ಉದ್ಯೋಗ ಭರವಸೆಯ ಹೆಸರಿನಲ್ಲಿ ಹಣ ವಸೂಲಿ: ನಾಲ್ವರ ವಿರುದ್ಧ ದೂರು ದಾಖಲು.
Taluknewsmedia.comಉದ್ಯೋಗ ನೀಡುವುದಾಗಿ ಭರವಸೆ ನೀಡಿ ಮಹಿಳೆಯಿಂದ ಹಣ ವಸೂಲಿ ಮಾಡಿ, ನಂತರ ಮೋಸ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನಟರಾಜ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಟರಾಜ್ ಅವರ ಪತ್ನಿಗೆ ದಿನಾಂಕ 12/06/2025 ರಂದು “ಟೆಕ್ ಟ್ರಿಕ್ ಪ್ರೈವೇಟ್ ಲಿಮಿಟೆಡ್” ಎಂಬ ಕಂಪನಿಯಿಂದ ವಾಟ್ಸ್‌ಆಪ್ ಮೂಲಕ ಸಂದೇಶವೊಂದು ಬಂದು, ಉದ್ಯೋಗಾವಕಾಶವಿದೆ ಎಂದು ತಿಳಿಸಿ ಮರುದಿನ ಕೋರಮಂಗಲದಲ್ಲಿರುವ ವಿಳಾಸಕ್ಕೆ ಸಂದರ್ಶನಕ್ಕೆ ಬರುವಂತೆ ಸೂಚಿಸಲಾಗಿತ್ತು. ಆ ದಂಪತಿ ಸೂಚಿಸಿದ ವಿಳಾಸಕ್ಕೆ ಹೋಗಿದಾಗ ಅಲ್ಲಿ “ಟೆಕ್ ಟ್ರಿಕ್ ಪ್ರೈವೇಟ್ ಲಿಮಿಟೆಡ್” ಇಲ್ಲದೇ “INFINOX INFO STARK SERVICE PVT LTD” ಎಂಬ ಕಂಪನಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂತು. ಕಂಪನಿಯ ಎಚ್.ಆರ್ ಕನಿಷ್ಕ ಎಂಬುವವರು ನಟರಾಜ್ ಪತ್ನಿಯ ಸಂದರ್ಶನ ನಡೆಸಿದ್ದು, 15 ದಿನಗಳಲ್ಲಿ 1500 ಫಾರಂಗಳನ್ನು ತುಂಬಬೇಕು, ಇದಕ್ಕಾಗಿ ₹15,000 ವೇತನ ನೀಡಲಾಗುವುದು…
ಮುಂದೆ ಓದಿ..
