ಅಂಕಣ 

ನಿಮಿಷಾ ಪ್ರಿಯ……. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು

ನಿಮಿಷಾ ಪ್ರಿಯ……. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್,ಅವನು ಪೇಳ್ದಂತೆ ಪಯಣಿಗರು,ಮದುವೆಗೋ ಮಸಣಕೋ, ಹೋಗೆಂದ ಕಡೆಗೋಡು, ಪದ ಕುಸಿಯೇ ನೆಲವಿಹುದು ಮಂಕು ತಿಮ್ಮ,……. ಡಿವಿಜಿ.ದೂರದ ಯೆಮೆನ್ ದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಹೋದ ಕೇರಳದ ಪಾಲಕ್ಕಾಡಿನ ನಿಮಿಷಾ ಪ್ರಿಯ ಎಂಬ ದಾದಿ, ಬದುಕಿನ ಆಕಸ್ಮಿಕ ಹೊಡೆತಕ್ಕೆ ಸಿಲುಕಿ ಕೊಲೆ ಆರೋಪದ ಅಪರಾಧ ಸಾಬೀತಾಗಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿ, ಸಾವು ಬದುಕಿನ ನಡುವೆ ದಿನಗಳನ್ನು ದೂಡುತ್ತಾ ಯಾವುದೇ ಕ್ಷಣದಲ್ಲಿ ನೇಣುಗಂಬಕ್ಕೇರುವ ಅಥವಾ ಬಿಡುಗಡೆಯಾಗಿ ಹೊಸ ಬದುಕಿನೊಂದಿಗೆ ತನ್ನ ಹುಟ್ಟೂರಿಗೆ ಬರುವ ಅತ್ಯಂತ ತೆಳುವಾದ ಗೆರೆಯ ಮಧ್ಯೆ ನಿಂತಿದ್ದಾಳೆ. ಕೆಲವು ವಿಷಯಗಳೇ ಹಾಗೆ. ಇದ್ದಕ್ಕಿದ್ದಂತೆ ತುಂಬಾ ಪ್ರಚಾರಕ್ಕೆ ಬಂದು ಬಿಡುತ್ತವೆ. ಇಂತಹ ಘಟನೆಗಳು ಸಾಕಷ್ಟು ನಡೆಯುತ್ತಿದ್ದರೂ ಕೆಲವೊಂದು ಘಟನೆಗಳು ಮಾತ್ರ ವಿಶೇಷ ಮಹತ್ವವನ್ನು ಪಡೆಯುತ್ತವೆ. ಉದಾಹರಣೆಗೆ ದೆಹಲಿಯಲ್ಲಿ ನೂರಾರು ಅತ್ಯಾಚಾರ ಪ್ರಕರಣಗಳು ನಡೆದಿದ್ದರು ಜ್ಯೋತಿಸಿಂಗ್ ಎಂಬ ನಿರ್ಭಯ…

ಮುಂದೆ ಓದಿ..
ಸುದ್ದಿ 

ಸಿಐಆರ್‌ಪಿಎಫ್ ಸೈನಿಕನ ಅನುಮಾನಾಸ್ಪದ ಸಾವು

ಬೆಂಗಳೂರು, ಜುಲೈ 19, 2025: ಸಿಆರ್‌ಪಿಎಫ್ (CRPF) ಸಿಬ್ಬಂದಿ ಫೋರ್ಸ್ ನಂ. 255050873 RT/GDGC ಆಗಿರುವ ಯೋಧನೊಬ್ಬನು ಇಂದು ಬೆಳಿಗ್ಗೆ ಸುಮಾರು 06:15 ಗಂಟೆಗೆ ಶಿಬಿರದಲ್ಲಿ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಘಟನೆ ಬೆಳಗಿನ ಜಾವ ನಡೆದಿದ್ದು, ಸಹೋದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಮರಣದ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಘಟನಾ ಸ್ಥಳಕ್ಕೆ ಯಲಹಂಕ ಉಪನಗರ ಪೊಲೀಸರು ದೌಡಾಯಿಸಿದ್ದು, ಅಸ್ವಾಭಾವಿಕ ಮರಣ (U.D.) ಪ್ರಕರಣ ದಾಖಲಾಗಿದೆ. ಇನ್ನಷ್ಟು ಮಾಹಿತಿ ಕಲೆಹಾಕಲು ಪಂಚನಾಮೆ (Inquest Report) ಮತ್ತು ಪೋಸ್ಟ್‌ಮಾರ್ಟಂ ನಡೆಯುತ್ತಿದೆ. ಯಲಹಂಕ ಉಪನಗರ ಪೊಲೀಸರು ಈ ಪ್ರಕರಣದ ಕುರಿತಾಗಿ ತನಿಖೆ ಮುಂದುವರಿಸಿಕೊಂಡಿದ್ದಾರೆ. ಸಾವಿನ ಹಿನ್ನೆಲೆ ಕುರಿತು ಯಾವುದೇ ನಿಖರವಾದ ಮಾಹಿತಿ ಲಭ್ಯವಿಲ್ಲದ ಕಾರಣದಿಂದಾಗಿ, ಮೃತ್ಯುವಿಗೆ ಕಾರಣವಾದ ಸತ್ಯಾಂಶ ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.

