ಅಂಕಣ 

ಭಾರತೀಕರಣ………..

ಭಾರತೀಕರಣ……….. ಇಸ್ಲಾಮೀಕರಣ, ಕೇಸರೀಕರಣ ಎಂಬ ಎರಡು ಸಂಘರ್ಷಗಳ ಪ್ರಸ್ತುತ ಧಾರ್ಮಿಕ, ಸಾಮಾಜಿಕ ಸನ್ನಿವೇಶಗಳಲ್ಲಿ ಭಾರತೀಕರಣ ಎಂಬ ಪರಿಹಾರ ಹೆಚ್ಚು ಸೂಕ್ತವಾದದ್ದು ಮತ್ತು ದೇಶದ ಸಮಗ್ರತೆಯನ್ನು ಕಾಪಾಡಲು ಅತ್ಯವಶ್ಯವಾದದ್ದು. ಭಾರತೀಕರಣವೆಂದರೆ ಸಂವಿಧಾನದ ಶೀರ್ಷಿಕೆಯ ಪ್ರಾರಂಭದಲ್ಲಿ ಹೇಳಿರುವ ” ಭಾರತೀಯರಾದ ನಾವು……” ಎನ್ನುವ ಘೋಷ ವಾಕ್ಯ. ಈ ನಿಟ್ಟಿನಲ್ಲಿ ಆರ್ ಎಸ್ ಎಸ್ ಎಂಬ ಸಂಘಟನೆ ವಾಸ್ತವದಲ್ಲಿ ಏನು ಮತ್ತು ಅದು ನಿಜಕ್ಕೂ ದೇಶದ ಸಮಗ್ರ ಹಿತಾಸಕ್ತಿಯನ್ನು ಬಯಸುವುದಾದರೆ ಏನು ಮಾಡಬಹುದು ಎಂಬ ಚರ್ಚೆಯ ಸುತ್ತ ಒಂದು ಪಕ್ಷಿ ನೋಟ…….. ಆರ್ ಎಸ್ ಎಸ್ ಒಂದು ದೇಶಭಕ್ತ ಸಂಘಟನೆಯೇ : ಹೌದು, ಆರ್ ಎಸ್ ಎಸ್ ಹಿಂದುತ್ವದ ಸಂಘಟನೆಯೇ : ಹೌದು, ಆರ್ ಎಸ್ ಎಸ್ ಸನಾತನ ಧರ್ಮದ ಸಂಘಟನೆಯೇ : ಹೌದು, ಆರ್ ಎಸ್ ಎಸ್ ವರ್ಣಾಶ್ರಮ ವ್ಯವಸ್ಥೆಯನ್ನು ಬೆಂಬಲಿಸುತ್ತದೆಯೇ : ಹೌದು, ಈಗ ಮೇಲ್ನೋಟಕ್ಕೆ ಅದನ್ನು ವಿರೋಧಿಸುತ್ತದೆ,…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು : ಹೋಂಸ್ಟೇ ಬಾತ್‌ರೂಮ್‌ನಲ್ಲಿ ಯುವತಿಯ ಅನುಮಾನಾಸ್ಪದ ಸಾವು – ಪೊಲೀಸರ ತನಿಖೆ ಮುಂದುವರಿಕೆ

