ವರ್ಕ್ ಫ್ರಂ ಹೋಮ್ ಮೋಸ — ಆರ್ಥಿಕ ನಿರ್ಭರತೆಯ ಹೆಸರಿನಲ್ಲಿ ಮಹಿಳೆಯರ ಭರವಸೆಯ ದೌರ್ಜನ್ಯ.
ವರ್ಕ್ ಫ್ರಂ ಹೋಮ್ ಮೋಸ — ಆರ್ಥಿಕ ನಿರ್ಭರತೆಯ ಹೆಸರಿನಲ್ಲಿ ಮಹಿಳೆಯರ ಭರವಸೆಯ ದೌರ್ಜನ್ಯ. ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವ “ವರ್ಕ್ ಫ್ರಂ ಹೋಮ್” ವಂಚನೆಯ ಘಟನೆ ಕೇವಲ ಆರ್ಥಿಕ ಅಪರಾಧವಲ್ಲ — ಅದು ಸಾವಿರಾರು ಮಹಿಳೆಯರ ಜೀವನದ ಮೇಲಿನ ಕ್ರೂರ ಹಕ್ಕುಚ್ಯುತಿಯಾಗಿದೆ. ಮನೆಯಲ್ಲೇ ಕೆಲಸ ಮಾಡಿ ಸ್ವಲ್ಪ ಆದಾಯ ಗಳಿಸೋ ಭರವಸೆಯ ಮೇಲೆ 8,000 ಕ್ಕೂ ಹೆಚ್ಚು ಮಹಿಳೆಯರು ತಮ್ಮ ಸಂಗ್ರಹವನ್ನು ಹೂಡಿದ್ದರು. ಆದರೆ, “ಅಗರಬತ್ತಿ ಪ್ಯಾಕಿಂಗ್” ಎಂಬ ಸುಲಭವಾದ ಮಾತಿನ ಹಿಂದೆ ಕೋಟ್ಯಂತರ ರೂ.ಗಳ ಮೋಸ ನಡೆದಿದೆ. ಇದು ಕೇವಲ ಒಂದು ವ್ಯಕ್ತಿಯ ಕೃತ್ಯವಲ್ಲ, ಬದಲಿಗೆ ಮಹಿಳೆಯರ ಶ್ರಮ, ನಂಬಿಕೆ ಮತ್ತು ಆರ್ಥಿಕ ಅಸುರಕ್ಷತೆಯ ದುರುಪಯೋಗದ ನಿದರ್ಶನ. ಪತಿಯ ನಿಧನದಿಂದ, ಕುಟುಂಬದ ಭಾರದಿಂದ ಅಥವಾ ಉದ್ಯೋಗದ ಕೊರತೆಯಿಂದ ಮನೆಯಿಂದ ಕೆಲಸ ಹುಡುಕುತ್ತಿರುವ ಮಹಿಳೆಯರ ಭಾವನೆಗಳ ಮೇಲೆ ಈ ರೀತಿಯ ವಂಚನೆಗಳು ನಡೆಯುತ್ತಿರುವುದು ಸಾಮಾಜಿಕವಾಗಿ ಅಸಹ್ಯಕರ. ಮಹಿಳಾ…
ಮುಂದೆ ಓದಿ..
