ಆಡುಗೋಡಿ C.A.R ದಕ್ಷಿಣ ಕ್ವಾರ್ಟರ್ಸ್ ಮೈದಾನದಲ್ಲಿ ನಿರ್ಮಿತ ಬ್ಯಾಡ್ಮಿಂಟನ್ ಕೋರ್ಟ್ – ಖರ್ಚಿನ ವಿವರ ಎಲ್ಲಿ?
ಆಡುಗೋಡಿ C.A.R ದಕ್ಷಿಣ ಕ್ವಾರ್ಟರ್ಸ್ ಮೈದಾನದಲ್ಲಿ ನಿರ್ಮಿತ ಬ್ಯಾಡ್ಮಿಂಟನ್ ಕೋರ್ಟ್ – ಖರ್ಚಿನ ವಿವರ ಎಲ್ಲಿ? ಬೆಂಗಳೂರು ದಕ್ಷಿಣ ಸಂಸದರ ನಿಧಿ ಅಡಿಯಲ್ಲಿ, ಆಡುಗೋಡಿಯ ಸಿ.ಎ.ಆರ್ ದಕ್ಷಿಣ (ನಗರ ಮೀಸಲು ಪೊಲೀಸ್ ಪಡೆ) ಕ್ವಾರ್ಟರ್ಸ್ ಮೈದಾನದಲ್ಲಿ ನಿರ್ಮಿಸಿರುವ ನೂತನ ಬ್ಯಾಡ್ಮಿಂಟನ್ ಕೋರ್ಟ್ಗೆ ಭರ್ಜರಿ ಉದ್ಘಾಟನಾ ಸಮಾರಂಭ ನಡೆಯಿತು. ಆದರೆ ಈ ಕ್ರೀಡಾ ಸೌಲಭ್ಯ ನಿರ್ಮಾಣಕ್ಕೆ ಖರ್ಚಾದ ಮೊತ್ತ, ಅದರ ವಿವರ ಹಾಗೂ ಪಾರದರ್ಶಕತೆ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಿಲ್ಲ ಎಂಬುದು ಪ್ರಶ್ನೆಗೆ ಕಾರಣವಾಗಿದೆ. ಸಂಸದರ ನಿಧಿಯ ಅಡಿಯಲ್ಲಿ ನಡೆದ ಯೋಜನೆ ಎಂದು ಹೇಳಿಕೊಳ್ಳುವ ಈ ಕಾಮಗಾರಿಯು ಸಾರ್ವಜನಿಕ ಹಣದಿಂದ ನೇರವಾಗಿ ನಡೆಯುತ್ತಿರುವುದರಿಂದ, ಖರ್ಚು ಎಷ್ಟು? ಟೆಂಡರ್ ಪ್ರಕ್ರಿಯೆ ಹೇಗೆ? ಕಾಮಗಾರಿ ಯಾವ ಕಂಪನಿಗೆ ನೀಡಲಾಗಿದೆ? ಎಂಬ ವಿಷಯಗಳಲ್ಲಿ ಸ್ಪಷ್ಟತೆ ಅಗತ್ಯ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದರಿಂದ ಸಂಶಯಗಳು ವ್ಯಕ್ತವಾಗಿವೆ. ಈ…
ಮುಂದೆ ಓದಿ..
