ಮೂರು ಕೋಟಿ ಇನ್ಶುರೆನ್ಸ್ ಹಣಕ್ಕಾಗಿ ಪತಿಯನ್ನೇ ಕೊಂದ ಪತ್ನಿ? — ಸಿ.ಆರ್.ಪಿ.ಎಫ್ ಯೋಧನ ಸಾವು ಸುತ್ತ ಹೊಸ ಅನುಮಾನಗಳು
ಮೂರು ಕೋಟಿ ಇನ್ಶುರೆನ್ಸ್ ಹಣಕ್ಕಾಗಿ ಪತಿಯನ್ನೇ ಕೊಂದ ಪತ್ನಿ? — ಸಿ.ಆರ್.ಪಿ.ಎಫ್ ಯೋಧನ ಸಾವು ಸುತ್ತ ಹೊಸ ಅನುಮಾನಗಳು ಮೂರು ಕೋಟಿ ರೂಪಾಯಿ ಇನ್ಶುರೆನ್ಸ್ ಹಣಕ್ಕಾಗಿ ಪತಿಯನ್ನೇ ಕೊಲೆಗೈದಿರುವ ಆರೋಪದಿಂದ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣ ಮತ್ತೆ ಸುದ್ದಿಯಲ್ಲಿದೆ. ಸಿ.ಆರ್.ಪಿ.ಎಫ್ ಯೋಧ ತಾರೇಶ್ (37) ಅವರ ಸಾವು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಈಗ ಕುಟುಂಬದವರು ಆರೋಪಿಸಿದ್ದಾರೆ. ತಾರೇಶ್ ಅವರ ತಂದೆ ಬಸವರಾಜ್ ಮತ್ತು ತಾಯಿ ಮಂಜುಳಾ ಅವರು ಸೊಸೆ ದಿವ್ಯಾ ಹಾಗೂ ಆಕೆಯ ಸಹೋದರನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಇವರ ಪ್ರಕಾರ, ತಾರೇಶ್ ಅವರ ಹೆಸರಿನಲ್ಲಿ ಸುಮಾರು ₹3 ಕೋಟಿ ಮೌಲ್ಯದ ಇನ್ಶುರೆನ್ಸ್ ಪಾಲಿಸಿಯನ್ನು, ಅವರ ಸಾವಿನ ಕೇವಲ ಮೂರು ತಿಂಗಳ ಮುಂಚೆಯೇ ತೆಗೆದುಕೊಳ್ಳಲಾಗಿತ್ತು. ಘಟನೆ ಹಿನ್ನೆಲೆ.. ತಾರೇಶ್ ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದವರು. ಸುಮಾರು 7 ವರ್ಷಗಳ ಹಿಂದೆ ದಿವ್ಯಾಳೊಂದಿಗೆ ವಿವಾಹವಾಗಿದ್ದರು.ದಂಪತಿಗಳು…
ಮುಂದೆ ಓದಿ..
