ಸುದ್ದಿ 

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ತಾಂಡಾದಲ್ಲಿ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಪ್ರಿಯಾಂಕಾ (21) ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವು. ಮನೆಯೊಂದರ ನೀರಿನ ಸಂಪ್‌ನಲ್ಲಿ ಶವ ಪತ್ತೆಯಾಗಿದೆ.

Taluknewsmedia.com

Taluknewsmedia.comಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಮಜ್ಜೂರು ತಾಂಡಾದಲ್ಲಿ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಪ್ರಿಯಾಂಕಾ (21) ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವು. ಮನೆಯೊಂದರ ನೀರಿನ ಸಂಪ್‌ನಲ್ಲಿ ಶವ ಪತ್ತೆಯಾಗಿದೆ. ಪೊಲೀಸರು ಕುಟುಂಬದವರಾದ ವರದಕ್ಷಿಣೆ ಮಾಹಿತಿ ಪಡೆದು ತನಿಖೆ ನಡೆಸುತ್ತಿರುವಾಗ, ಪ್ರಾಥಮಿಕ ತಪಾಸಣೆಯಲ್ಲಿ ಗಂಡ ಮಾಹಾಂತೇಶ್ ಪ್ರಿಯಾಂಕಾ ಕೊಲೆ ಮಾಡಿ ಬೇರೆ ಮನೆಯಲ್ಲಿ ಶವವನ್ನು ಸಂಪ್‌ನಲ್ಲಿ ಹಾಕಿದರೆಂಬ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ತಿಂಗಳಿನಿಂದ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ವಿಜಯನಗರ ಜಿಲ್ಲೆಯ ಪ್ರಿಯಾಂಕಾ, ಗದಗ ಜಿಲ್ಲೆಯ ಮಾಹಾಂತೇಶ್ ಜೊತೆಗೆ ವಿವಾಹಿತೆಯಾಗಿದ್ದರು. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸುತ್ತಿದ್ದು, ಎಸ್ಪಿ ರೋಹನ್ ಜಗದೇಶ್ ವಿವರಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಲವ್ ಮ್ಯಾರೇಜ್ ಹಿನ್ನೆಲೆ: ತಾಯಿಗೆ ಬೆಂಕಿ ಹಚ್ಚಿದ ಹುಡುಗಿಯ ತಂದೆ – ಚಿಕ್ಕಬಳ್ಳಾಪುರದಲ್ಲಿ ಘಟನೆ

Taluknewsmedia.com

Taluknewsmedia.comಲವ್ ಮ್ಯಾರೇಜ್ ಹಿನ್ನೆಲೆ: ತಾಯಿಗೆ ಬೆಂಕಿ ಹಚ್ಚಿದ ಹುಡುಗಿಯ ತಂದೆ – ಚಿಕ್ಕಬಳ್ಳಾಪುರದಲ್ಲಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಂಗಟಪಲ್ಲಿ ಗ್ರಾಮದಲ್ಲಿ ನಡೆದ ಕ್ರೂರ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಮಗನ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಪಾತಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಘಟನೆ ವಿವರ: ಬಯ್ಯಮ್ಮ (48) ಎಂಬ ಮಹಿಳೆಯು ತನ್ನ ಮಗ ಅಂಬರೀಶ್ ಮತ್ತು ಪ್ರತಿಭಾ ಅವರ ಮದುವೆ ಹಿನ್ನೆಲೆ ಬಲಿ ಆಗಿದ್ದಾಳೆ. ಕಳೆದ ಸೋಮವಾರ ಕಡದಲಮರಿ ದೇವಸ್ಥಾನದಲ್ಲಿ ಅಂಬರೀಶ್ ಮತ್ತು ಪ್ರತಿಭಾ ಪರಸ್ಪರ ಪ್ರೀತಿ ವಿವಾಹ ಮಾಡಿಕೊಂಡಿದ್ದರು. ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಜೋಡಿ ದೇವಸ್ಥಾನದಲ್ಲೇ ಮದುವೆ ಮಾಡಿಕೊಂಡಿದ್ದರು.ಇದರಿಂದ ಕೋಪಗೊಂಡ ಪ್ರತಿಭಾ ತಂದೆ ಬೈರೆಡ್ಡಿ ಹಾಗೂ ಕುಟುಂಬಸ್ಥರು ಬಯ್ಯಮ್ಮನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಗಂಭೀರವಾಗಿ ಸುಟ್ಟ…

ಮುಂದೆ ಓದಿ..
ಸುದ್ದಿ 

27 ತಿಂಗಳಿಂದ ಸಂಬಳವಿಲ್ಲ – ಕಿರುಕುಳದಿಂದ ಬೇಸತ್ತ ವಾಟರ್‌ಮೆನ್ ಆತ್ಮಹತ್ಯೆ!

