ಹೆಬ್ಬಾಳ ನ್ಯಾರೋ ಬ್ರಿಡ್ಜ್ ಬಳಿ ಬಸ್-ಸ್ಕೂಟರ್ ಡಿಕ್ಕಿ: ಮಹಿಳೆಗೆ ಗಂಭೀರ ಗಾಯ
Taluknewsmedia.comಬೆಂಗಳೂರು, ಆಗಸ್ಟ್ 9 – ಹೆಬ್ಬಾಳದ ಬಿ.ಬಿ. ರಸ್ತೆಯ ನ್ಯಾರೋ ಬ್ರಿಡ್ಜ್ ಬಳಿ ಇಂದು ಸಂಜೆ ಸಂಭವಿಸಿದ ಬಸ್-ಸ್ಕೂಟರ್ ಡಿಕ್ಕಿ ಘಟನೆಯಲ್ಲಿ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಪೊಲೀಸರ ಮಾಹಿತಿ ಪ್ರಕಾರ, ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ ಸೌಮ್ಯ ಲತಾ ಕೊಂ ಹೊನ್ನೆಗೌಡ (40) ಅವರು ತಮ್ಮ ಸ್ಕೂಟರ್ (KA-04-JH-1451) ಮೇಲೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಯಲಹಂಕ ದಿಕ್ಕಿಗೆ ಸಾಗುತ್ತಿದ್ದ ಬಿ.ಎಂ.ಟಿ.ಸಿ ಬಸ್ (KA-57-F-5827) ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಿಂದ ಸೌಮ್ಯ ಲತಾ ಕೆಳಗೆ ಬಿದ್ದು ಬಲಗೈ ಮೇಲೆ ಬಸ್ಸಿನ ಚಕ್ರ ಹರಿದ ಪರಿಣಾಮವಾಗಿ ಬಲಗೈ ಹರಿದು ಭುಜಕ್ಕೂ ಪೆಟ್ಟಾಗಿದೆ. ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಬಸ್ ಚಾಲಕ ತಕ್ಷಣ ಅವರನ್ನು ಆಸ್ಮರ್ ಸಿ.ಎಂ.ಐ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಹೆಬ್ಬಾಳ ಟ್ರಾಫಿಕ್ ಪೊಲೀಸರು…
ಮುಂದೆ ಓದಿ..
