ನಾನ್ವೆಜ್ ಬ್ರೇಕ್ಫಾಸ್ಟ್ಗೆ ಬಿಜೆಪಿ ಕೆಂಡಾಮಂಡಲ.
ನಾನ್ವೆಜ್ ಬ್ರೇಕ್ಫಾಸ್ಟ್ಗೆ ಬಿಜೆಪಿ ಕೆಂಡಾಮಂಡಲ. ರಾಜ್ಯ ರಾಜಕೀಯದಲ್ಲಿ ಇಂದು ‘ಬ್ರೇಕ್ಫಾಸ್ಟ್ ಪಾಲಿಟಿಕ್ಸ್’ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಉಪಹಾರ ಸಭೆಯಲ್ಲಿ ಪಾಲ್ಗೊಂಡಿದ್ದು, ಇದರ ವಿರುದ್ಧ ಬಿಜೆಪಿ ಈಗಾಗಲೇ ತೀವ್ರ ಕಿಡಿಕಾರಿದೆ. ಜೆಡಿಎಸ್ ಕೂಡ ತನ್ನದೇ ಶೈಲಿಯಲ್ಲಿ ವಾಗ್ದಾಳಿ ನಡೆಸಿದೆ. ಬೆಳಗ್ಗೆಯೇ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ನಡೆದ ಈ ಸಭೆಗೆ ಸಂಬಂಧಿಸಿ ಸಿಎಂ ನೀಡಿದ ಕೆಲವು ಹೇಳಿಕೆಗಳು ದೊಡ್ಡ ಚರ್ಚೆಗೆ ಗ್ರಾಸವಾಗಿವೆ. “ನಾನೇ ಐದು ವರ್ಷ ಸಿಎಂ” ಎಂದು ಇತ್ತೀಚೆಗೆ ದೃಢವಾಗಿ ಹೇಳಿದ್ದ ಸಿದ್ದರಾಮಯ್ಯ, ಇಂದು “ರಾಜಕೀಯ ಯಾರಿಗೂ ಶಾಶ್ವತವಲ್ಲ” ಎಂದು ಬೇಳೂರು ಗೋಪಾಲಕೃಷ್ಣರ ಜೊತೆ ಮಾತನಾಡಿದ್ದರಿಂದ ರಾಜಕೀಯ ವೈರಾಗ್ಯದ ಮಾತು ಆಡಿದರೇ? ಎಂಬ ಅನುಮಾನ ಹುಟ್ಟಿದೆ. ಈ ಕುರಿತು ಸ್ಪಷ್ಟನೆ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ, “ಸಿದ್ದರಾಮಯ್ಯ ಯಾವ ವೈರಾಗ್ಯದ ಮಾತನ್ನೂ ಆಡಿಲ್ಲ. ಅವರು ತುಂಬಾ ಖುಷಿಯಾಗಿದ್ದರು. ಇವೆಲ್ಲಾ ರಾಜಕೀಯದಲ್ಲಿ ಸಹಜ” ಎಂದು…
ಮುಂದೆ ಓದಿ..