ಚಿಕ್ಕಮಗಳೂರು : ಹೋಂಸ್ಟೇ ಬಾತ್‌ರೂಮ್‌ನಲ್ಲಿ ಯುವತಿಯ ಅನುಮಾನಾಸ್ಪದ ಸಾವು – ಪೊಲೀಸರ ತನಿಖೆ ಮುಂದುವರಿಕೆ ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಯುವತಿ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ರಂಜಿತಾ (27) ಎಂದು ಗುರುತಿಸಲಾಗಿದ್ದು, ಅವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿಯಾಗಿದ್ದಾರೆ. ರಂಜಿತಾ ಎಂಎಸ್ಸಿ ಪದವೀಧರರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅಕ್ಟೋಬರ್ 25ರಂದು ನಡೆದ ಈ ಘಟನೆ ಕುರಿತಂತೆ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ರಂಜಿತಾ ತಮ್ಮ ಸ್ನೇಹಿತೆ ರೇಖಾ ಅವರೊಂದಿಗೆ ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಹಾಂದಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಸ್ನಾನಕ್ಕೆ ಹೋದ ರಂಜಿತಾ ಬಹಳ ಹೊತ್ತಾದರೂ ಹೊರಬರದೇ ಇದ್ದ ಕಾರಣ ಅನುಮಾನಗೊಂಡ ರೇಖಾ ಬಾಗಿಲು ತೆರೆದು ನೋಡಿದಾಗ,…

ಮುಂದೆ ಓದಿ..
ಸುದ್ದಿ 

“ಮಾರಿಗಲ್ಲು”: ಶಿರಸಿ ಹಳ್ಳಿಯ ನೈಜ ಹಾಗೂ ಮಾಯಾಜಾಲದ ಕಥೆ

“ಮಾರಿಗಲ್ಲು”: ಶಿರಸಿ ಹಳ್ಳಿಯ ನೈಜ ಹಾಗೂ ಮಾಯಾಜಾಲದ ಕಥೆ ZEE5 ಮತ್ತು PRK ಪ್ರೊಡಕ್ಷನ್ಸ್ ಹೊಸ ವೆಬ್ ಸರಣಿಯಾದ ‘ಮಾರಿಗಲ್ಲು’ ಮೂಲಕ ಕರ್ನಾಟಕದ ಹೃದಯದ ಕಥೆಯನ್ನು ಪ್ರಸ್ತುತಪಡಿಸುತ್ತಿದೆ. ಈ ಸರಣಿ 1990ರ ದಶಕದ ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯ ಹಿನ್ನೆಲೆ ಮೇಲೆ ಕಟ್ಟಲಾಗಿದೆ. ಕಥೆಯಲ್ಲಿ ಕದಂಬರ ಕಾಲಘಟ್ಟದ ಇತಿಹಾಸ ಮತ್ತು ಪರಂಪರೆ ಕೂಡ ಕಾಣಸಿಗುತ್ತದೆ. ಕದಂಬರ ರಾಜಧಾನಿಯಾಗಿರುವ ಬನವಾಸಿ ಅದರ ಪ್ರಮುಖ ಹಿನ್ನೆಲೆ. ಈ ಹಳ್ಳಿಯ ರಾಜಮನೆಯ ಐತಿಹಾಸಿಕ ನಿದರ್ಶನಗಳು, ನಂಬಿಕೆ, ಸ್ವಾರ್ಥ ಮತ್ತು ದುರಾಸೆಗಳಿಂದ ಬಳಲುವ ಮಾನವ ಭಾವನೆಗಳನ್ನು ಸರಣಿಯ ಪಾತ್ರಗಳ ಮೂಲಕ ವಿಸ್ತಾರವಾಗಿ ತೋರಿಸಲಾಗಿದೆ. ಪ್ರಪ್ರಥಮವಾಗಿ ವೆಬ್ ಸೀರೀಸ್‌ನಲ್ಲಿ ರಂಗಾಯಣ ರಘು ಮತ್ತು ಗೋಪಾಲ್ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ತೇಜ್, ಎಸ್.ಎಸ. ಸೂರಜ್, ಪ್ರಶಾಂತ್ ಸಿದ್ದಿ ಮುಂತಾದವರು ಸಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಮೂಲತಃ ಶಿರಸಿಯವರಾದ ಈ…