ಮುಂದೆ ಓದಿ..
ಸುದ್ದಿ 

ಪ್ರೇಮ ಸಂಬಂಧದ ಹೆಸರಲ್ಲಿ ಲೈಂಗಿಕ ಕಿರುಕುಳ – ಯುವತಿ ನೀಡಿದ ದೂರು

ಬೆಂಗಳೂರು, ಜುಲೈ 19:2025ನಗರದ ಯುವತಿ ನೀಡಿದ ದೂರಿನ ಪ್ರಕಾರ, ಜೆಬಿನ್ ಎಂಬ ಯುವಕನೊಂದಿಗೆ ಕಳೆದ ಎರಡು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ ಅವಳು, ಅವನಿಂದ ಲೈಂಗಿಕ ಕಿರುಕುಳ, ದೈಹಿಕ ಹಿಂಸೆ ಹಾಗೂ ಬೆದರಿಕೆಗಳನ್ನು ಅನುಭವಿಸಿದ್ದಾಳೆ. 2024ರಿಂದಲೇ ಅವನು ಆಕೆಯ ಮೇಲೆ ಹಿಂಸಾತ್ಮಕ ವರ್ತನೆ ತೋರಿಸುತ್ತಿದ್ದನು. 2025ರ ಮೇ 14 ರಂದು ತನ್ನ ರೂಂನಲ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಆಗಾಗ ದೈಹಿಕವಾಗಿ ಹಾನಿಯನ್ನೂ ಮಾಡಿದ್ದಾನೆ. ಜುಲೈ 17 ರಂದು ರಾತ್ರಿ 12ರಿಂದ ಬೆಳಿಗ್ಗೆ 5ರವರೆಗೆ ಆಕೆಯ ಮನೆ ಬಳಿ ಬಂದು “ನನ್ನ ಜೊತೆ ಬಾ” ಎಂದು ಒತ್ತಾಯಿಸಿದ್ದು, ನಿರಾಕರಣೆ ಮಾಡಿದಾಗ “ನಾನು ಸತ್ತು ಹೋಗುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಇದಕ್ಕೂ ಮೀರಿಯೂ, ಆಕೆಯ ಮೊಬೈಲ್ ಹೊಡೆದು ನಾಶಪಡಿಸಿದ್ದಾನೆ ಮತ್ತು ಖಾಸಗಿ ಫೋಟೋಗಳನ್ನು ಹರಡುವ ಬೆದರಿಕೆಯನ್ನೂ ನೀಡಿದ್ದಾನೆ.ಈ ಕುರಿತು ಯುವತಿ ಯಲಹಂಕ ಉಪನಗರ ಪೊಲೀಸರಿಗೆ ದೂರು ನೀಡಿದ್ದು, ಜೆಬಿನ್ ವಿರುದ್ಧ…