Taluknewsmedia.com

Taluknewsmedia.com27 ತಿಂಗಳಿಂದ ಸಂಬಳವಿಲ್ಲ – ಕಿರುಕುಳದಿಂದ ಬೇಸತ್ತ ವಾಟರ್‌ಮೆನ್ ಆತ್ಮಹತ್ಯೆ! ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಮಾನವೀಯತೆಯ ಮಿತಿ ಮೀರುವ ಘಟನೆ ನಡೆದಿದೆ. 27 ತಿಂಗಳಿನಿಂದ ಸಂಬಳ ನೀಡದೆ ಕಿರುಕುಳ ನೀಡಿದ ಪರಿಣಾಮ, ಗ್ರಾಮ ಪಂಚಾಯಿತಿ ವಾಟರ್‌ಮೆನ್ ಚಿಕ್ಕೂಸನಾಯಕ ಅವರು ಬೇಸತ್ತು ಗ್ರಾಮ ಪಂಚಾಯಿತಿ ಕಚೇರಿ ಎದುರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನೆಯಿಂದ ಗ್ರಾಮದಲ್ಲಿ ಶೋಕದ ಅಲೆ ಹರಡಿದ್ದು, ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತೊಮ್ಮೆ ಬಯಲಾಗುವಂತಾಗಿದೆ. ಡೆತ್ ನೋಟ್‌ನಲ್ಲಿ ಪಿಡಿಒ ಹಾಗೂ ಅಧ್ಯಕ್ಷೆಯ ಪತಿ ವಿರುದ್ಧ ಆಘಾತಕಾರಿ ಆರೋಪ: ಚಿಕ್ಕೂಸನಾಯಕ ಅವರು ಬರೆದಿರುವ ಡೆತ್ ನೋಟ್‌ನಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ ಮೋಹನ್ ಕುಮಾರ್ ಹಾಗೂ ಪಿಡಿಒ ರಾಮೇಗೌಡ ನನ್ನ ಸಾವಿಗೆ ಕಾರಣರೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. “27 ತಿಂಗಳಿಂದ ಸಂಬಳ ನೀಡದೆ ಹಿಂಸೆ ಕೊಡುತ್ತಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕೆಲಸ ಮಾಡಬೇಕು ಎಂದು ಕಿರುಕುಳ ಕೊಡುತ್ತಾರೆ.…

ಮುಂದೆ ಓದಿ..
ಸುದ್ದಿ 

ಹತ್ತಿ ಮಿಲ್‌ನಲ್ಲಿ 3 ಟನ್‌ ಅಕ್ರಮ ಅನ್ನಭಾಗ್ಯ ಅಕ್ಕಿ ಪತ್ತೆ!

