ಸುದ್ದಿ 

ಶಿಗ್ಗಾವಿಯಲ್ಲಿ ಮಟಕಾ ಜೂಜಾಟ ಪ್ರಕರಣ

Taluknewsmedia.com

Taluknewsmedia.comಶಿಗ್ಗಾವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಸವಣ್ಯನ ಸರ್ಕಲ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 22, 2025ರಂದು ಮುಂಜಾನೆ ಸುಮಾರು 10.30 ಗಂಟೆಯ ಸುಮಾರಿಗೆ ಪ್ರಕಾಶ್ ಪೀರಪ್ಪಾ ಪಡುವಳ್ಳಿ ಎಂಬ ವ್ಯಕ್ತಿ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಜನರಿಂದ ಹಣ ಪಡೆದು “₹1ಕ್ಕೆ ₹80 ಕೊಡುವುದಾಗಿ” ಹೇಳುತ್ತಾ ಒ.ಸಿ. ಚೀಟಿಗಳನ್ನು ಬರೆದು ಕೊಡುವ ಮೂಲಕ ಓ.ಸಿ. ಮಟಕಾ ಜೂಜಾಟ ನಡೆಸುತ್ತಿದ್ದನೆಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ಶಿಗ್ಗಾವಿ ಪೊಲೀಸ್ ಠಾಣೆಯ ಪಿಎಸ್ಐ–2 ಅವರು ಸರ್ಕಾರಿ ಪರವಾಗಿ ಸ್ವತಃ ತಾವೇ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆಪ್ರಕರಣವು ಸಾರ್ವಜನಿಕ ವಿರೋಧಿ ಸ್ವರೂಪದ್ದಾಗಿದ್ದರಿಂದ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. : ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691

ಮುಂದೆ ಓದಿ..
ಅಂಕಣ 

ಸಮಾಜ ಸೇವೆ ಎಂದರೇನು ?

Taluknewsmedia.com

Taluknewsmedia.comಸಮಾಜ ಸೇವೆ ಎಂದರೇನು ? ನಿಸ್ವಾರ್ಥವೇ ?ತ್ಯಾಗವೇ ?ಸ್ವಾರ್ಥದ ಮುಖವಾಡವೇ ?ವೃತ್ತಿಯೇ ?ಹವ್ಯಾಸವೇ ?ಕರ್ತವ್ಯವೇ ?ವ್ಯಾಪಾರ ವ್ಯವಹಾರವೇ ?ಅಧಿಕಾರ ಹಣ ಪ್ರಚಾರದ ಮೋಹವೇ ?ಪಲಾಯನ ಮಾರ್ಗವೇ ?ನಾಯಕತ್ವದ ಪ್ರದರ್ಶನವೇ ?ಕೆಲಸವಿಲ್ಲದವರ ಅನಾವಶ್ಯಕ ಓಡಾಟವೇ ?ಹೊಟ್ಟೆ ಪಾಡಿನ ದಾರಿಯೇ ?ಬುದ್ದಿಯ ತೋರ್ಪಡಿಕೆಯೇ ?ಮನಸ್ಸಿನ ಅಹಂನ ತಣಿಸುವಿಕೆಯೇ ?ಜೀವನದ ಸಾಧನೆಯೇ ?ಅನುಭವದ ವಿಸ್ತರಣೆಯೇ ?ಜ್ಞಾನದ ಹಂಚಿಕೆಯೇ ?ಅಧ್ಯಾತ್ಮಿಕ ಧಾರ್ಮಿಕ ಉದ್ದೇಶವೇ ?ಬದುಕಿನ ಸಾರ್ಥಕತೆಯೇ ?ನಿರ್ಭಾವುಕ ಮನಸ್ಥಿತಿಯೇ ? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಸಮಾಜ ಸಂಕೀರ್ಣವಾದಷ್ಟು ಸಮಾಜ ಸೇವೆ ವಿವಿಧ ಅರ್ಥಗಳನ್ನು ಪಡೆಯುತ್ತಿದೆ. ಮದರ್ ತೆರೇಸಾ ಅವರನ್ನು ಸಮಾಜ ಸೇವೆಯ ಬಹುದೊಡ್ಡ ಆದರ್ಶ ಎಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ಕೆಲವು ಧರ್ಮಾಧಾರಿತ ವ್ಯಕ್ತಿಗಳ ಮತಾಂತರ ಆರೋಪಗಳ ನಡುವೆಯೂ ಸಮಾಜ ಸೇವೆಗೆ ಇವರು ಒಂದು ಮಾದರಿ. ಕೊಲ್ಕತ್ತಾದ ಬೀದಿಗಳಲ್ಲಿ ಮಲಗಿದ್ದ ಅನಾಥ ಕುಷ್ಠರೋಗಿಗಳ ಸೇವೆಗೆ ಸ್ವಯಂ ಆಸಕ್ತಿಯಿಂದ ಮುಂದೆ ಬಂದು ಸೇವೆ ಸಲ್ಲಿಸುತ್ತಾ…

