ಸುದ್ದಿ 

ಬೆಂಗಳೂರು ಅಪಘಾತ – ಗಾರೆ ಕಾರ್ಮಿಕನ ಸಾವು

ಬೆಂಗಳೂರು 30 ಆಗಸ್ಟ್ 2025ನಗರದ ಸಂಪಿಗೆಹಳ್ಳಿ ಮುಖ್ಯರಸ್ತೆಯಲ್ಲಿರುವ ಸೋವೆನ್ ಸಾಚಿ ಅಪಾರ್ಟಮೆಂಟ್ ನಿರ್ಮಾಣ ಕಾರ್ಯ ನಡೆಯುತ್ತಿರುವ ವೇಳೆ ದುರಂತ ಸಂಭವಿಸಿದೆ. ಉಮಿಯಾ ಕನ್‌ಸ್ಟ್ರಕ್ಷನ್ ಲಿಮಿಟೆಡ್ ಕಂಪೆನಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಸಕಾಲ್ ದಾಸ್ (37) ಹಾಗೂ ನೀರಜ್ ಕುಮಾರ್ (22) ರವರು 27-08-2025 ರಂದು 6ನೇ ಮಹಡಿಯಲ್ಲಿ ಗೋಡೆ ಕೆಲಸ ಮಾಡುತ್ತಿದ್ದಾಗ ಅಕಸ್ಮಿಕವಾಗಿ ಬಾಲ್ಕನಿ ಸಾಬ್ ಕುಸಿದು ಬಿದ್ದಿದೆ. ಘಟನೆಯಲ್ಲಿ ಸಕಾಲ್ ದಾಸ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ನೀರಜ್ ಕುಮಾರ್ ಅವರಿಗೆ ಬೆನ್ನು, ಕೈ, ಕಾಲುಗಳಿಗೆ ತೀವ್ರ ಗಾಯವಾಗಿದ್ದು, ಪ್ರಸ್ತುತ ಯಲಹಂಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಕುರಿತು ಸುರೇಶ್ ಕುಮಾರ್ ಅವರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಂಪನಿಯ ಸಿವಿಲ್ ಎಂಜಿನಿಯರ್ ಆಸೀಪ್ ನಾಯ್ಕ, ಪ್ರಾಜೆಕ್ಟ್ ಮ್ಯಾನೇಜರ್ ಶೈಲೇಶ್, ಸೆಂಟ್ರಿಂಗ್ ಮಸ್ಕಿ ಸಮೀರ್ ಮತ್ತು ಲೇಬರ್ ಕಾಂಟ್ರಾಕ್ಟರ್ ಚಿತ್ರರಂಜನ್…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹಣಕಾಸು ಮೋಸ ಪ್ರಕರಣ

ಬೆಂಗಳೂರು, ಆಗಸ್ಟ್ 30:2025ನಗರದ ದೊಡ್ಡಬೊಮ್ಮಸಂದ್ರ ದಲ್ಲಿ ಮತ್ತೊಂದು ಆನ್‌ಲೈನ್ ಹಣಕಾಸು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಗಿರೀಶ್ ಎಸ್ ಅವರ ಹೇಳಿಕೆಯ ಪ್ರಕಾರ, ಅಪರಿಚಿತ ವ್ಯಕ್ತಿಗಳು ಹೂಡಿಕೆ ಮಾಡುವ ನೆಪದಲ್ಲಿ ಅವರಿಂದ ಹಲವು ಹಂತಗಳಲ್ಲಿ ಹಣ ಪಡೆದುಕೊಂಡಿದ್ದಾರೆ. ಅಸ್ಲಾಂ, ಸಲ್ಮಾನ್, ಹೊಸೈನ್ ಹಾಗೂ ನಯಾ ಲೆವಿಶಾಲ್ ಎಂಬವರ ಖಾತೆಗಳ ಮೂಲಕ ₹17,800, ₹49,800, ₹3,99,800, ₹2,00,000 ಮತ್ತು ₹3,00,000 ಸೇರಿ ಒಟ್ಟು ₹6,67,400 ಹಣವನ್ನು ದೂರುದಾರರಿಂದ ವಂಚನೆ ಮಾಡಿ ಕಸಿದುಕೊಂಡಿದ್ದಾರೆ. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬ ನಂಬಿಕೆ ಮೂಡಿಸಿ, ಯಾವುದೇ ಲಾಭವನ್ನು ನೀಡದೇ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಈ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಹಿರಿಯೂರಿನಲ್ಲಿ 19 ವರ್ಷದ ಯುವತಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹಿರಿಯೂರು: 19 ವರ್ಷದ ವಧು ಕಾಣೆಯಾಗಿರುವ ಪ್ರಕರಣ ಮೂರ್ತಿ ಅವರ ಪ್ರಕಾರ, ಅವರು ಡ್ರೈವರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 25-02-2025 ರಂದು ಹಿರಿಯರ ಸಮ್ಮುಖದಲ್ಲಿ ರಂಗಲಕ್ಷ್ಮಿ (ರಮಾ) (19) ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ದಂಪತಿ ಸಾಮಾನ್ಯವಾಗಿ ಸಂತೋಷಕರ ಜೀವನ ನಡೆಸುತ್ತಿದ್ದರು. ಆದರೆ ದಿನಾಂಕ 25-08-2025 ರಂದು ಬೆಳಿಗ್ಗೆ 11.00 ಗಂಟೆಗೆ ಪತ್ನಿ ರಂಗಲಕ್ಷ್ಮಿ ಮನೆಯಿಂದ ಹೊರಟು ಮತ್ತೆ ವಾಪಸ್ಸಾಗಿಲ್ಲ. ಮನೆಯಲ್ಲಿ ಒಂದು ಕಾಗದ ಬರೆದು ಬಿಚ್ಚಿಟ್ಟು ಹೋಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ. ಮನೆಯವರು ಎಲ್ಲೆಡೆ ಹುಡುಕಿದರೂ ಯಾವುದೇ ಸುಳಿವು ಸಿಗದ ಕಾರಣ ಮೂರ್ತಿ ಅವರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ಬಂದು ಕಾಣೆಯಾದ ಪತ್ನಿಯನ್ನು ಪತ್ತೆಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಕಾಣೆಯಾದ ಯುವತಿ ವಿವರಗಳು: ಹೆಸರು: ರಂಗಲಕ್ಷ್ಮಿ (ರಮಾ) ವಯಸ್ಸು: 19 ವರ್ಷ ಎತ್ತರ: ಸುಮಾರು 5 ಅಡಿ ಮುಖ: ಕೋಲು ಮುಖ ಕೂದಲು: ಕಪ್ಪು ಮಾತನಾಡುವ ಭಾಷೆ: ಕನ್ನಡ…

