ಟಿಪ್ಪರ್ನಿಂದ ಬಿದ್ದ ಕಲ್ಲು ಮಹಿಳಾ ಪೇದೆಗೆ ಗಂಭೀರ ಗಾಯ
ಟಿಪ್ಪರ್ನಿಂದ ಬಿದ್ದ ಕಲ್ಲು ಮಹಿಳಾ ಪೇದೆಗೆ ಗಂಭೀರ ಗಾಯ ಗುಡಿಬಂಡೆ: ಬೋಮ್ಮಗಾನಹಳ್ಳಿ ಕೆರೆಯ ಕಟ್ಟೆಯ ಮೇಲಿನ ರಸ್ತೆ ಮೇಲೆ ನಡೆದ ದುರ್ಘಟನೆಯಲ್ಲಿ ಮಹಿಳಾ ಪೊಲೀಸ್ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬತ್ತಲಹಳ್ಳಿ ಗ್ರಾಮದ ಸಮೀಪದ ಜಲ್ಲಿ ಕ್ರಷರ್ನಿಂದ ಚಿಕ್ಕಬಳ್ಳಾಪುರದ ದಿಕ್ಕಿಗೆ ತೆರಳುತ್ತಿದ್ದ ಟಿಪ್ಪರ್ ವಾಹನದಿಂದ ಆಕಸ್ಮಿಕವಾಗಿ ಬಿದ್ದ ದೊಡ್ಡ ಕಲ್ಲು, ಎದುರುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರಳ ಕಾಲಿಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ಹಸೀನಾ (27) ಎಂದು ಗುರುತಿಸಲಾಗಿದ್ದು, ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪೇದೆ ಆಗಿದ್ದಾರೆ. ಸ್ಥಳೀಯರು ಹಾಗೂ ಸಹೋದ್ಯೋಗಿಗಳು ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆಯಿಂದ ಅವರ ಬೈಕ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಟಿಪ್ಪರ್ ವಾಹನದಿಂದ ಕಲ್ಲು ಹೇಗೆ ಬಿದ್ದಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯಿಂದಾಗಿ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಟಿಪ್ಪರ್ ವಾಹನಗಳ ವೇಗದ ಓಟ ಹಾಗೂ…
ಮುಂದೆ ಓದಿ..