ಮುಂದೆ ಓದಿ..
ಸುದ್ದಿ 

ಸಾವಿನಲ್ಲೂ ಒಂದಾದ ಜೀವಸಂಗಾತಿಗಳು — ಬೀದರ್‌ನಲ್ಲಿ ಮನಕಲಕುವ ಘಟನೆ

ಸಾವಿನಲ್ಲೂ ಒಂದಾದ ಜೀವಸಂಗಾತಿಗಳು — ಬೀದರ್‌ನಲ್ಲಿ ಮನಕಲಕುವ ಘಟನೆ ಬೀದರ್‌: ಜೀವಮಾನವಿಡೀ ಒಟ್ಟಾಗಿ ನಡೆದು, ಬದುಕಿನ ಎಲ್ಲ ನೋವು-ಸುಖ ಹಂಚಿಕೊಂಡ ವೃದ್ದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಈ ಮನಕಲಕುವ ಘಟನೆ ಕಮಲನಗರ ತಾಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ನಡೆದಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗುಂಡಪ್ಪ ಹೋಡಗೆ (85) ಹಾಗೂ ಅವರ ಪತ್ನಿ ಲಕ್ಷ್ಮಿಬಾಯಿ ಹೋಡಗೆ (83) ಕಳೆದ ಹಲವು ವರ್ಷಗಳಿಂದ ಪರಸ್ಪರ ಆಶ್ರಯವಾಗಿ ಬದುಕುತಿದ್ದರು. ಸೋಮವಾರ ಬೆಳಿಗ್ಗೆ ಲಕ್ಷ್ಮಿಬಾಯಿ ಹೋಡಗೆ ನಿಧನರಾದರು. ಪತ್ನಿಯ ಸಾವಿನ ಸುದ್ದಿ ತಿಳಿದ ಕೆಲವೇ ಕ್ಷಣಗಳಲ್ಲಿ ಪತಿ ಗುಂಡಪ್ಪ ಕೂಡಾ ಕೊನೆಯುಸಿರೆಳೆದರು. ಗ್ರಾಮಸ್ಥರ ಪ್ರಕಾರ, ಇಬ್ಬರೂ ಪರಸ್ಪರದ ಪ್ರೀತಿಗೆ ಜೀವಂತ ಸಾಕ್ಷಿಯಾಗಿದ್ದರು. ಅಳಿಯದ ಬಾಂಧವ್ಯ ಮತ್ತು ಜೀವನಪರ್ಯಂತದ ನಂಟಿನ ಈ ಕತೆಯು ಗ್ರಾಮದಲ್ಲೆಲ್ಲಾ ದುಃಖದ ವಾತಾವರಣ ನಿರ್ಮಿಸಿದೆ. ಸ್ಥಳೀಯರು ಹೇಳುವಂತೆ, “ಇಬ್ಬರ ಪ್ರೀತಿಯ ಬಾಂಧವ್ಯ ಸ್ವರ್ಗದಲ್ಲೂ ಮುಂದುವರಿಯಲಿ” ಎಂಬ ಶ್ರದ್ಧಾಂಜಲಿ ಮಾತುಗಳು ಎಲ್ಲರ ತುಟಿಗಳಲ್ಲಿ…