ಮುಂದೆ ಓದಿ..
ಸುದ್ದಿ 

ಸ್ವತ್ತಿನ ವಿವಾದದಲ್ಲಿ ಬೆದರಿಕೆ – ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು, ಜುಲೈ 19:2025ನಗರದ ಉಪನಗರದಲ್ಲೊಂದು ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಭಾರೀ ಗಂಭೀರತೆಯ ಕಡೆಗೆ ತಿರುಗಿದ್ದು, ಈ ಪ್ರಕರಣದಲ್ಲಿ ಮೂರು ಮಂದಿ ಆರೋಪಿಗಳ ವಿರುದ್ಧ ಬೆದರಿಕೆ ಹಾಗೂ ಸ್ವತ್ತಿಗೆ ಸಂಬಂಧಿಸಿದ ಕಳಪೆ ಚಟುವಟಿಕೆ ನಡೆಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಾಕಮ್ಮ ವರದಿಯ ಪ್ರಕಾರ, 50 x 31 ಅಡಿ ಅಳತೆಯ (ಒಟ್ಟು 1550 ಚದರ ಅಡಿ) ನಿವೇಶನವನ್ನು ಅವರು ತಮ್ಮ ಪುತ್ರ ಯಲಪ್ರಾರವರಿಂದ 2023ರ ಜನವರಿ 11ರಂದು ಹಕ್ಕು ಬಿಡುಗಡೆ ಪತ್ರದ ಮೂಲಕ ಪಡೆದಿದ್ದರು. ತಮ್ಮ ಸ್ವತ್ತನ್ನು ಆರೈಕೆ ಮಾಡಲು ದೂರುದಾರರು ಆಗಾಗ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ, 2024ರಿಂದ ಯಾರೋ ಅಪರಿಚಿತರು “ಲೋಕಾಯುಕ್ತದಲ್ಲಿ ಪ್ರಕರಣ ಬಾಕಿಯಿದೆ” ಎಂಬ ಸೂಚನೆ ಇರುವ ಬೋರ್ಡ್ ಅನ್ನು ಅಲ್ಲಿ ಸ್ಥಾಪಿಸಿದ್ದರು. ಹೆಚ್ಚಿನ ತನಿಖೆಯಲ್ಲಿ, ಈ ಬೋರ್ಡ್ ಆರೋಪಿ ಹರೀಶ್ ಕುಮಾರ್ ಎಂಬವರಿಂದ ಹಾಕಲಾಗಿದೆ ಎಂಬ ಮಾಹಿತಿ ಸಂಬಂಧಿಕರು ಹಾಗೂ ಸ್ಥಳೀಯರಿಂದ…

ಮುಂದೆ ಓದಿ..
ಸುದ್ದಿ 

ಸ್ವತ್ತಿನ ವಿವಾದ: ಜಮೀನಿಗೆ ಬೋರ್ಡ್ ಹಾಕಿ ಬೆದರಿಕೆ

ಬೆಂಗಳೂರು, ಜುಲೈ 19:2025ಸ್ವಂತ ಜಮೀನಿನಲ್ಲಿ ಮನೆ ಕಟ್ಟಲು ಹೋಗಿದ್ದ ವ್ಯಕ್ತಿಗೆ ಸ್ಥಳೀಯರು ಬೆದರಿಕೆ ಹಾಕಿದ ಘಟನೆ ನಡೆದಿದೆ. ಗೋವಿಂದರಾಜು ತಮ್ಮ ಪತ್ನಿಯಿಂದ 2023ರ ಮೇ 29ರಂದು 50×80 ಅಡಿ ಗಾತ್ರದ ನಿವೇಶನವನ್ನು ಹಕ್ಕು ಬಿಡುಗಡೆ ಮೂಲಕ ಪಡೆದಿದ್ದರು. ಆದರೆ 2024ರಿಂದ ಯಾರೋ ಅಪರಿಚಿತರು “ಲೋಕಾಯುಕ್ತದಲ್ಲಿ ಪ್ರಕರಣ ಬಾಕಿಯಿದೆ” ಎಂದು ಬೋರ್ಡ್ ಹಾಕಿದ್ದರು. ದಿನಾಂಕ 21/04/2025 ರಂದು ದೂರುದಾರರು ಸ್ಥಳಕ್ಕೆ ಹೋದಾಗ, ಹರೀಶ್ ಕುಮಾರ್, ರವಿ ಮತ್ತು ನಾರಾಯಣ ಎಂಬ ಮೂವರು ಆರೋಪಿಗಳು ಬಂದು ಜಗಳವಾಡಿ, “ಇಲ್ಲಿಗೆ ಬರಬೇಡಿ, ಬೋರ್ಡ್ ತೆಗೆಯಿರಿ” ಎಂದು ಹೇಳಿ, ದೂರು ನೀಡಿದರೆ ಜೀವ ಬೆದರಿಕೆ ಹಾಕಿದರು. ಮತ್ತೆ 10/05/2025 ರಂದು ಅವರು ಸ್ಥಳಕ್ಕೆ ಹೋದಾಗ ಮತ್ತೆ ಬೆದರಿಕೆ ನೀಡಿ, ಜಮೀನನ್ನು ಮಾರಲು ಪ್ರಯತ್ನಿಸಿದಾಗ ಖರೀದಿದಾರರಿಗೂ “ಪ್ರಕರಣ ಇದೆ, ಕೊಳ್ಳಬೇಡಿ” ಎಂದು ಹೇಳಿ ಹಣಕ್ಕೂ ಒತ್ತಡ ಹಾಕಿದರು. ಈ ಹಿನ್ನೆಲೆಯಲ್ಲಿ ಗೋವಿಂದರಾಜು ಅವರು ನ್ಯಾಯಾಲಯದ…