ಮುಂದೆ ಓದಿ..
ಸುದ್ದಿ 

ಹಾನಗಲ್ ಹತ್ತಿರದ ಡೊಳ್ಳೇಶ್ವರ ವ್ಯಕ್ತಿ ಕಾಣೆ

Taluknewsmedia.com

Taluknewsmedia.comಆಗಸ್ಟ್ 18 ನೇ ತಾರೀಕು ಹಾನಗಲ್ ಸಮೀಪದ ಡೊಳ್ಳೇಶ್ವರ ಗ್ರಾಮದ 60 ವರ್ಷದ ಹುಲ್ಲಪ್ಪ ನಿಂಗಪ್ಪ ಡೊಳ್ಳೇಶ್ವರ ಎನ್ನುವ ವ್ಯಕ್ತಿ ಕಾಣೆಯಾದ ಪ್ರಕರಣಕಾಣೆಯಾದ ಹುಲ್ಲಪ್ಪ ನಿಂಗಪ್ಪ ಡೊಳ್ಳೇಶ್ವರ ಅವರು ಗುತ್ತೆವ್ವಾ ನಿಂಗಪ್ಪ ಕಚಾವೇರ ಎನ್ನುವ ವರದಿಗಾರರ ಅಣ್ಣ ಹುಲ್ಲಪ್ಪ ನಿಂಗಪ್ಪ ಡೊಳ್ಳೇಶ್ವರ ವಯಾ: 60 ವರ್ಷ. ಜಾತಿ: ಹಿಂದೂ ಗಂಗಾಮತ, ಉದ್ಯೋಗ: ಬಿಕ್ಷೆ ಬೇಡುವುದು, ಸಾ: ಗೊಂದಿ. ತಾ: ಹಾನಗಲ್ಲ ಇವನು ದಿನಾಂಕ: 18-07-2025 ರಂದು ಮುಂಜಾನೆ 10-00 ಘಂಟೆಯ ಸುಮಾರಿಗೆ ತನ್ನ ವಾಸದ ಮನೆಯಿಂದ ಹಾನಗಲ್ ಗೆ ಬಿಕ್ಷೆ ಮಾಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೋಗಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇವನು ಈವರೆಗೂ ಹುಡುಕಾಡಲಾಗಿ ಸಿಕ್ಕಿರುವದಿಲ್ಲ ಕಾರಣ ತನ್ನ ಅಣ್ಣ ಹುಲ್ಲಪ್ಪ ಈತನನ್ನು ಹುಡುಕಿ ಕೊಡುವಂತೆ ವರದಿಗಾರರು ಆಡುರು ಪೊಲೀಸ ಠಾಣೆಗೆ ದೂರನ್ನು ನೀಡಿದ್ದು ಪೊಲೀಸರು ವ್ಯಕ್ತಿಯನ್ನು ಹುಡುಕಲು ಕಾರ್ಯನಿರತರಾಗಿದ್ದಾರೆ. : ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್…

ಮುಂದೆ ಓದಿ..
ಸುದ್ದಿ 

ಸವಣೂರಿನ ಬಳಿ ಬೈಕ್ ವ್ಯಕ್ತಿಗೆ ಡಿಕ್ಕಿ ಆಕ್ಸಿಡೆಂಟ್ :