ಮುಂದೆ ಓದಿ..
ಸುದ್ದಿ 

ಬೆಳಗಾವಿ: 2 ಸಾವಿರ ರೂಪಾಯಿಗಾಗಿ ಸ್ನೇಹ ಹತ್ಯೆಯಲ್ಲಿ ಅಂತ್ಯ

ಬೆಳಗಾವಿ: 2 ಸಾವಿರ ರೂಪಾಯಿಗಾಗಿ ಸ್ನೇಹ ಹತ್ಯೆಯಲ್ಲಿ ಅಂತ್ಯ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಳ ಗ್ರಾಮದಲ್ಲಿ ಅಚ್ಚರಿಗೊಳಿಸುವ ಘಟನೆ ನಡೆದಿದೆ. ಕೇವಲ ₹2,000 ಹಣದ ವಿವಾದ ಯುವಕನ ಪ್ರಾಣ ಕಿತ್ತುಕೊಂಡಿದೆ. ಮೃತನನ್ನು ಗಿರಿಯಾಳ ಗ್ರಾಮದ ಮಂಜುನಾಥ ಗೌಡರ (30) ಎಂದು ಗುರುತಿಸಲಾಗಿದೆ. ಕಳೆದ ವಾರ, ಅವನು ತನ್ನ ಸ್ನೇಹಿತ ದಯಾನಂದ ಗುಂಡ್ಲೂರ ಅವರಿಂದ ₹2,000 ಸಾಲವಾಗಿ ಪಡೆದಿದ್ದ. ಒಂದು ವಾರದೊಳಗೆ ಹಣವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದ ಮಂಜುನಾಥ, ಅವಧಿ ಕಳೆದರೂ ಹಣ ಕೊಡದ ಕಾರಣ ಇಬ್ಬರ ಮಧ್ಯೆ ಬಿರುಸಿನ ವಾಗ್ವಾದ ನಡೆದಿದೆ. ನಿನ್ನೆ ರಾತ್ರಿ ನಡೆದ ವಾದವು ಹಿಂಸಾತ್ಮಕ ಸ್ವರೂಪ ಪಡೆದು, ಬೆಳಗಿನ ಜಾವ ದಯಾನಂದನು ಸಿಟ್ಟಿನಲ್ಲೇ ಕೊಡ್ಲಿ (ಚಾಕು) ಯಿಂದ ಮಂಜುನಾಥನ ಮೇಲೆ ದಾಳಿ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಂಜುನಾಥ ಗೌಡರ ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ದಯಾನಂದ ಗುಂಡ್ಲೂರ ಪೊಲೀಸರಿಗೆ…

ಮುಂದೆ ಓದಿ..
ಸುದ್ದಿ 

ವಿವಾಹಿತ ಮಹಿಳೆಯ ಮೇಲೆ ಪಾಗಲ್ ಪ್ರೇಮಿಯ ಕಾಟ — ಹಲ್ಲೆ, ಬೆದರಿಕೆ ಪ್ರಕರಣ ದಾಖಲೆ!

ವಿವಾಹಿತ ಮಹಿಳೆಯ ಮೇಲೆ ಪಾಗಲ್ ಪ್ರೇಮಿಯ ಕಾಟ — ಹಲ್ಲೆ, ಬೆದರಿಕೆ ಪ್ರಕರಣ ದಾಖಲೆ! ಬೆಂಗಳೂರು ನಗರದಲ್ಲಿ ವಿವಾಹಿತ ಮಹಿಳೆಯೊಬ್ಬರ ಮೇಲೆ ಪಾಗಲ್ ಪ್ರೇಮಿಯ ಕಿರುಕುಳದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯು ನೀಡಿದ ದೂರು ಆಧರಿಸಿ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಸಂತೋಷ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಹಿತಿಯ ಪ್ರಕಾರ, ಸಂತೋಷ್ ರೆಡ್ಡಿ ಎಂಬಾತನು ಫ್ಯಾಷನ್ ಡಿಸೈನರ್ ಆಗಿರುವ ಗೃಹಿಣಿಯನ್ನು ತನ್ನ ಸಂಬಂಧಿಯ ಮದುವೆಗೆ ಕುರ್ತಾ ಡಿಸೈನ್ ಮಾಡಿಕೊಡಿ ಎಂದು ಸಂಪರ್ಕಿಸಿದ್ದ. ಆರಂಭದಲ್ಲಿ ವೃತ್ತಿಪರವಾಗಿ ಆರಂಭವಾದ ಈ ಪರಿಚಯ, ನಂತರ ಸ್ನೇಹಕ್ಕೆ ತಿರುಗಿದ್ದು, ಬಳಿಕ ಮಹಿಳೆಯ ಕುಟುಂಬದವರಿಗೂ ಆತ ಪರಿಚಿತರಾದ. “ನಿಮ್ಮ ಬಿಸಿನೆಸ್‌ಗೆ ನಾನು ಹೂಡಿಕೆ ಮಾಡ್ತೀನಿ” ಎಂದು ಹೇಳಿ ಮಹಿಳೆಯ ವಿಶ್ವಾಸವನ್ನು ಗೆದ್ದಿದ್ದ ಸಂತೋಷ್, ನಂತರ ಮಹಿಳೆಯ ಮೇಲೆ ಪ್ರೀತಿಗೆ ಒತ್ತಡ ಹೇರುತ್ತಾ ಬಂದಿದ್ದಾನೆ. ಮಹಿಳೆ ಪ್ರೇಮ ಪ್ರಸ್ತಾವವನ್ನು ತಿರಸ್ಕರಿಸಿದಾಗ, ಆತ ಕೋಪಗೊಂಡು ನಿಜಬಣ್ಣ ತೋರಿಸಿದ್ದಾನೆ.…

