ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ
ಪ್ರತಿ ವರ್ಷದಂತೆ ಈ ವರ್ಷವೂ ದತ್ತ ಜಯಂತಿ ಸಡಗರದಿಂದ ಸಂಪನ್ನಗೊಂಡಿದೆ. ಮೊದಲನೇ ದಿನ ಸತಿ ಅನಸೂಯ ದೇವಿಯವರ ಪೂಜೆ ಹಾಗೂ ಸಂಕೀರ್ತನ ಯಾತ್ರೆ ಆರಂಭವಾಗುತ್ತಿದೆ. ಈ ಸಂಕೀರ್ತನಾ ಯಾತ್ರೆಗೆ ಮುನ್ನ ಧಾರ್ಮಿಕ ಜಾಗೃತಿ ಸಭೆಯನ್ನು ಉದ್ದೇಶಿಸಿ, ಖ್ಯಾತ ವೈದ್ಯೆಯಾಗಿರುವ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ಮಾತನಾಡಲಿದ್ದಾರೆ. ನಮ್ಮ ಬೇಡಿಕೆಗಳು ಹಳೆಯದೇ. “ದತ್ತಪೀಠ ಬೇರೆ, ಬಾಬಾ ಬುಡನ್ ದರ್ಗಾ ಬೇರೆ” ಎನ್ನುವುದನ್ನು ಕಂದಾಯ ದಾಖಲೆಗಳು ಸ್ಪಷ್ಟಪಡಿಸುತ್ತವೆ. ಈ ದಾಖಲೆಗಳ ಹಿನ್ನಲೆಯಲ್ಲಿ ಹಿಂದೂಗಳಿಗೆ ನ್ಯಾಯ ದೊರಕಬೇಕು. ಈಗ ಅರ್ಧ ನ್ಯಾಯ ಸಿಕ್ಕಿದೆ; ಪೂರ್ಣ ನ್ಯಾಯ ಸಿಗಬೇಕು. ಆ ಪೂರ್ಣ ನ್ಯಾಯ ಸಿಗುವವರೆಗೂ ಭಕ್ತಿ ಹಾಗೂ ಶಕ್ತಿಯ ಈ ಆಂದೋಲನವನ್ನು ಮುಂದುವರಿಸುವುದು ಅನಿವಾರ್ಯ. ದತ್ತಾತ್ರೇಯರೂ, ಸತಿ ಅನಸೂಯ ದೇವಿಯೂ ಕೂಡ ನಮ್ಮ ಈ ಆಶಯವನ್ನು ಆಶೀರ್ವದಿಸುತ್ತಿದ್ದಾರೆ. ಅವರ ಭಕ್ತರೂ ಪೂರ್ಣ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತಾರೆ. ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಮಾಡುವ ಅವಕಾಶ…
ಮುಂದೆ ಓದಿ..