ಮುಂದೆ ಓದಿ..
ಸುದ್ದಿ 

ಭುವನೇಶ್ವರದಲ್ಲಿ ಬಾಡಿಗೆ ಮನೆ ಹೆಸರಿನಲ್ಲಿ ₹1.09 ಲಕ್ಷ ವಂಚನೆ

ಬೆಂಗಳೂರು, ಜುಲೈ 19:2025 ಮನೆ ಬಾಡಿಗೆ ಕೊಡಬೇಕೆಂದು ಆನ್‌ಲೈನ್‌ನಲ್ಲಿ ಮಾಹಿತಿ ಹಾಕಿದ್ದ ಮಹಿಳೆಗೆ ಮೋಸವಾಗಿರುವ ಘಟನೆ ನಡೆದಿದೆ. ಅಶೀಷ್ ಕುಮಾರ್ ಪಹಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಸೇನೆ ಸೇರುವವನಾಗಿ ಗುರುತಿಸಿಕೊಂಡು ಮನೆ ಬಾಡಿಗೆಗಾಗಿ ಫೋಟೋ ಮತ್ತು ಲೋಕೇಶನ್ ಕಳುಹಿಸಲು ಕೇಳಿದ. ಮಹಿಳೆ ಫೋಟೋ ಕಳುಹಿಸಿದ್ದ ನಂತರ, ಅವನು ₹33,000 ಅಡ್ವಾನ್ಸ್ ನೀಡುತ್ತೇನೆ ಎಂದು ಹೇಳಿದ್ದ. ಆದರೆ ನಂತರ ಗೂಗಲ್ ಪೇ ಮೂಲಕ ₹5 ಹಾಕಿ ನಿಯಮ ಪಾಲಿಸಬೇಕು ಎಂದು ಹೇಳಿ ಹಂತ ಹಂತವಾಗಿ ₹1,09,985 ರೂ. ಹಣ ವಂಚಿಸಲಾಗಿದೆ. ಮಹಿಳೆ ಯಲಹಂಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್‌ ಇಲಾಖೆ ತನಿಖೆ ಆರಂಭಿಸಿದೆ.