ಮುಂದೆ ಓದಿ..
ಸುದ್ದಿ 

3 ಕೋಟಿಗೂ ಅಧಿಕ ವಂಚನೆ..! ನಡು ರಸ್ತೆಯಲ್ಲಿ ಮಹಿಳೆಗೆ ಮಂಗಳಾರತಿ..!

3 ಕೋಟಿಗೂ ಅಧಿಕ ವಂಚನೆ..! ನಡು ರಸ್ತೆಯಲ್ಲಿ ಮಹಿಳೆಗೆ ಮಂಗಳಾರತಿ..! ಹಾಸನ: ಹಣ ಡಬಲ್ ಮಾಡ್ತೇವೆ ಅಂತ ಹೇಳಿ ಲಕ್ಷಾಂತರ ಮಹಿಳೆಯರನ್ನು ಮೋಸ ಮಾಡಿದ್ದೆಂಬ ಆರೋಪದ ಮೇಲೆ ಹಾಸನದ ಅರಳಿಪೇಟೆಯ ಮಹಿಳೆಯೊಬ್ಬಳು ಇದೀಗ ಎಲ್ಲೆಡೆ ಚರ್ಚೆಯ ವಿಷಯವಾಗಿದ್ದಾಳೆ. ಬಣ್ಣ ಬಣ್ಣದ ಮಾತುಗಳಿಂದ ವಿಶ್ವಾಸ ಗೆದ್ದು, ಚೀಟಿ ವ್ಯವಹಾರ ಹೆಸರಿನಲ್ಲಿ ಹಣ ಕಲೆ ಹಾಕಿದ್ದಾಳೆ ಎನ್ನಲಾಗಿದೆ. ಜ್ಯೋತಿ ಡ್ರೆಸ್‌ಮೇಕರ್ಸ್‌ ಎಂಬ ಟೈಲರಿಂಗ್ ಶಾಪ್ ನಡೆಸುತ್ತಿದ್ದ ಹೇಮಾವತಿ ಎಂಬ ಮಹಿಳೆ, “ಕೊಡಚಾದ್ರಿ ಚಿಟ್ಸ್‌ನಲ್ಲಿ ನಾನು 1 ಕೋಟಿ ಹೂಡಿಕೆ ಮಾಡಿದ್ದೇನೆ” ಎಂದು ಸುಳ್ಳು ಹೇಳಿ ನೂರಾರು ಜನರಿಂದ ಹಣ ಸಂಗ್ರಹಿಸಿದ್ದಾಳೆ. ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಪಡೆದು, ಪಂಗನಾಮ ಕೊಡ್ತೇನೆ, ಲಾಭ ಸಿಗ್ತೆ ಅಂತಾ ನಂಬಿಸಿ ಕೊನೆಗೆ ಕೈ ಕಟ್ಟಿ ನಿಂತಿದ್ದಾಳೆ. ಮೋಸ ಹೋಗಿರುವವರ ಪ್ರಕಾರ, ಕೆಲವರಿಂದ 45 ಲಕ್ಷಕ್ಕೂ ಹೆಚ್ಚು ಹಣ ಪಡೆದಿದ್ದಾಳೆ ಎನ್ನಲಾಗಿದೆ. ವಿದೇಶದಲ್ಲಿ ಮಗಳ ಓದು ಮತ್ತು…

