ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ₹2.15 ಲಕ್ಷ ವಂಚನೆ: ಸೈಬರ್ ಕ್ರೈಂ ದೂರು
Taluknewsmedia.comಬೆಂಗಳೂರು, ಜುಲೈ 28:2025 ಆನ್‌ಲೈನ್‌ನಲ್ಲಿ ಹೆಚ್ಚು ಲಾಭ ನೀಡುವ ಹೂಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯುವಕನೊಬ್ಬ ತನ್ನಿಂದ ₹2.15 ಲಕ್ಷದಷ್ಟು ಹಣ ವಂಚಿಸಲ್ಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಂ ಠಾಣೆಗೆ ಫಿರ್ಯಾದು ನೀಡಲಾಗಿದೆ. ಫಿರ್ಯಾದಿದಾರರ mobiel ನಂ. 9365070779 ಗೆ ಅಪರಿಚಿತ ನಂಬರಿನಿಂದ ಸಂದೇಶವೊಂದು ಬಂದಿದ್ದು, ಅದರಲ್ಲಿ “ಹಣ ಹೂಡಿದರೆ ಹೆಚ್ಚಿನ ಲಾಭ ಸಿಗುತ್ತದೆ” ಎಂಬ ಮಿಥ್ಯಾ ಪ್ರಚಾರವಿತ್ತು. ಪ್ರಾರಂಭದಲ್ಲಿ ಸ್ಕ್ರೀನ್‌ಶಾಟ್‌ಗಳ ಹಂಚಿಕೆ ಮಾಡಿಸುವಂತೆ ಟಾಸ್ಕ್‌ಗಳನ್ನು ನೀಡಿ, ನಂತರ ಟೆಲಿಗ್ರಾಂ (Telegram) ಆ್ಯಪ್‌ಗೆ ಸೇರಿಸುವಂತೆ ಸೂಚನೆ ನೀಡಲಾಯಿತು. ಟೆಲಿಗ್ರಾಂ ಆ್ಯಪ್‌ಗೆ ಸೇರಿದ್ದ ಫಿರ್ಯಾದಿದಾರರಿಗೆ ಪ್ರಾರಂಭದಲ್ಲಿ ₹200ರಿಂದ ₹5000 ವರೆಗೆ ಲಾಭದಂತೆ ತೋರಿಸಿ, ಬಳಿಕ ₹15,000, ₹50,000, ₹1,50,000 ಹಂತ ಹಂತವಾಗಿ ಹಣ ಪಾವತಿಸಲು ಒತ್ತಡ ಹಾಕಲಾಯಿತು. ಈ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳು ಮತ್ತು ಯುಪಿಐ ಐಡಿಗಳ ಮೂಲಕ ಪಾವತಿಸಬೇಕೆಂದು ತಿಳಿಸಲಾಯಿತು. ಅಂತಿಮವಾಗಿ ₹4…
ಮುಂದೆ ಓದಿ..