ಮುಂದೆ ಓದಿ..
ಸುದ್ದಿ 

ಭೂಮಿ ಖರೀದಿಯ ನೆಪದಲ್ಲಿ ₹1.90 ಕೋಟಿ ವಂಚನೆ – ಪ್ರಕರಣ ದಾಖಲು

ಬೆಂಗಳೂರು ಜುಲೈ 19:2025 ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ಕತ್ರಿ ಹೊಸಹಳ್ಳಿ ಗ್ರಾಮದಲ್ಲಿ ಜಮೀನನ್ನು ಖರೀದಿಸುವ ನೆಪದಲ್ಲಿ ವ್ಯಕ್ತಿಯೊಬ್ಬನಿಗೆ ₹1.90 ಕೋಟಿ ವಂಚಿಸಿದ ಪ್ರಕರಣ ದಾಖಲಾಗಿದೆ. ಮೂರ್ತಿ ನಾಯಕ್ ಅವರು ನೀಡಿದ ದೂರಿನ ವಿವರದ ಪ್ರಕಾರ, ಅವರು ತಮ್ಮ ಸ್ವತ್ತಾದ ಜಮೀನನ್ನು ಜಗದೀಶ್ ಹಾಗೂ ಹನುಮಂತರಾಜು ಎಂಬವರಿಗೆ ಮಾರಾಟ ಮಾಡಲು ನಿರ್ಧಾರ ಮಾಡಿದ್ದರು. ಅವರು ಜಮೀನು ನೋಡಿ ಒಳ್ಳೆಯ ಬೆಲೆಗೆ ಮಾರಾಟ ಮಾಡಿಸುತ್ತೇವೆ ಎಂದು ನಂಬಿಸಿ, ದಿನಾಂಕ 24/06/2025 ರಂದು ಜಮೀನನ್ನು ತಮ್ಮ ಹೆಸರಿಗೆ ನೊಂದಾಯಿಸಿಕೊಂಡರು. ಮೊದಲ ಹೆಜ್ಜೆಯಾಗಿ ₹1.5 ಲಕ್ಷ ನೀಡಿದ್ದರು. ಉಳಿದ ಹಣವನ್ನು ನಂತರ ಚೆಕ್ ಮೂಲಕ ನೀಡುವುದಾಗಿ ಭರವಸೆ ನೀಡಿದರೂ ಅದನ್ನು ಪಾಲಿಸಲಿಲ್ಲ. ಜುಲೈ 7ರಂದು ಹನುಮಂತರಾಜು ಪೀಡಿತರನ್ನು ತಮ್ಮ ಮನೆಗೆ ಕರೆಯಿಸಿ, ಪತ್ನಿಗೆ ಧಮ್ಕಿ ನೀಡಿದರಂತೆ. ಹಣ ನೀಡದಿದ್ದರೆ ಪತಿಯ ಜೀವಕ್ಕೆ ಅಪಾಯವೆಂದು ಬೆದರಿಸಿದ ಕಾರಣ, ಪತ್ನಿ ಮನೆಯಲ್ಲಿದ್ದ ₹1.90 ಕೋಟಿ…

ಮುಂದೆ ಓದಿ..
ಸುದ್ದಿ 

ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ – ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು, ಜುಲೈ 19:2025 ಮುತ್ತುಗದಹಳ್ಳಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ 56 ವರ್ಷದ ಷಣ್ಮುಗೆ ಕುಮಾರ್ ಎಂಬುವವರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಗಾಯಗೊಂಡಿದ್ದಾರೆ. ಅವರು ಪ್ರತಿ ದಿನ ವಾಕಿಂಗ್ ಹೋಗುವವರಾಗಿದ್ದು, 17/07/2025 ರಂದು ಬೆಳಗ್ಗೆ 7:45ರ ವೇಳೆ ಮುತ್ತುಗದಹಳ್ಳಿ ರಸ್ತೆಯಲ್ಲಿ ನಡೆಯುತ್ತಿರುವಾಗ, KA05 EZ 7604 ನಂಬರಿನ ಮೋಟಾರ್ ಸೈಕಲ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಓಡಿಸಿ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ನಂತರ ಸಾರ್ವಜನಿಕರು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ದೂರಿನ ಆಧಾರದ ಮೇಲೆ 281, 125(A) BNS rw 187 IMV ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ರಾಜನಕುಂಟೆ ಪೊಲೀಸರು ಮುಂದಿನ ತನಿಖೆ ಮುಂದುವರೆಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ದಲಿತ ನಾಯಕರು ಜಾತಿ ನಿಂದನೆಗೆ ಗುರಿ – ಅಂಗಡಿ ಮಾಲೀಕನ ವಿರುದ್ಧ ಅಟ್ರಾಸಿಟಿ ಪ್ರಕರಣ

