ಕೆ–ಸೆಟ್ ಪರೀಕ್ಷೆ ವಿವಾದ: ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಘಟನೆ – ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶದ ಜ್ವಾಲೆ!
ಕೆ–ಸೆಟ್ ಪರೀಕ್ಷೆ ವಿವಾದ: ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಘಟನೆ – ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶದ ಜ್ವಾಲೆ! ಬಳ್ಳಾರಿ: ರಾಜ್ಯದಾದ್ಯಂತ ನಿನ್ನೆ ನಡೆದ ಕೆ–ಸೆಟ್ (K-SET) ಪರೀಕ್ಷೆ ವೇಳೆ ನಡೆದ ಘಟನೆಯೊಂದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪರೀಕ್ಷಾ ನಿಯಮಗಳ ಹೆಸರಿನಲ್ಲಿ ಕೆಲವು ಕೇಂದ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಮತ್ತು ಕೈಕಡಗಗಳನ್ನು ಬಿಚ್ಚಿಸಲು ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂಬ ಆರೋಪ ಹೊರಬಿದ್ದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಕೋಪ ಉಕ್ಕಿ ಹರಿಯುತ್ತಿದೆ. ಕೆಲವು ತಿಂಗಳ ಹಿಂದೆ ನೀಟ್ (NEET) ಪರೀಕ್ಷೆ ಸಮಯದಲ್ಲೂ ವಿದ್ಯಾರ್ಥಿಗೆ ಜನಿವಾರ ತೆಗೆಯಲು ಒತ್ತಾಯಿಸಿದ ಘಟನೆ ನೆನಪಿನಲ್ಲೇ ಇರುವಾಗ, ಇದೀಗ ಕೆ–ಸೆಟ್ ಪರೀಕ್ಷೆಯಲ್ಲಿಯೂ ಇಂತಹ ಅಸಹ್ಯಕರ ಘಟನೆ ನಡೆದಿರುವುದು ಖೇದಕಾರಿಯಾಗಿದೆ. ರಾಜ್ಯದ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಈ ಬಾರಿ ಕೆ–ಸೆಟ್ ಪರೀಕ್ಷೆ ನಡೆದಿತ್ತು. ಸುಮಾರು…
ಮುಂದೆ ಓದಿ..