Taluknewsmedia.com

Taluknewsmedia.comಹತ್ತಿ ಮಿಲ್‌ನಲ್ಲಿ 3 ಟನ್‌ ಅಕ್ರಮ ಅನ್ನಭಾಗ್ಯ ಅಕ್ಕಿ ಪತ್ತೆ! ಯಾದಗಿರಿ: ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ಸಾಗಿಸುವ ಅಕ್ರಮ ಜಾಲ ಬಯಲಾಗುತ್ತಿದ್ದಂತೆಯೇ, ಇದೀಗ ಹತ್ತಿ ಮಿಲ್‌ನಲ್ಲಿಯೇ ಪಡಿತರ ಅಕ್ಕಿ ಅಡಗಿಸಿರುವುದು ಪತ್ತೆಯಾಗಿದೆ. ಗುರುಮಠಕಲ್ ತಾಲ್ಲೂಕಿನ ಲಕ್ಷ್ಮೀ ತಿಮ್ಮಪ್ಪ ಹೆಸರಿನ ಕಾಟನ್‌ ಮಿಲ್‌ನ 2ನೇ ಗೋದಾಮಿನಲ್ಲಿ ಸುಮಾರು 3 ಟನ್‌ ಪಡಿತರ ಅಕ್ಕಿ ದಾಸ್ತಾನು ಪತ್ತೆಯಾಗಿದೆ. ಸಿಐಡಿ ತನಿಖಾ ತಂಡದವರು ಈ ಪತ್ತೆ ಮಾಡಿದ್ದಾರೆ.ಹಿಂದಿನ ಸೆಪ್ಟೆಂಬರ್‌ 6ರಂದು ಗುರುಮಠಕಲ್‌ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀ ಬಾಲಾಜಿ ರೈಸ್‌ಮಿಲ್‌ಗಳಲ್ಲಿ 3,985 ಕ್ವಿಂಟಾಲ್‌ ಅಕ್ರಮ ಅಕ್ಕಿ (₹1.21 ಕೋಟಿ ಮೌಲ್ಯ) ಪತ್ತೆಯಾಗಿತ್ತು. ಈ ಪ್ರಕರಣದ ಹಿನ್ನೆಲೆ ಸಿಐಡಿ ತಂಡ ತನಿಖೆಗೆ ತೆರಳಿತ್ತು.ತನಿಖೆ ವೇಳೆ ಸಿಐಡಿ ಅಧಿಕಾರಿಗಳು ರೈಸ್‌ಮಿಲ್‌ನ ವೇ ಬ್ರಿಡ್ಜ್‌ಗೆ ಭೇಟಿ ನೀಡಿದಾಗ, ಹತ್ತಿರದಲ್ಲಿದ್ದ ಹತ್ತಿ ಮಿಲ್‌ನೊಳಗೂ ನುಗ್ಗಿ ಪರಿಶೀಲನೆ ನಡೆಸಿದರು. ಅಲ್ಲಿ ಅಕ್ಕಿ ಗೋಣಿಚೀಲಗಳಲ್ಲಿ ತುಂಬಿ…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದ ಪತ್ನಿ ಕೊಲೆ, ಪತಿ ಬಂಧನ

Taluknewsmedia.com

Taluknewsmedia.comಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದ ಪತ್ನಿ ಕೊಲೆ, ಪತಿ ಬಂಧನ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಹಿರೇಕಾನವಂಗಲ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ಪತಿ ತನ್ನ ಪತ್ನಿಯನ್ನು ಕುತ್ತಿಗೆ ಸೀಳಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮೃತೆಯಾದ ಮಹಿಳೆ ತನುಜ (27) ಎಂದು ಗುರುತಿಸಲಾಗಿದೆ. ತನುಜ ಅವರ ಪತಿ ರಮೇಶ್ ಈ ಕ್ರೂರ ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಸೂತ್ರಗಳ ಪ್ರಕಾರ, ಎಂಟು ವರ್ಷಗಳ ಹಿಂದೆ ತನುಜ ಹಾಗೂ ರಮೇಶ್ ವಿವಾಹವಾಗಿದ್ದರು. ಇಬ್ಬರಿಗೂ ವಿವಾಹ ಜೀವನದಲ್ಲಿ ಪದೇ ಪದೇ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು. ರಮೇಶ್ ಅವರಿಗೆ ಮದ್ಯಪಾನದ ಚಟೆಯಿದ್ದು, ಇದೇ ವಿಚಾರವಾಗಿ ಪತ್ನಿ ಮತ್ತು ಪತಿಯ ನಡುವೆ ವಾಗ್ವಾದ ನಡೆದಿದ್ದು, ಅದು ಹತ್ಯೆಗೆ ತಿರುಗಿದೆ ಎಂದು ತಿಳಿದುಬಂದಿದೆ. ಘಟನೆಯ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಜ್ಜಂಪುರ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶವವನ್ನು ವಶಕ್ಕೆ…

ಮುಂದೆ ಓದಿ..
ಸುದ್ದಿ 

ವಿದೇಶಿ ಉದ್ಯಮಿಯ ಪ್ರಶ್ನೆಗೆ ಕಿರಣ್ ಮಜುಂದಾರ್ ಶಾ ಟ್ವಿಟ್ — ಎಕ್ಸ್‌ನಲ್ಲಿ ಚರ್ಚೆ ಜೋರಾಯಿತು!

