“ಅಪರಾಧಿಯ ನಗು, ಬಾಲಕಿಯ ಅಳಲು – ನ್ಯಾಯ ಯಾವಾಗ?”
“ಅಪರಾಧಿಯ ನಗು, ಬಾಲಕಿಯ ಅಳಲು – ನ್ಯಾಯ ಯಾವಾಗ?” ಭಾರತೀಯ ಸಮಾಜವು ತನ್ನ ಸಂಸ್ಕೃತಿ, ಮೌಲ್ಯ ಮತ್ತು ಮಾನವೀಯತೆಯಿಂದ ಜಗತ್ತಿಗೆ ಹೆಸರಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶದ ಗೌರವವನ್ನು ಮಸಿ ಹೊಡೆಯುತ್ತಿವೆ. ಪ್ರತಿದಿನ ಪತ್ರಿಕೆ, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸುವ ರಕ್ತ ಕುದಿಸುವ ಘಟನೆಗಳು ಜನತೆಯಲ್ಲಿ ಆತಂಕ, ಕೋಪ ಹಾಗೂ ನಿರಾಸೆಯನ್ನು ಉಂಟುಮಾಡುತ್ತಿವೆ. ಪ್ರತಿ ಕಿರಿಯ ಹುಡುಗಿಯೂ ಭಯದಿಂದ ಬದುಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮ ಸಮಾಜದ ದುರಂತವಾಗಿದೆ. ಒಬ್ಬ ಬಾಲಕಿ ಶಾಲೆಗೆ, ಕಾಲೇಜಿಗೆ, ಅಥವಾ ಬೀದಿಗೆ ಹೋಗುವಾಗ ಪೋಷಕರ ಹೃದಯದಲ್ಲಿ ಭಯವಿರಬಾರದು ಎಂಬುದೇ ಪ್ರತಿ ಕುಟುಂಬದ ಕನಸು. ಆದರೆ ಇಂದಿನ ಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಈಗಾಗಲೇ ಭಾರತದ ಕಾನೂನುಗಳಲ್ಲಿ ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಕೆಲ ಸಂದರ್ಭಗಳಲ್ಲಿ ಮರಣದಂಡನೆಗೂ ಅವಕಾಶವಿದೆ. ಆದರೆ ನ್ಯಾಯಾಂಗ ಪ್ರಕ್ರಿಯೆಯು ಅನಾವಶ್ಯಕವಾಗಿ ದೀರ್ಘವಾಗುತ್ತಿರುವುದರಿಂದ ಅಪರಾಧಿಗಳು…
ಮುಂದೆ ಓದಿ..
