ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್!
Taluknewsmedia.comಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ : ವಿಡಿಯೋ ವೈರಲ್! ಚಿತ್ರದುರ್ಗ ಜಿಲ್ಲೆಯ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ನೀರಿನ ಕ್ಯಾನ್ಗೆ ಎಣ್ಣೆ (ಮದ್ಯ) ಮಿಕ್ಸ್ ಮಾಡಿ ಕಚೇರಿಗೆ ತಂದಿದ್ದ ಸಿಬ್ಬಂದಿ, ಕಚೇರಿಯಲ್ಲೇ ಕುಡಿಯುತ್ತಾ ಪಾರ್ಟಿ ಮಾಡಿರುವುದು ಕ್ಯಾಮೆರಾಕ್ಕೆ ಸಿಕ್ಕಿದೆ. ಸೋರ್ಸ್‌ಗಳ ಪ್ರಕಾರ, ಸಿಬ್ಬಂದಿಯೋರ್ವ ಕಾರು ಖರೀದಿ ಮಾಡಿದ ಹಿನ್ನೆಲೆಯಲ್ಲಿ ಕಚೇರಿಯಲ್ಲೇ ಪಾರ್ಟಿ ಆಯೋಜಿಸಲಾಗಿತ್ತು. ಆದರೆ ಕಚೇರಿಯಂತಹ ಸರ್ಕಾರಿ ಸ್ಥಳದಲ್ಲೇ ಎಣ್ಣೆ ಪಾರ್ಟಿ ನಡೆದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡವಳಿಕೆಯನ್ನು ಖಂಡಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಮಳೆ ಸುರಿಯುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಪ್ರತಿಕ್ರಿಯಿಸಿ, “ಘಟನೆಯ ವಿಚಾರ ತಿಳಿದು, ಕಾರು ಚಾಲಕ ಸೇರಿ ಐವರು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಅಧೀಕ್ಷಕ ಸುನಿಲ್,…
ಮುಂದೆ ಓದಿ..