Taluknewsmedia.com

Taluknewsmedia.comವಿದೇಶಿ ಉದ್ಯಮಿಯ ಪ್ರಶ್ನೆಗೆ ಕಿರಣ್ ಮಜುಂದಾರ್ ಶಾ ಟ್ವಿಟ್ — ಎಕ್ಸ್‌ನಲ್ಲಿ ಚರ್ಚೆ ಜೋರಾಯಿತು! ಬಯೋಕಾನ್ ಪಾರ್ಕ್‌ಗೆ ಭೇಟಿ ನೀಡಿದ ವಿದೇಶಿ ಉದ್ಯಮಿಯೊಬ್ಬರು ಬೆಂಗಳೂರಿನ ರಸ್ತೆ ಹಾಗೂ ಸ್ವಚ್ಛತೆಯ ಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಳಿಕ, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರ ಟ್ವಿಟ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.ಉದ್ಯಮಿ. “ಬೆಂಗಳೂರುಂತಹ ವಿಶ್ವಪ್ರಸಿದ್ಧ ಐಟಿ ಹಬ್‌ನಲ್ಲಿ ರಸ್ತೆಗಳಲ್ಲಿ ಇಷ್ಟು ಗುಂಡಿಗಳು? ಎಲ್ಲೆಲ್ಲೂ ಕಸಕಡ್ಡಿ? ಸರ್ಕಾರ ಹೂಡಿಕೆಗೆ ಆಸಕ್ತಿ ತೋರಿಸುತ್ತಿಲ್ಲವೇ? ನಾನು ಚೀನಾದಿಂದ ಬಂದಿದ್ದೇನೆ : ಅಲ್ಲಿ ಮೂಲಸೌಕರ್ಯ ಶ್ರೇಷ್ಟ. ಭಾರತ ಮಾತ್ರ ಕ್ರಮ ಕೈಗೊಳ್ಳದೆ ಇರುವುದೇಕೆ?”ಎಂದು ಪ್ರಶ್ನಿಸಿದ್ದಾರೆ ಎಂದು ಶಾ ಅವರು ಬರೆದಿದ್ದಾರೆ.ಈ ಕುರಿತು ತಮ್ಮ ಟ್ವಿಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆರನ್ನು ಟ್ಯಾಗ್ ಮಾಡಿ ಶಾ ಅವರು ಗಮನಸೆಳೆದಿದ್ದಾರೆ. ಎಕ್ಸ್‌ನಲ್ಲಿ ಪರ-ವಿರೋಧ ಅಭಿಪ್ರಾಯಗಳ ಮಳೆ..…

ಮುಂದೆ ಓದಿ..
ಸುದ್ದಿ 

ನೆಲಮಂಗಲದಲ್ಲಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ — ನೈಜ ಘಟನೆಯ ಮೇಲೆ ಆಧಾರಿತ ಗಟ್ಟಿಯಾದ ಕಥಾಹಂದರ!

Taluknewsmedia.com

Taluknewsmedia.comನೆಲಮಂಗಲದಲ್ಲಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ — ನೈಜ ಘಟನೆಯ ಮೇಲೆ ಆಧಾರಿತ ಗಟ್ಟಿಯಾದ ಕಥಾಹಂದರ! ನೆಲಮಂಗಲದ ಪೊಲೀಸ್ ಠಾಣೆಯ ಆವರಣದಲ್ಲಿ ಇಂದು ‘ಬೀಟ್ ಪೊಲೀಸ್’ ಚಿತ್ರದ ಭರ್ಜರಿ ಮುಹೂರ್ತ ಕಾರ್ಯಕ್ರಮ ನಡೆಯಿತು.ಆರ್ಯ ಫಿಲಂಸ್ ಲಾಂಛನದಲ್ಲಿ ಆರ್. ಲಕ್ಷ್ಮಿ ನಾರಾಯಣ ಗೌಡರು ನಿರ್ಮಿಸುತ್ತಿರುವ ಈ ಚಿತ್ರವನ್ನು, ಖ್ಯಾತ ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ನಾಯಕನಾಗಿ ನಟಿಸುತ್ತಿದ್ದು, “ಭೀಮ” ಚಿತ್ರದ ಮೂಲಕ ಪ್ರಖ್ಯಾತಿಯಾಗಿರುವ ನಟಿ ಪ್ರಿಯಾ ಅವರು ಸಶಕ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಜನಪ್ರಿಯ ನಟ ಡ್ರ್ಯಾಗನ್ ಮಂಜು ಮಿಂಚಲಿದ್ದಾರೆ. ನಿರ್ಮಾಪಕ ಆರ್. ಲಕ್ಷ್ಮಿ ನಾರಾಯಣ ಗೌಡ ಮಾತನಾಡಿ..“ಇದು ನಮ್ಮ ಆರ್ಯ ಫಿಲಂಸ್‌ನ ನಾಲ್ಕನೇ ಸಿನಿಮಾ. ನೈಜ ಘಟನೆಯ ಸುತ್ತ ಹೆಣೆದಿರುವ ಈ ಚಿತ್ರದಲ್ಲಿ ಇಂದಿನ ಎಜುಕೇಶನ್ ವ್ಯವಸ್ಥೆಯ ಕುರಿತಾದ ಗಂಭೀರ ಸಂದೇಶವಿದೆ. ಸಮಾಜದಲ್ಲಿ ಜನರು…