Taluknewsmedia.com

Taluknewsmedia.comಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತೆವರಮೆಳಹಳ್ಳಿ ಕ್ರಾಸ್ ನ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಡಿಕ್ಕಿ ಹೊಡೆದಿರುವ ಘಟನೆ. ದಿನಾಂಕ: 16-08-2025 ರಂದು ಸಂಜೆ 6-30 ಗಂಟೆ ಸುಮಾರಿಗೆ ತೆವರಮೆಳಹಳ್ಳಿ ಕ್ರಾಸ್ ಕಡೆಯಿಂಧ ತೆವರಮೆಳಹಳ್ಳಿ ಗ್ರಾಮದ ಕಡೆಗೆ ಹೋಗಿರುವ ರಸ್ತೆಯಲ್ಲಿ ಮೋಟರ್ ಸೈಕಲ್ ನಂಬರ ಕೆ.ಎ. 27 ಇಎಸ್ 3282 ನೇದ್ದರ ಸವಾರ ಪ್ರಶಾಂತ ಶೇಖಪ್ಪ ದೇಸಾಯಿ ಸಾ|| ತೆವರಮೆಳಹಳ್ಳಿ ಈತನು ತನ್ನ ಮೋಟಾ‌ರ್ ಸೈಕಲ್ ನ್ನು ತೆವರಮೆಳಹಳ್ಳಿ ಕ್ರಾಸ್ ಕಡೆಯಿಂಧ ತೆವರಮೆಳಹಳ್ಳಿ ಗ್ರಾಮದ ಕಡೆಗೆ ವೇಗವಾಗಿ ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಿರೀಶ ಕಿತ್ತೂರಮಠ ಎನ್ನುವ ವ್ಯಕ್ತಿಗೆ ಹಿಂದಿನಿಂದ ಡಿಕ್ಕಿ ಮಾಡಿದ್ದು ಡಿಕ್ಕಿ ಮಾಡಿದ ಪರಿಣಾಮ ಗಿರೀಶನಿಗೆ ತಲೆಗೆ, ಮುಖಕ್ಕೆ, ಹಣೆಗೆ ಗಾಯಗಳು ಆಗಿದ್ದು ಜೊತೆಗೆ ಬೈಕ್ ಸವಾರನಾದ ಪ್ರಶಾಂತ ದೇಸಾಯಿ ಈತನಿಗೂ…

ಮುಂದೆ ಓದಿ..
ಸುದ್ದಿ 

ಸವಣೂರಿನಲ್ಲಿ ಅಮಾಯಕ ವ್ಯಕ್ತಿ ಮೇಲೆ ಚಾಕು ಇರಿತ ಹಲ್ಲೆ ಯತ್ನ

Taluknewsmedia.com

Taluknewsmedia.comಸವಣೂರು ನಗರದಲ್ಲಿ ಇತ್ತೀಚಿಗೆ ಮತ್ತೆ ರೌಡಿಸಂ ನ್ ಸದ್ದು ಹೆಚ್ಚಾಗುತ್ತಿದೆ ಆಗಸ್ಟ್ 17 ನೆ ತಾರೀಕು ಸವಣೂರಿನ ಪ್ರಮುಖ ನಗರದಲ್ಲಿ ಅಮಾಯಕ ಕಾರ್ಮಿಕ ವ್ಯಕ್ತಿಯ ಮೇಲೆ ಇಬ್ಬರು ಗ್ಯಾಂಗ್ ಗೆಳೆಯರ ಅಟ್ಟ್ಯಾಕ್ ಈ ಪ್ರಕರಣದಲ್ಲಿ ಆಸ್ಲಾಮ ನಜೀರ್ಅಹ್ಮದ್ ರಾಯಚೂರು ಎಂಬಾತ ವ್ಯಕ್ತಿ ಕೆಲವು ದಿನಗಳ ಹಿಂದೆ ಸವಣೂರ ಶಹರದಲಿ.. ನೂರಹ್ಮದ ಅಕ್ಕಿ ಇವರ ಮನೆಯಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದಾಗ ನೂರಅಹ್ಮದ ಅಕ್ಕಿ ಮತ್ತು ಅವರ ತಮ್ಮ ಜಗಳ ಮಾಡುವ ಸಮಯದಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಆಸ್ಲಾಮ್ ಅವರ ಜಗಳವನ್ನು ಬಿಡಿಸಿದ್ದನು. ಈ ಸಂಬಂದ ಇದರಲ್ಲಿ 1 ನೇ ಆರೋಪಿಯಾದ ನೂರಅಹ್ಮದ್ ಅಕ್ಕಿ ಈ ಜಗಳವನ್ನು ಮಾಡಲು ನಿನೇ ಕಾರಣ ಅಂತಾ ಗೌಂಡಿ ಆಸ್ಲಾಮ್ ಮೇಲೆ ಸಂಶಯ ಪಡುತ್ತಾ ಬಂದಿದ್ದನು. ಹೀಗಿರುವಾಗ ದಿನಾಂಕ: 17-08-2025 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ನೂರಅಹ್ಮದ್ಅಕ್ಕಿ ಅವನ ಗೌಂಡಿ ಆದ ಆಸ್ಲಾಮ್…

