ಅಪ್ಪ ಅಮ್ಮನ ಜೀವನ ಶೈಲಿಯಲ್ಲಿ ಕಾಣಬರುತ್ತಿರುವ ಬದಲಾವಣೆ…
Taluknewsmedia.comಅಪ್ಪ ಅಮ್ಮನ ಜೀವನ ಶೈಲಿಯಲ್ಲಿ ಕಾಣಬರುತ್ತಿರುವ ಬದಲಾವಣೆ…… ಅಮ್ಮನನ್ನು ಪ್ರತ್ಯಕ್ಷ ದೇವರೆಂದು ಎಲ್ಲಾ ಸಾಹಿತ್ಯದ ಸಂದೇಶಗಳಲ್ಲೂ ಮೊದಲಿನಿಂದಲೂ ವರ್ಣಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಅಪ್ಪನನ್ನು ಸಹ ವರ್ಣಿಸಲು ಪ್ರಾರಂಭವಾಗಿದೆ. ಹಿಂದಿನ ಬಹುತೇಕ ಸಿನಿಮಾಗಳಲ್ಲಿ – ಹಾಡುಗಳಲ್ಲಿ ತಾಯಿಯನ್ನು ಕರುಳು ಹಿಂಡುವಂತೆ ಚಿತ್ರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ತಂದೆಯ ತ್ಯಾಗವನ್ನು ಸಹ ಕಥೆ, ಹಾಡುಗಳಲ್ಲಿ ಚಿತ್ರಿಸಲಾಗುತ್ತಿದೆ. ಎಲ್ಲಾ ಧಾರಾವಾಹಿ, ಕಥೆ, ಕಾದಂಬರಿ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಪುರುಷರನ್ನು ಮಾತ್ರವೇ ಖಳ ಪಾತ್ರಗಳಲ್ಲಿ ನಿರೂಪಿಸಲಾಗುತ್ತಿತ್ತು. ಇತ್ತೀಚೆಗೆ ಮಹಿಳೆಯರ ಪಾತ್ರಗಳನ್ನು ಸಹ ಹೆಚ್ಚು ಹೆಚ್ಚು ವಿಲನ್ ಗಳಾಗಿ ನಿರೂಪಿಸಲಾಗುತ್ತಿದೆ. ಮೊದಲೆಲ್ಲಾ ಪತಿಯಿಂದ ಪತ್ನಿಯ ಕೊಲೆ ಎಂಬುದನ್ನು ಮಾತ್ರವೇ ಕೇಳುತ್ತಿದ್ದೆವು. ಇತ್ತೀಚೆಗೆ ಪತ್ನಿಯಿಂದ ಪತಿ ಕೊಲೆಯ ಪಿತೂರಿ ಎಂಬುದನ್ನು ಸಹ ನೋಡುತ್ತಿದ್ದೇವೆ. ಪ್ರೇಮಿಗಳ ವಿಷಯದಲ್ಲಿ ಗಂಡಿನಿಂದ ಹೆಣ್ಣಿಗೆ ಮೋಸ, ವಂಚನೆಯ ವಿಷಯಗಳು ಮಾತ್ರ ಸುದ್ದಿಯಾಗುತ್ತಿದ್ದವು. ಇತ್ತೀಚೆಗೆ ಹೆಣ್ಣುಗಳಿಂದ ಸಹ ಪುರುಷ ಮೇಲೆ ಮೋಸ, ದೌರ್ಜನ್ಯದ ಕೇಸು ದಾಖಲಾಗುತ್ತಿವೆ.…
ಮುಂದೆ ಓದಿ..