ಮುಂದೆ ಓದಿ..
ಸುದ್ದಿ 

ರಾಜ್ಯದಲ್ಲಿ ಕನ್ನಡಿಗರ ಹಕ್ಕು, ಹಿತಾಸಕ್ತಿ ರಕ್ಷಣೆಗಾಗಿ ಸಂಘಟಿತರಾದ ಕನ್ನಡ ಪರ ಹೋರಾಟಗಾರರು ಗಾಂಧಿ ಭವನದಲ್ಲಿ ಕನ್ನಡ ಹಿತಾಸಕ್ತಿ ಸಭೆ – ನವೆಂಬರ್ 1ರಂದು ಮಹಾ ಸಭೆಗೆ ತಯಾರಿ

Taluknewsmedia.com

Taluknewsmedia.comರಾಜ್ಯದಲ್ಲಿ ಕನ್ನಡಿಗರ ಹಕ್ಕು, ಹಿತಾಸಕ್ತಿ ರಕ್ಷಣೆಗಾಗಿ ಸಂಘಟಿತರಾದ ಕನ್ನಡ ಪರ ಹೋರಾಟಗಾರರು ಗಾಂಧಿ ಭವನದಲ್ಲಿ ಕನ್ನಡ ಹಿತಾಸಕ್ತಿ ಸಭೆ – ನವೆಂಬರ್ 1ರಂದು ಮಹಾ ಸಭೆಗೆ ತಯಾರಿ ರಾಜ್ಯದಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತುವ ಉದ್ದೇಶದಿಂದ, ಇಂದು (ಶನಿವಾರ) ಬೆಂಗಳೂರಿನ ಗಾಂಧಿ ಭವನದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯನ್ನು KRS ಪಕ್ಷದ ನೇತೃತ್ವದಲ್ಲಿ ಕನ್ನಡ ಪರ ಹೋರಾಟಗಾರರು, ಸಂಘ–ಸಂಸ್ಥೆಗಳು ಹಾಗೂ ಕನ್ನಡದ ಬಗ್ಗೆ ಕಾಳಜಿ ಇರುವ ರಾಜಕೀಯ ಪಕ್ಷಗಳು ಸೇರಿ ಆಯೋಜಿಸಿದ್ದವು. ಸಭೆಯಲ್ಲಿ ದ್ವಿಭಾಷಾ ನೀತಿ ಜಾರಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ನೀರಿನ ಹಂಚಿಕೆ ನ್ಯಾಯ, ತೆರಿಗೆ ಹಂಚಿಕೆಯಲ್ಲಿ ನಡೆಯುತ್ತಿರುವ ಅನ್ಯಾಯ ಮುಂತಾದ ಕನ್ನಡಿಗರ ಹಕ್ಕು–ಹಿತಾಸಕ್ತಿಯ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ನಾಯಕರ ಅಭಿಪ್ರಾಯದಂತೆ, ಕನ್ನಡಿಗರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ನವಂಬರ್…

