ಕ್ಲಿಕ್ ರೈಡ್ ಪಾರ್ಕಿಂಗ್ ಏರಿಯಾದಿಂದ ಬೈಕ್ ಕಳವು: ಹೈದರಾಬಾದ್‌ನಿಂದ ವಾಪಸ್ ಬಂದಾಗ ಆತಂಕದಲ್ಲಾದ ಗ್ರಾಹಕ
ಬೆಂಗಳೂರು, ಜುಲೈ 9: 2025ಕ್ಲಿಕ್ ರೈಡ್ ಎಂಬ ಬಾಡಿಗೆ ಆಧಾರಿತ ಬೈಕ್ ಸೇವೆಯ ಪಾರ್ಕಿಂಗ್ ಪ್ರದೇಶದಿಂದ ಗ್ರಾಹಕರೊಬ್ಬರ ಬೈಕ್ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ. ಬಾಡಿಗೆ ಸೇವೆಯ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಮೂಡಿಸುತ್ತಿರುವ ಈ ಘಟನೆ ಈಗ ಪೊಲೀಸರ ತನಿಖೆಗೆ ಕಾರಣವಾಗಿದೆ. ರಾಜೀವ್ ಕುಮಾರ್ ಆರ್ ಅವರು ತಮ್ಮ ಬೈಕ್ ಅನ್ನು ದಿನಾಂಕ 25 ಜೂನ್ 2025, ರಾತ್ರಿ 12:30ಕ್ಕೆ ಹೈದರಾಬಾದ್‌ಗೆ ಪ್ರಯಾಣ ಮಾಡುವ ಮುನ್ನ ಕ್ಲಿಕ್ ರೈಡ್ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದರು. ಒಂದು ವಾರದ ನಂತರ, 02 ಜುಲೈ 2025, ಬೆಳಿಗ್ಗೆ 04:00 ಗಂಟೆಗೆ, ಹೈದರಾಬಾದ್‌ನಿಂದ ಬೆಂಗಳೂರಿಗೆ ಮರಳಿದ ಅವರು ಪಾರ್ಕಿಂಗ್ ಪ್ರದೇಶಕ್ಕೆ ಹೋದಾಗ ತಮ್ಮ ಬೈಕ್ ಕಾಣೆಯಾಗಿರುವುದು ತಿಳಿದುಬಂದಿತು. ತಕ್ಷಣವೇ ಅವರು ಕ್ಲಿಕ್ ರೈಡ್ ಸಿಬ್ಬಂದಿ ಮತ್ತು ಚಾಲಕರೊಂದಿಗೆ ಸಂಪರ್ಕಿಸಿಕೊಂಡರೂ, ಯಾರಿಗೂ ಈ ಕುರಿತಂತೆ ಯಾವುದೇ ಮಾಹಿತಿ ಇಲ್ಲವೆಂದು ಉತ್ತರ ದೊರೆತಿದೆ. ಪಿರ್ಯಾದಿದಾರರು…
ಮುಂದೆ ಓದಿ..