ಮುಂದೆ ಓದಿ..
ಸುದ್ದಿ 

ಬೆಂಗಳೂರು : ಹೈಕೋರ್ಟ್ ಸ್ಥಳಾಂತರ ವಿಚಾರ – ಸರ್ಕಾರದ “ಸ್ಥಳ ಪರಿಶೀಲನೆ” ಮಾತು ಜನರ ಕಿವಿಗೆ ಮಿಠಾಯಿ?

ಬೆಂಗಳೂರು : ಹೈಕೋರ್ಟ್ ಸ್ಥಳಾಂತರ ವಿಚಾರ – ಸರ್ಕಾರದ “ಸ್ಥಳ ಪರಿಶೀಲನೆ” ಮಾತು ಜನರ ಕಿವಿಗೆ ಮಿಠಾಯಿ? ಹೈಕೋರ್ಟ್ ಸ್ಥಳಾಂತರದ ಹೆಸರಿನಲ್ಲಿ ಸರ್ಕಾರ ಜನರ ಮನಸ್ಸಿನಲ್ಲಿ ಮತ್ತೊಂದು ಸಂಶಯ ಬೀಜ ಬಿತ್ತಿದಂತಾಗಿದೆ. ಕಬ್ಬನ್ ಪಾರ್ಕ್‌ನ ಐತಿಹಾಸಿಕ ಹೃದಯ ಭಾಗದಲ್ಲಿರುವ ಹೈಕೋರ್ಟ್‌ ಕಟ್ಟಡವನ್ನು ಸ್ಥಳಾಂತರಿಸುವ ವಿಚಾರ ಈಗ ತಲೆ ಎತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಯ ಪ್ರಕಾರ, ಕೆಲವು ವಕೀಲರು ರೇಸ್ ಕೋರ್ಸ್ ಪ್ರದೇಶವನ್ನು ಹೈಕೋರ್ಟ್‌ಗೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ “ಸ್ಥಳ ಪರಿಶೀಲನೆ” ಮಾಡಲಿದೆ ಅಂತೆ! ಆದರೆ ಪ್ರಶ್ನೆ ಏನೆಂದರೆ — ಸರ್ಕಾರಕ್ಕೆ ಇಷ್ಟೊಂದು ತುರ್ತು ಏಕೆ? ನಗರ ಹೃದಯದಲ್ಲಿರುವ ಹಸಿರು ಪ್ರದೇಶವನ್ನು ಮತ್ತೊಮ್ಮೆ “ಆಸಕ್ತಿ ವಲಯ” ಮಾಡಬೇಕೆಂಬ ಬಯಕೆ ಇದೆಯೇ? ರೇಸ್ ಕೋರ್ಸ್ ಈಗಾಗಲೇ ಲಾಬಿ ಶಕ್ತಿ ಮತ್ತು ಭೂ ರಾಜಕೀಯದ ಆಟದ ಮೈದಾನ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೈಕೋರ್ಟ್ ಸ್ಥಳಾಂತರದ ಹೆಸರಿನಲ್ಲಿ…

ಮುಂದೆ ಓದಿ..
ಸುದ್ದಿ 

ಮಂಡ್ಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸಂಭ್ರಮಾಚರಣೆ – ಮಹಿಳೆಯರ ನೈರ್ಮಲ್ಯಕ್ಕಾಗಿ ಉಚಿತ ಮುಟ್ಟಿನ ಕಪ್‌ ವಿತರಣೆ ಅಭಿಯಾನಕ್ಕೆ ಚಾಲನೆ

