಂದ ತಕ್ಷಣ ಆಸ್ಟರ್ CMI ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರ ಪ್ರಕಾರ ಅವರಿಗೆ ಎಡಭಾಗದ ಸೊಂಟದ ಪೆಲ್ವಿಕ್ ಭಾಗದಲ್ಲಿ ಗಂಭೀರ ಪೆಟ್ಟುಬಿದ್ದು…

ಮುಂದೆ ಓದಿ..
ಸುದ್ದಿ 

ಅಜಾಗರೂಕ ಬೈಕ್ ಸವಾರನಿಂದ ನಾಕಾಬಂದಿ ವೇಳೆ ಅಪಘಾತ – ಎ.ಎಸ್.ಐ ಸೇರಿದಂತೆ ಮೂವರಿಗೆ ಗಾಯ

Taluknewsmedia.com

Taluknewsmedia.comನಗರದ ವೀರಣ್ಯನಪಾಳ್ಯ ಜಂಕ್ಷನ್ ಬಳಿ ನಾಕಾಬಂದಿ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಎ.ಎಸ್.ಐ, ಪಿ.ಸಿ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಬೆಳಗಿನ ಜಾವ 03:00 ಗಂಟೆ ವೇಳೆಗೆ, ಎ.ಎಸ್.ಐ ರಂಗೇಗೌಡ, ಪಿ.ಸಿ 20602 ಈರನಗೌಡ, ಮತ್ತು ಇನ್ನೋರ್ವ ಪೊಲೀಸ್ ಸಿಬ್ಬಂದಿ ನಾಕಾಬಂದಿ ಕರ್ತವ್ಯದಲ್ಲಿದ್ದರು. ಈ ವೇಳೆ, KL-55-D-5165 ಸಂಖ್ಯೆಯ ಮೋಟಾರ್ ಸೈಕಲ್ ಸವಾರನು ಹೆಲ್ಮೆಟ್ ಧರಿಸದೆ, ಇಬ್ಬರನ್ನು ಹಿಂಬದಿ ಕೂರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತಿದ್ದನು. ಆ ಸವಾರ ಡಿಕ್ಕಿ ಹೊಡೆದ ಪರಿಣಾಮ, ಮೂರೂ ಜನರು ಕೆಳಗೆ ಬಿದ್ದು ಗಾಯಗೊಂಡರು.ಎ.ಎಸ್. ಐ ರಂಗೇಗೌಡ,ಪಿ.ಸಿ ಮತ್ತು ಈರಣ್ಣ ಗೌಡ ರವರಿಗೆ ಎಡಗೈ, ಕತ್ತು, ಬೆನ್ನು, ಕಾಲುಗಳು ಹಾಗೂ ಮುಖಕ್ಕೆ ಪೆಟ್ಟಾಗಿದ್ದರೆ, ಸವಾರ ಮತ್ತು ಹಿಂಬದಿ ಸವಾರರು ಸಹ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಗಾಯಾಳುಗಳನ್ನು ತಕ್ಷಣವೇ ಈಶಾ ಆಸ್ಪತ್ರೆಗೆ ಮತ್ತು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯ ಕುರಿತಾಗಿ…

ಮುಂದೆ ಓದಿ..
ಸುದ್ದಿ 

ಬಿ.ಸಿ.ಎ ವಿದ್ಯಾರ್ಥಿನಿ ಕಾಣೆ – ತಾಯಿ ನೀಡಿದ ದೂರು

Taluknewsmedia.com

Taluknewsmedia.comನಗರದ ನಿವಾಸಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿರುವ ಮಹಿಳೆಯವರ ಮಗಳು, 19 ವರ್ಷದ ಅಕ್ಷಯ ಎಂ.ಎಸ್., ಕಳೆದ ಏಪ್ರಿಲ್ 9ರಂದು ಬೆಳಿಗ್ಗೆ 7:30ಕ್ಕೆ ಮನೆಯಿಂದ ಕಾಲೇಜಿಗೆ ಹೋಗಿದ್ದಾಗಿ ಹೇಳಿ ಹೊರಟ ಬಳಿಕ ಮರಳಿ ವಾಪಸ್ಸಾಗದೆ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಕ್ಷಯ, ಬೆಂಗಳೂರಿನ ಡಿಗ್ರಿ ಕಾಲೇಜೊಂದರಲ್ಲಿ ಬಿ.ಸಿ.ಎ (ಪ್ರಥಮ ವರ್ಷ) ವಿದ್ಯಾರ್ಥಿನಿಯಾಗಿದ್ದು, ತಾಯಿ ಬೆಳಿಗ್ಗೆ ಕೆಲಸಕ್ಕೆ ಹೋದ ಬಳಿಕ ಮಧ್ಯಾಹ್ನ 1 ಗಂಟೆಗೆ ಮನೆಗೆ ಬಂದು ನೋಡಿದಾಗ ಮಗಳು ಮನೆಯಲ್ಲಿರಲಿಲ್ಲ. ಕೂಡಲೇ ಫೋನ್ ಕರೆ ಮಾಡಿದಾಗ, ಆಕೆಯ ಮೊಬೈಲ್ ಸ್ವಿಚ್‌ಆಫ್ ಆಗಿದ್ದರಿಂದ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಅಕ್ಷಯ ರವರ ತಾಯಿ ಪಕ್ಕದ ಅಂಗಡಿಗಳು, ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಗದೆ, ಆತಂಕಗೊಂಡು ಕೊನೆಗೆ ಪೊಲೀಸರ ಮೊರೆಹೋದರು. ತಾಯಿ ನೀಡಿದ ದೂರಿನಂತೆ, ಅಕ್ಷಯ ಆಗಾಗ ಸ್ನೇಹಿತೆಯ ಮನೆಯಲ್ಲಿ ಉಳಿದುಮರಳಿ ಮನೆಗೆ ಬರುವ ಪ್ರವೃತ್ತಿ…

ಮುಂದೆ ಓದಿ..