ಕೋರಮಂಗಲದಲ್ಲಿ ಮಂಗಳಮುಖಿಯರ ಮೇಲೆ ಹಲ್ಲೆ: 6 ಜನರಿಂದ ಜೀವ ಬೆದರಿಕೆ.
Taluknewsmedia.comಬೆಂಗಳೂರು, ಜೂನ್ 21: ನಗರದ ಕೋರಮಂಗಲದ 5ನೇ ಬ್ಲಾಕ್ ಪ್ರದೇಶದಲ್ಲಿ ಇಬ್ಬರು ಮಂಗಳಮುಖಿಯರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳಮುಖಿಗಳಾದ ಜಾನು @ ಜುನೈದ್ ಹಾಗೂ ಶೀಫಾ ಎಂಬುವವರು ಈ ಘಟನೆಯಲ್ಲಿ ಬಲಿಯಾಗಿದ್ದು, ಇಬ್ಬರೂ ಕೂಡ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಾನುವು ನೀಡಿದ ಮಾಹಿತಿಯಂತೆ, ಜೂನ್ 18ರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಜಾನು ಮತ್ತು ಶೀಫಾ ಇಬ್ಬರೂ ಬದ್ಮಾಶ್ ಪಬ್ ಹತ್ತಿರ ರಸ್ತೆಯ ಪಕ್ಕ ನಿಂತಿದ್ದರು. ಈ ಸಂದರ್ಭದಲ್ಲಿ ಆಟೋದಲ್ಲಿ ಬಂದ ನಾಲ್ವರು ಯುವಕರು, ಒಬ್ಬ ಯುವತಿ ಮತ್ತು ಒಬ್ಬ ಮಂಗಳಮುಖಿಯು ಅಕ್ರಮವಾಗಿ ಅವರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾರೆ. ಮಂಗಳಮುಖಿಯರಿಗೆ ಕೈಗಳಿಂದ ಹಲ್ಲೆ ಮಾಡಿತಲೆಯನ್ನು ರಸ್ತೆಯಲ್ಲಿ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿದರೆಂದು ತಿಳಿಸಲಾಗಿದೆ. ಅದಲ್ಲದೆ, ಶೀಫಾಳ ಖಾಸಗಿ ಭಾಗಕ್ಕೆ ಹೊಡೆದು, “ಸೂಳೆ ಮುಂಡೆರೆ, ನಿಮ್ಮನ್ನು…
ಮುಂದೆ ಓದಿ..
