ವರದಿಗಾರಿಕೆಗೂ ರೋಬೋಟ್ಗಳು ಲಗ್ಗೆಯಿಡುವ ಕಾಲ ಸನ್ನಿಹಿತ : ನಿರ್ಮಲಾನಂದಶ್ರೀ
Taluknewsmedia.comನಾಗಮಂಗಲ : ಪತ್ರಕರ್ತರು ಗುಡ್ಡಗಾಡು ಕಣಿವೆ ಯುದ್ಧ ಪ್ರವಾಹ ಭೀತಿಯ ಪ್ರದೇಶಗಳಿಗೂ ತೆರಳಿ ಸುದ್ದಿ ಪ್ರಕಟಿಸುವ ಸಂದಿಗ್ದತೆ ರೋಬೋಟ್ ಗಳಿಂದ ದೂರವಾಗಲಿದೆ. ಆಯಾ ಪ್ರದೇಶಗಳಲ್ಲಿ ಒಂದೊಂದು ರೋಬೋಟ್ ಸುದ್ದಿ ಪ್ರಕಟಿಸುವ ಕಾರ್ಯ ಮಾಡುವ ದಿನ ಸನ್ನಿಹಿತ ಎಂದು ಆದಿಚುಂಚನಗಿರಿ ಮಠಾಧೀಶರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಭವಿಷ್ಯ ನುಡಿದರು. ನಾಗಮಂಗಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಅಭಿನಂದನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸತ್ಯ ನಿಖರ ಮತ್ತು ವಸ್ತುನಿಷ್ಠ ವರದಿಯನ್ನು ಹುಡುಕಿ ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪತ್ರಿಕಾರಂಗವು ಸಂವಿಧಾನದ ನಾಲ್ಕನೇ ಅಂಗವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತರು ಪೆನ್ ಮತ್ತು ಕ್ಯಾಮೆರಾಗಳನ್ನು ಸಮಾಜದ ಹಿತಕ್ಕಾಗಿ ಬಳಸಬೇಕು ಹಿಂದೆ ಶಿಕ್ಷಣ ಮುಖ್ಯವಾಗಿತ್ತು ಇಂದು ಕೌಶಲ್ಯ…
ಮುಂದೆ ಓದಿ..
