ದಲಿತ ನಾಯಕರು ಜಾತಿ ನಿಂದನೆಗೆ ಗುರಿ – ಅಂಗಡಿ ಮಾಲೀಕನ ವಿರುದ್ಧ ಅಟ್ರಾಸಿಟಿ ಪ್ರಕರಣ
ಬೆಂಗಳೂರು , ಜುಲೈ 19:2025 ಅಂಚಿಪಾಳ್ಯ (ಶ್ರೀಕಂಠಪುರ) ಮೂಲದ ದಲಿತ ಸ್ವಾಭಿಮಾನಿ ಸೇವಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ಹಾಗೂ ಸಂಘದ ಇತರ ಸದಸ್ಯರು ಜಾತಿ ನಿಂದನೆಗೆ ಗುರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬ್ಯಾತ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಸ್ಥಳೀಯ ರಾಜನಕುಂಟೆ ಪೊಲೀಸ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಜಮ್ಮ ಅವರ ಪ್ರಕಾರ, ದಿನಾಂಕ 17.07.2025ರಂದು ಮಧ್ಯಾಹ್ನ ಸುಮಾರು 12:15ಕ್ಕೆ ಸಂಘಟನೆಯ ಸಭೆಗೆ ತೆರಳುತ್ತಿದ್ದ ವೇಳೆ ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಜಿ.ಸಿ. ಚನ್ನಕೇಶವ, ಸದಸ್ಯರು ರಾಜ್, ರೈನಿ, ಉಮಾಕ್ಷಿ, ವೆಂಕಟೇಶ್ ಅವರೊಂದಿಗೆ ಅವರು ಬ್ಯಾತ ಗ್ರಾಮದ “ಶ್ರೀ ಪೂರ್ವಿಕ ಎಂಟರ್ಪ್ರೈಸಸ್” ಅಂಗಡಿಯಲ್ಲಿ ವಿರಾಮ ಪಡೆದು ನೀರು ಹಾಗೂ ಜ್ಯೂಸ್ ಖರೀದಿಸಲು ಪ್ರಯತ್ನಿಸಿದರು. ಆದರೆ ಅಂಗಡಿಯ ಮಾಲೀಕ ಜೀವನ್ ಕುಮಾರ್, “ನಿಮ್ಮಂತಹ ಮಾದಿಗರು ಮತ್ತು ಹೊಲೆಯರು ಅಂಗಡಿಯೊಳಗೆ ಬರಬಾರದು. ನಿಮ್ಮ ಜಾತಿಯ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಿಗೂ…
ಮುಂದೆ ಓದಿ..
