ಚಿಕ್ಕಮಗಳೂರು: ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರು ಅರೆಸ್ಟ್ – 32 ಲಕ್ಷ ರೂ. ಮೌಲ್ಯದ ವಸ್ತುಗಳ ವಶ
Taluknewsmedia.comಚಿಕ್ಕಮಗಳೂರು: ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರು ಅರೆಸ್ಟ್ – 32 ಲಕ್ಷ ರೂ. ಮೌಲ್ಯದ ವಸ್ತುಗಳ ವಶ ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರಿಬ್ಬರನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹32 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಪೊಲೀಸ್ ಲೇಔಟ್ ಪ್ರದೇಶದ ನಿವಾಸಿ ಚೈತ್ರಾ ಅವರ ಮನೆಯಲ್ಲಿ ಜೂನ್ 18ರಿಂದ 20ರ ಅವಧಿಯಲ್ಲಿ ಈ ಕಳ್ಳತನ ನಡೆದಿತ್ತು. ಮನೆ ಖಾಲಿಯಾಗಿದ್ದ ವೇಳೆ ಬೀಗ ಮುರಿದು ಒಳನುಗ್ಗಿ ಕಳ್ಳರು 495 ಗ್ರಾಂ ಚಿನ್ನದಾಭರಣ, 1 ಕೆಜಿ 10 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ₹75,000 ನಗದು ಕದ್ದೊಯ್ದಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿ, ಚಡ್ಡಿ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಬಂಧಿಸಿದರು. ಬಂಧಿತರಿಂದ 170 ಗ್ರಾಂ ಚಿನ್ನದ ಗಟ್ಟಿ,…
ಮುಂದೆ ಓದಿ..