ಬೆಂಗಳೂರು , ಜುಲೈ 19:2025 ಅಂಚಿಪಾಳ್ಯ (ಶ್ರೀಕಂಠಪುರ) ಮೂಲದ ದಲಿತ ಸ್ವಾಭಿಮಾನಿ ಸೇವಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ಹಾಗೂ ಸಂಘದ ಇತರ ಸದಸ್ಯರು ಜಾತಿ ನಿಂದನೆಗೆ ಗುರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬ್ಯಾತ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಸ್ಥಳೀಯ ರಾಜನಕುಂಟೆ ಪೊಲೀಸ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಜಮ್ಮ ಅವರ ಪ್ರಕಾರ, ದಿನಾಂಕ 17.07.2025ರಂದು ಮಧ್ಯಾಹ್ನ ಸುಮಾರು 12:15ಕ್ಕೆ ಸಂಘಟನೆಯ ಸಭೆಗೆ ತೆರಳುತ್ತಿದ್ದ ವೇಳೆ ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಜಿ.ಸಿ. ಚನ್ನಕೇಶವ, ಸದಸ್ಯರು ರಾಜ್, ರೈನಿ, ಉಮಾಕ್ಷಿ, ವೆಂಕಟೇಶ್‌ ಅವರೊಂದಿಗೆ ಅವರು ಬ್ಯಾತ ಗ್ರಾಮದ “ಶ್ರೀ ಪೂರ್ವಿಕ ಎಂಟರ್‌ಪ್ರೈಸಸ್” ಅಂಗಡಿಯಲ್ಲಿ ವಿರಾಮ ಪಡೆದು ನೀರು ಹಾಗೂ ಜ್ಯೂಸ್ ಖರೀದಿಸಲು ಪ್ರಯತ್ನಿಸಿದರು. ಆದರೆ ಅಂಗಡಿಯ ಮಾಲೀಕ ಜೀವನ್ ಕುಮಾರ್, “ನಿಮ್ಮಂತಹ ಮಾದಿಗರು ಮತ್ತು ಹೊಲೆಯರು ಅಂಗಡಿಯೊಳಗೆ ಬರಬಾರದು. ನಿಮ್ಮ ಜಾತಿಯ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಿಗೂ…

ಮುಂದೆ ಓದಿ..
ಸುದ್ದಿ 

ಅಮೆಜಾನ್ ಶಾಖೆಯಿಂದ 50 ಮೊಬೈಲ್‌ಗಳು ಕಳವು – ಆರು ಉದ್ಯೋಗಿಗಳ ಮೇಲೆ ಆರೋಪ

ಬೆಂಗಳೂರು, ಜುಲೈ 19: 2025 ನಗರದ ಮಲೆಶ್ವರಂ ವೆಸ್ಟ್‌ನ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಅಮೆಜಾನ್ ಸೆಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಪ್ರತಿನಿಧಿ ಹೆಚ್.ಡಿ. ಪರಮೇಶ್ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಸ್ಥೆಯ ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ನಾರ್ಥ್ ಪಾರ್ಕ್ (ಬಂಡಿಕೊಗೇಹಳ್ಳಿ) ಶಾಖೆಯಿಂದ ಒಟ್ಟು 50 ಮೊಬೈಲ್ ಫೋನ್‌ಗಳು ಕಳವಾಗಿವೆ ಎಂಬುದಾಗಿ ತಿಳಿಸಿದ್ದಾರೆ. ದಿನಾಂಕ 09 ಜುಲೈ 2025 ರಂದು ನಡೆದ ಆಡಿಟ್‌ ವೇಳೆ 50 ಮೊಬೈಲ್‌ಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದ್ದು, ಕಂಪನಿಯ ಸೆಕ್ಯೂರಿಟಿ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರು ಉದ್ಯೋಗಿಗಳು ಕೆಲಸದ ಸಮಯದಲ್ಲೇ ಒಟ್ಟು 9 ಫೋನ್‌ಗಳನ್ನು ಕಳವು ಮಾಡುತ್ತಿರುವುದು ದೃಢಪಟ್ಟಿದೆ. ಆರೋಪದೊಳಗಾದವರು: ಇಂದ್ರಜೀತ್ ಲಹಾ ಶಿವಂ ಕೆ.ಆರ್ ಪಾಂಡೆ ಆಕಾಶ್ ಕುಮಾರ್ ವಿಕಾಸ್ ಕುಮಾರ್ ರೋಹಿತ್ ಕುಮಾರ್ ರಾಮ್ ರಾಜೇಶ್ ಕುಮಾರ್ ರಾಮ್ ಈ ಕುರಿತಂತೆ ಕಂಪನಿಯ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ…

ಮುಂದೆ ಓದಿ..