ಶಾಂತಿನಗರದಲ್ಲಿ ದುರಂತ ಅಪಘಾತ: ಬೈಕ್ ಸವಾರರನ್ನು ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ – ಇಬ್ಬರ ದುರ್ಮರಣ
ಶಾಂತಿನಗರದಲ್ಲಿ ದುರಂತ ಅಪಘಾತ: ಬೈಕ್ ಸವಾರರನ್ನು ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ – ಇಬ್ಬರ ದುರ್ಮರಣ ಬೆಂಗಳೂರು, ನವೆಂಬರ್ 02: ನಗರದ ಶಾಂತಿನಗರ ಬಸ್ ನಿಲ್ದಾಣದ ಸಮೀಪ ನಡುರಾತ್ರಿ ವೇಳೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ವರದಿಗಳ ಪ್ರಕಾರ, ರೆಡ್ ಸಿಗ್ನಲ್ನ ಬಳಿ ನಿಂತಿದ್ದ ಎರಡು ಬೈಕ್ಗಳಿಗೆ ರಿಚ್ಮಂಡ್ ಸರ್ಕಲ್ ದಿಕ್ಕಿನಿಂದ ಬಂದ ಆಂಬ್ಯುಲೆನ್ಸ್ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಇಸ್ಮಾಯಿಲ್ (40) ಹಾಗೂ ಸಮೀನ ಬಾನು ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ತೀವ್ರತೆ ಇಷ್ಟು ಭೀಕರವಾಗಿದ್ದು, ಆಂಬ್ಯುಲೆನ್ಸ್ ಸುಮಾರು 50 ಮೀಟರ್ ದೂರಕ್ಕೆ ಬೈಕ್ಗಳನ್ನು ಎಳೆದೊಯ್ದ ನಂತರ ರಸ್ತೆ ಬದಿಯ ಪೊಲೀಸ್ ಚೌಕಿಗೆ ಗುದ್ದಿದೆ ಎಂದು ಸಾಕ್ಷಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ…
ಮುಂದೆ ಓದಿ..