ಮಂಡ್ಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸಂಭ್ರಮಾಚರಣೆ – ಮಹಿಳೆಯರ ನೈರ್ಮಲ್ಯಕ್ಕಾಗಿ ಉಚಿತ ಮುಟ್ಟಿನ ಕಪ್‌ ವಿತರಣೆ ಅಭಿಯಾನಕ್ಕೆ ಚಾಲನೆ ಮಂಡ್ಯ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸಂಭ್ರಮಾಚರಣೆಯನ್ನು ಇಂದು ಮಂಡ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಶುದ್ಧತೆಯ ಕಡೆಗಿನ ಸಾರ್ವಜನಿಕ ಜಾಗೃತಿ ಕುರಿತು ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಯಿತು. ಈ ಸಂಭ್ರಮದ ವೇದಿಕೆಯಲ್ಲಿ ಮಹಿಳೆಯರ ನೈರ್ಮಲ್ಯ ಮತ್ತು ಆರೋಗ್ಯದ ಪರವಾಗಿ ರಾಜ್ಯದಾದ್ಯಂತ ಉಚಿತ ಮಟ್ಟಿನ ಕಪ್‌ ವಿತರಣೆ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಮಹಿಳೆಯರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪರಿಸರದ ಮೇಲಿನ ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಯುವ ಉದ್ದೇಶ ಈ ಅಭಿಯಾನದ ಹಿಂದಿದೆ. ಕಾರ್ಯಕ್ರಮದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಪಿ.ಎಂ. ನರೇಂದ್ರಸ್ವಾಮಿ, ಮಂಡಳಿಯ ಮಾಜಿ ಅಧ್ಯಕ್ಷ ಶ್ರೀ ಪಿ. ರವಿಕುಮಾರ್, ವಿಧಾನಪರಿಷತ್…

ಮುಂದೆ ಓದಿ..
ಸುದ್ದಿ 

ದೊಡ್ಡಬಳ್ಳಾಪುರ: ವೇಗದ ವಾಹನದ ಹಿಟ್ ಅಂಡ್ ರನ್ – ಇಬ್ಬರು ಯುವಕರ ದುರ್ಮರಣ

ದೊಡ್ಡಬಳ್ಳಾಪುರ: ವೇಗದ ವಾಹನದ ಹಿಟ್ ಅಂಡ್ ರನ್ – ಇಬ್ಬರು ಯುವಕರ ದುರ್ಮರಣ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇಂದು ಮುಂಜಾನೆ ನಡೆದ ದಾರುಣ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಘಾತ ಉಂಟುಮಾಡಿದೆ. ಮಾಹಿತಿಯ ಪ್ರಕಾರ, ರಾಮಯ್ಯನಪಾಳ್ಯದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟವರನ್ನು ಚಿಕ್ಕತಿಮ್ಮನಹಳ್ಳಿ ಮೂಲದ ನಂದನ್ ಕುಮಾರ್ (22) ಹಾಗೂ ರವಿಕುಮಾರ್ (24) ಎಂದು ಗುರುತಿಸಲಾಗಿದೆ. ಪ್ರತಿದಿನದಂತೆ ಇಬ್ಬರೂ ಬೆಳಗ್ಗೆ ಕೆಲಸಕ್ಕಾಗಿ ತಮ್ಮ ಊರಿಂದ ದೊಡ್ಡಬಳ್ಳಾಪುರ ನಗರ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಅಜ್ಞಾತ ವಾಹನವು ಅವರಿಬ್ಬರಿಗೂ ಅಪ್ಪಳಿಸಿದೆ. ಢಿಕ್ಕಿಯ ತೀವ್ರತೆಯಿಂದ ಯುವಕರಿಬ್ಬರೂ ಭಾರೀ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬಳಿಕ ಅಜ್ಞಾತ ವಾಹನ ನಿಲ್ಲಿಸದೇ ಪರಾರಿಯಾದರೆಂದು ಸಾಕ್ಷಿಗಳು ತಿಳಿಸಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಿಟ್…

ಮುಂದೆ ಓದಿ..