ಹೂಡಿಕೆ ಹೆಸರಿನಲ್ಲಿ ಆನ್‌ಲೈನ್ ವಂಚನೆ – ಮಹಿಳೆಯಿಂದ ₹1.96 ಲಕ್ಷ ವಂಚನೆ
Taluknewsmedia.comಅಮೃತಹಳ್ಳಿ ನಿವಾಸಿಯೊಬ್ಬರು ಆನ್‌ಲೈನ್ ವಂಚಕರಿಗೆ ₹1,96,800/- ಹಣವನ್ನು ಕಳೆದುಕೊಂಡಿರುವ ಘಟನೆ ಪ್ರಕರಣವಾಗಿ ದಾಖಲಾಗಿದೆ. ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಮೂಲಕ ಸಂಪರ್ಕ ಸಾಧಿಸಿ “ಸ್ಪಾರ್ಕ್ ಹೂಡಿಕೆ” ಎನ್ನುವ ಹೆಸರಿನಲ್ಲಿ ಆಕೆಯನ್ನು ಮೋಸಗೊಳಿಸಲಾಗಿದೆ. ಶ್ವೇತಾ ಸಂಜೀವಯ್ಯ ರವರು ನೀಡಿದ ದೂರಿನ ವಿವರಗಳ ಪ್ರಕಾರ, 14/06/2025 ರಂದು ಬೆಳಿಗ್ಗೆ 11:00 ಗಂಟೆಗೆ ವಾಟ್ಸಾಪ್ ಮೂಲಕ ವಿದೇಶಿ ನಂಬರಿನಿಂದ ಒಂದು ಸಂದೇಶ ಬಂದಿದೆ. ‘ಹಣ ಗಳಿಸಲು ಅವಕಾಶ’ ಎಂಬ ಆಮಿಷದೊಂದಿಗೆ, ಪ್ರಾರಂಭದಲ್ಲಿ ರೆಸ್ಟೋರೆಂಟ್‌ಗಳಿಗೆ ವಿಮರ್ಶೆ ಬರೆಯುವ ಕೆಲಸ ನೀಡಲಾಗುತ್ತಿತ್ತು. ನಂತರ “ಸೀನಿಯರ್ ಹೂಡಿಕೆ ಗುಂಪು” ಎಂಬ ಟೆಲಿಗ್ರಾಂ ಗುಂಪಿಗೆ ಸೇರಿಸಿ ಹೆಚ್ಚಿನ ಹಣ ಹೂಡಿಕೆಗೆ ಪ್ರೇರಣೆ ನೀಡಲಾಯಿತು. ಶ್ವೇತಾ ಸಂಜೀವಯ್ಯ ರವರು ದಿನಾಂಕ 14 ರಿಂದ 16 ಜೂನ್ 2025ರೊಳಗೆ ತಮ್ಮ ಖಾತೆಯಿಂದ HDFC ಬ್ಯಾಂಕಿನ ಶ್ವೇತಾ ಎಂಬ ಹೆಸರಿನ ಖಾತೆಗೆ ₹1,96,800/- ಹಣವನ್ನು UPI ಹಾಗೂ NEFT ಮುಖಾಂತರ ವರ್ಗಾಯಿಸಿದ್ದಾರೆ. ಹಣ…
ಮುಂದೆ ಓದಿ..