ಮುಂದೆ ಓದಿ..
ಸುದ್ದಿ 

ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ..

Taluknewsmedia.com

Taluknewsmedia.comಮುಳಬಾಗಿಲು: ಮನುಷ್ಯ ಆರೋಗ್ಯದ ಕೊರತೆ ಉಂಟಾದಾಗ ಮಾತ್ರ ಅದು ಎಷ್ಟು ಮುಖ್ಯ ಎಂಬುದು ಅರಿವಾಗುತ್ತದೆ ಎಂದು ಮುಳಬಾಗಿಲು ಫುಡ್ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಕೃಷ್ಣಮೂರ್ತಿ ಹೇಳಿದರು ನಗರದ ಎಸ್ ಬಿ ಐ ಬ್ಯಾಂಕ್ ಮುಂದೆ ಗ್ರಾಮ ಭಾರತಿ ಟ್ರಸ್ಟ್ ಮತ್ತು ಮುಳಬಾಗಿಲು ಫುಡ್ ಬ್ಯಾಂಕ್ ಅರ್ ಎಲ್ ಜಾಲಪ್ಪ ಮೊಬೈಲ್ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯ ಒದಗಿಸಿದೆ. ಜತೆಗೆ ಅವರಿಗಾಗಿಯೇ ಆರೋಗ್ಯ ಭದ್ರತೆ ಒದಗಿಸಿದೆ. ಆದರೆ,ಹಿರಿಯ ನಾಗರಿಕರ ತಮ್ಮ ಜೀವನ ಕೊನೆಗಳಿಗೆಗೆ ಬೇಕಾದ ಅವಶ್ಯಕತೆಗಳಿಗೆ ಮಕ್ಕಳು ಭದ್ರತೆಯಾಗಬೇಕು ಎಂದರು.ಅನೇಕ ಪ್ರಕರಣದಲ್ಲಿ ಮಕ್ಕಳು ಪೋಷಕರಿಂದ ಅವರ ಅಸ್ತಿ, ಅಂತಸ್ತನ್ನು ತಮ್ಮ ಹೆಸರಿಗೆ ವರ್ಗಾಹಿಸಿಕೊಂಡು ಕೊನೆಗೆ ಅವರನ್ನು ಬೀದಿಗೆ ತಳ್ಳುವ ನೂರಾರು ಘಟನೆಗಳು ಈಗಾಗಲೇ ನಡೆದಿದೆ. ಈ ಬಗ್ಗೆ ಹಿರಿಯ ನಾಗರೀಕರು ಎಚ್ಚರಿಕೆ…

ಮುಂದೆ ಓದಿ..
ಸುದ್ದಿ 

ಮಾರುತಿ ನಗರದಲ್ಲಿ ದಾರುಣ ಅಪಘಾತ – 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ

Taluknewsmedia.com

Taluknewsmedia.comಬೆಂಗಳೂರು 22 ಆಗಸ್ಟ್ 2025ಬೆಂಗಳೂರು: 21.08.2025 ರಂದು ಬೆಳಿಗ್ಗೆ ಸುಮಾರು 8:20 ಗಂಟೆಗೆ ಮಾರುತಿ ನಗರ, ಕೋಗಿಲು ಮುಖ್ಯ ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ದಾರುಣ ರಸ್ತೆ ಅಪಘಾತ ಸಂಭವಿಸಿದೆ. ಯಲಹಂಕ ಸಂಚಾರಿ ಪೊಲೀಸರ ಪ್ರಕಾರ, ತನ್ನಿ ಕೃಷ್ಣ (10) ಹಾಗೂ ಕೃತಿ ಕೃಪಾ (5) ಎಂಬ ಇಬ್ಬರು ಮಕ್ಕಳನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಪೋಷಕರು ರಸ್ತೆ ಮೇಲೆ ಸಾಗುತ್ತಿದ್ದರು. ಈ ವೇಳೆ ಕೋಗಿಲು ಕ್ರಾಸ್ ದಿಕ್ಕಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಬಿ.ಎಂ.ಟಿ.ಸಿ ಬಸ್ (ನಂಬರ್ KA-57-F-5375) ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ನಂತರ ಬಸ್ ಚಕ್ರವು ತನ್ನಿ ಕೃಷ್ಣ ಅವರ ತಲೆಯ ಮೇಲೆ ಹಾದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಸ್ಥಳೀಯರು ಮತ್ತು ಯಲಹಂಕ ಸಂಚಾರಿ ಪೊಲೀಸರು ತಕ್ಷಣ ನೆರವಿಗೆ ಧಾವಿಸಿದರೂ ಮಗುವಿನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಈ ಅಪಘಾತಕ್ಕೆ ಕಾರಣನಾದ…

ಮುಂದೆ ಓದಿ..
ಸುದ್ದಿ 

ಯಮಹಾ ಬೈಕ್ ಕಳ್ಳತನ: ಕೇರಳಕ್ಕೆ ಹೋದ ಮಾಲೀಕ ವಾಪಸ್ಸು ಬಂದಾಗ ವಾಹನ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು:22 ಆಗಸ್ಟ್ 2025ಯಲಹಂಕ ಕಟ್ಟಿಗೆನಹಳ್ಳಿ ಎಲ್ಲಿ ಮತ್ತೊಂದು ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ವರದಿಯಾಗಿದೆ. ಅರುಣ್ ಸಿ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ತಮ್ಮ Yamaha FZS ಬೈಕ್‌ (ನಂಬರ KA51-C-89295) ಅನ್ನು ಮನೆಯ ಬಳಿ ನಿಲ್ಲಿಸಿ, 01/07/2025 ರಂದು ತಮ್ಮ ಸ್ವಂತ ಊರಾದ ಕೇರಳಕ್ಕೆ ತೆರಳಿದ್ದರು. 21/08/2025 ಬೆಳಿಗ್ಗೆ 9.00 ಗಂಟೆಗೆ ವಾಪಸ್ಸು ಬಂದಾಗ ಬೈಕ್ ಸ್ಥಳದಲ್ಲಿಲ್ಲವೆಂದು ಗಮನಿಸಿದ ಅವರು ತಕ್ಷಣ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೆ ವಾಹನ ಪತ್ತೆಯಾಗದ ಕಾರಣ ಅವರು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ಮಾಲೀಕರು ಸುಮಾರು ₹20,000 ನಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೈಕ್ ಕಳ್ಳತನಕ್ಕೆ ಸಂಬಂಧಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಾಹನದ ಸುಳಿವು ತಿಳಿದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಮುಂದೆ ಓದಿ..
ಸುದ್ದಿ 