ಮುಂದೆ ಓದಿ..
ಸುದ್ದಿ 

ಕಡಿಮೆ ಬಡ್ಡಿಗೆ ಲೋನ್ ಕೊಡಿಸ್ತೀನಿ ಅಂತ ಜನರನ್ನು ವಂಚಿಸಿದ ಮಹಿಳೆ ಬಂಧನ

Taluknewsmedia.com

Taluknewsmedia.comಕಡಿಮೆ ಬಡ್ಡಿಗೆ ಲೋನ್ ಕೊಡಿಸ್ತೀನಿ ಅಂತ ಜನರನ್ನು ವಂಚಿಸಿದ ಮಹಿಳೆ ಬಂಧನ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಜನರನ್ನು ವಂಚಿಸಿದ ಮಹಿಳೆ ಬಂಧನಕ್ಕೆ ಒಳಗಾಗಿದ್ದಾಳೆ. ಬಂಧಿತಳನ್ನು ನಯನಾ ಎಂದು ಗುರುತಿಸಲಾಗಿದೆ. ನಯನಾ ವಿರುದ್ಧ ಕ್ರಮ ಕೈಗೊಂಡಿರುವವರು ಬಸವೇಶ್ವರ ನಗರ ಪೊಲೀಸರು, ಅವರು ಬಂಧನದ ಬಳಿಕ ಆಕೆಯನ್ನು ಪರಪ್ಪನ ಅಗ್ರಹಾರ ಸೆರೆಮನೆಗೆ ಕಳುಹಿಸಿದ್ದಾರೆ. ವಂಚನೆ ಹೇಗೆ ನಡೆದಿದೆ: ನಯನಾ, “ಸುಬ್ಬಲಕ್ಷ್ಮಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್” ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೇಕಡಾ 1% ಬಡ್ಡಿದರದಲ್ಲಿ ಸಾಲ ಕೊಡಿಸುತ್ತೇನೆ ಎಂದು ಜನರನ್ನು ನಂಬಿಸಿದ್ದಳು. ಆಕೆ ಮತ್ತು ಆಕೆಯ ಸಹಚರರು ಸಾಲ ಪಡೆಯುವ ಮೊದಲು ಮೂರು ತಿಂಗಳ ಇ.ಎಂ.ಐ ಮುಂಗಡವಾಗಿ ಕಟ್ಟಬೇಕು ಎಂದು ಹೇಳಿ ಹಣ ಪಡೆದುಕೊಂಡಿದ್ದಾರೆ. ಸುಮಾರು 15 ಜನರಿಂದ ಪ್ರತಿ ತಲೆಗೆ 30,000 ರೂಪಾಯಿ ಪಡೆದಿದ್ದು, ಒಟ್ಟು ₹12,22,000 ರಷ್ಟು ಮೊತ್ತವನ್ನು ವಂಚನೆ ಮಾಡಿದ್ದಾರೆ ಎಂದು ಪೊಲೀಸರು…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂವರು ಅಂತರ್ ಜಿಲ್ಲಾ ದನ ಕಳ್ಳರ ಬಂಧನ

Taluknewsmedia.com

Taluknewsmedia.comಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂವರು ಅಂತರ್ ಜಿಲ್ಲಾ ದನ ಕಳ್ಳರ ಬಂಧನ ಚಿಕ್ಕಮಗಳೂರು, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ದನ ಕಳ್ಳತನದಲ್ಲಿ ತೊಡಗಿದ್ದ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಬಣಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಯೂನಿಸ್, ನಾಸಿರ್, ಮತ್ತು ಇಕ್ಬಾಲ್ ಎಂದು ಗುರುತಿಸಲಾಗಿದೆ. ಪ್ರಕರಣದ ಹಿನ್ನೆಲೆ: ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ದನ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.ಪೊಲೀಸರು ಈ ಪ್ರಕರಣಗಳ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿಗಳ ಸುಳಿವು ಸಿಕ್ಕಿದ್ದು, ಮೂವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಪರೇಷನ್ ವಿವರ: ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮಾರುತಿ ರಿಟ್ಜ್ ಕಾರು ವಶಪಡಿಸಿಕೊಳ್ಳಲಾಗಿದೆ.ಪೊಲೀಸರು ಆರೋಪಿಗಳಿಂದ ದನ ಕಳ್ಳತನದ ಮಾದರಿ, ಮಾರಾಟದ ಜಾಲ ಹಾಗೂ ಇತರ ಸಹಚರರ ಮಾಹಿತಿ ಪಡೆಯಲು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬಂಧಿತರು ಚಿಕ್ಕಮಗಳೂರು, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಅನೇಕ…

ಮುಂದೆ ಓದಿ..