ವಿದೇಶಿ ಪ್ರಜೆಗಳಿಂದ ಕೋಟ್ಯಂತರ ಮೌಲ್ಯದ ಮಾದಕ ವಸ್ತು ಜಪ್ತಿ: ಇಬ್ಬರು ಆರೋಪಿಗಳು ಬಂಧನ
Taluknewsmedia.comಬೆಂಗಳೂರು ಗ್ರಾಮಾಂತರ – 9 ಜುಲೈ 2025: ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಾನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹಿಸಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿ, ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ, ರಾಜಾನುಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ, 6 ಜುಲೈ 2025 ರಂದು ಮಧ್ಯಾಹ್ನ ನಡೆದಿದ್ದು, ಡೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಅನುಮತಿ ಪಡೆದು ಶೋಧನಾ ಕಾರ್ಯ ನಡೆದಿದೆ. ಬಂಧಿತ ಆರೋಪಿಗಳು: ಅಲಸೋನ್ಯೆ ಪೀಟರ್ ಒಬಿಯೋಮಾ, ವಯಸ್ಸು 35, ನೈಜೀರಿಯಾದವರು ಸಂಡೇ ವಿಜ್ಡಮ್ @ ಜಾನ್ ವಿಕ್ಟರ್ ಅಂಬೋಮೋ, ವಯಸ್ಸು 28, ನೈಜೀರಿಯಾದವರುಪೊಲೀಸರ ದಾಳಿ ವೇಳೆ ವಶಪಡಿಸಿಕೊಂಡ ವಸ್ತುಗಳು:2.82 ಕೆ.ಜಿ. Methamphetamine (MDMA) ಕ್ರಿಸ್ಟಲ್ – ಅಂದಾಜು ಮೌಲ್ಯ ₹4.2 ಕೋಟಿ200 ಗ್ರಾಂ…
ಮುಂದೆ ಓದಿ..