ಘೋರ ರಸ್ತೆ ಅಪಘಾತದಲ್ಲಿ ಯುವತಿಯ ದುರ್ಮರಣ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ 22 ಆಗಸ್ಟ್ 2025ದೊಡ್ಡಬಳ್ಳಾಪುರ ಬಾಷೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನಿವಾಸಿ ಜಯಶ್ರೀ ಬಿ.ಆರ್ (22) ಅವರು ದುರಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ. ಜಯಶ್ರೀ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನದಂತೆ 21 ಆಗಸ್ಟ್ ಬೆಳಿಗ್ಗೆ 8 ಗಂಟೆಗೆ ಮನೆತನಕ್ಕೆ ತಿಳಿಸಿ KA51-X-6439 ನಂಬರಿನ ಟಿವಿಎಸ್ ವೆಗೋ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೊರಟಿದ್ದರು. ಬೆಳಿಗ್ಗೆ ಸುಮಾರು 8:30ಕ್ಕೆ ಮಾರಸಂದ್ರ ಗ್ರಾಮದ ಎಸ್.ಎಂ.ಎಸ್ ಬಾರ್ & ರೆಸ್ಟೋರೆಂಟ್ ಮುಂಭಾಗ ಬೆಂಗಳೂರು–ದೊಡ್ಡಬಳ್ಳಾಪುರ ರಸ್ತೆಯಲ್ಲಿ, KA02-AF-9951 ನಂಬರಿನ ಟಾಟಾ ಟಿಪ್ಪರ್ ಲಾರಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿದ ಪರಿಣಾಮ ಜಯಶ್ರೀ ಅವರ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಜಯಶ್ರೀ ಬಿದ್ದು, ಲಾರಿಯ ಚಕ್ರ ತಲೆಯ ಮೇಲೆ ಹರಿದು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಘಟನೆಯ ಕುರಿತು ಮಾಹಿತಿ ದೊರೆತ ತಕ್ಷಣ ಜಯಶ್ರೀ ಅವರ ತಂದೆ-ತಾಯಿ ಸ್ಥಳಕ್ಕೆ ಬಂದು ಪರಿಶೀಲಿಸಿ ರಾಜಾನುಕುಂಟೆ…

ಮುಂದೆ ಓದಿ..
ಸುದ್ದಿ 

ಸಂಪಿಗೆಹಳ ಪೊಲೀಸ್ ಠಾಣೆ – ಎಂ.ಡಿ.ಎಂ.ಎ ವಶಪಡಿಕೆ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು 22 ಆಗಸ್ಟ್ 2022ದಿನಾಂಕ 21-08-2025 ಮಧ್ಯರಾತ್ರಿ, ಸಂಪಿಗೆಹಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ರವರ ನೇತೃತ್ವದಲ್ಲಿ, ಥಣಿಸಂದ್ರದ ಅಲಿ ಮಸೀದಿ ಹತ್ತಿರದ ಕಾರ್ ಗ್ಯಾರೇಜ್‌ನಲ್ಲಿ ದಾಳಿ ನಡೆಸಲಾಯಿತು. ಮಾಹಿತಿ ಆಧಾರವಾಗಿ, ಗ್ಯಾರೇಜ್‌ನಲ್ಲಿ ಒಬ್ಬ ವ್ಯಕ್ತಿ ಎಂ.ಡಿ.ಎಂ.ಎ ಮಾದಕ ವಸ್ತು ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕಾಯುತ್ತಿದ್ದನೆಂಬ ಸುಳಿವು ಪೊಲೀಸರಿಗೆ ದೊರಕಿತ್ತು. ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ ವೇಳೆ, ಆರೋಪಿ ಸೈಯ್ಯದ್ ಜಾವೀದ್ ಅಲಿಯಾಸ್ ಬೆಂಡ್ ಜಾವೀದ್ (34 ವರ್ಷ) ಬಂಧಿತನಾಗಿದ್ದು, ಅವನಿಂದ ಸುಮಾರು 13 ಗ್ರಾಂ ಎಂ.ಡಿ.ಎಂ.ಎ, ಒಂದು ತೂಕದ ಯಂತ್ರ ಹಾಗೂ ಚಾಕು ವಶಪಡಿಸಿಕೊಳ್ಳಲಾಗಿದೆ. ಸೋಕೊ ತಂಡದಿಂದ ವಶಪಡಿಸಿದ ವಸ್ತು ಎಂ.ಡಿ.ಎಂ.ಎ ಆಗಿರುವುದು ಖಚಿತಪಡಿಸಲಾಯಿತು. ಆರೋಪಿಯ ವಿರುದ್ಧ ಸಂಬಂಧಿತ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಮುಂದೆ ಓದಿ..