ಮುಂದೆ ಓದಿ..
ಸುದ್ದಿ 

ಮೂಲ – ಅನುವಾದ – ರೂಪಾಂತರ – ಭಾಷಾಂತರ ಇತ್ಯಾದಿ ಇತ್ಯಾದಿ…….

ಮೂಲ – ಅನುವಾದ – ರೂಪಾಂತರ – ಭಾಷಾಂತರ ಇತ್ಯಾದಿ ಇತ್ಯಾದಿ……. ಮೂಲ ಕೃತಿ ಮತ್ತು ಅನುವಾದ ಅಥವಾ ಭಾಷಾಂತರ, ಮೂಲ ಸಿನಿಮಾ ಅಥವಾ ರಿಮೇಕ್ ಸಿನಿಮಾ ಇವುಗಳಲ್ಲಿ ಯಾವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಯಾವುದು ಅತಿ ಹೆಚ್ಚು ಕ್ರಿಯಾತ್ಮಕತೆಯನ್ನು ಹೊಂದಿರುತ್ತದೆ ಎಂಬ ಚರ್ಚೆಯ ಸುತ್ತ ಇನ್ನೊಂದಿಷ್ಟು ಅಭಿಪ್ರಾಯಗಳು….. ಇತ್ತೀಚೆಗೆ ಎದೆಯ ಹಣತೆ ಎಂಬ ಕನ್ನಡದ ಮೂಲ ಕೃತಿಯ ಅನುವಾದ Heart lamp ಎಂಬ ಇಂಗ್ಲಿಷ್ ಕೃತಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿತು. ಅದರ ಮೂಲ ಭಾನು ಮುಷ್ತಾಕ್ ಅವರು ಬರೆದ ಕನ್ನಡ ಭಾಷೆಯ ಕೃತಿ. ಅದನ್ನು ಅತ್ಯಂತ ಅಚ್ಚುಕಟ್ಟಾಗಿ ಇಂಗ್ಲೀಷಿಗೆ ಅನುವಾದಿಸಿದವರು ದೀಪಾ ಭಾಸ್ತಿ. ಆ ಪ್ರಶಸ್ತಿಯನ್ನು ಮತ್ತು ಪ್ರಶಸ್ತಿಯ ಮೊತ್ತವನ್ನು ಇಬ್ಬರಿಗೂ ಸಮನಾಗಿ ಹಂಚಲಾಗಿದೆ. ಈ ಸಂದರ್ಭದಲ್ಲಿ ಅನುವಾದಕರಿಗೆ ಸಹ ಮೂಲ ಕೃತಿಯ ಲೇಖಕರಷ್ಟೇ ಮಹತ್ವ ನೀಡಬೇಕು ಎಂಬುದಾಗಿ ಒಂದಷ್ಟು ಚರ್ಚೆಗಳು ನಡೆಯುತ್ತಿವೆ.…

ಮುಂದೆ ಓದಿ..
ಸುದ್ದಿ 

ಹಾನಗಲ್ ತಾಲೂಕಿನ ಇನಾಂ ನಿರಲಗಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿ ದುರ್ಮರಣ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಇನಾಂ ನಿರಲಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ದುರ್ಮರಣವಾಗಿದೆದಿನಾಂಕ:27/08/2025 ರಂದು ಮುಂಜಾನೆ: 04-30 ಗಂಟೆಯಿಂದ ಮುಂಜಾನೆ: 06-00 ಗಂಟೆಯ ನಡುವಿನ ಅವಧಿಯಲ್ಲಿ ಇನಾಂ ನೀರಲಗಿ ಗ್ರಾಮದ ಪ್ರಭು ಚನ್ನಪ್ಪ ಹಾವೇರಿ ಹಾಗು ಅಭಿ ಫಕ್ಕೀರಪ್ಪ ಶಿಗ್ಗಾಂವಿ ಇವರು ಸಾ” ಇನಾಂ ನಿರಲಗಿ ಇವರ ಜಮೀನಿಗೆ ಮೃತ ಅಣ್ಣಪ್ಪ ಕ್ಯಾಸನೂರ ಮತ್ತು ಗಾಯಾಳು ಮಂಜುನಾಥ ಸಿದ್ದಮ್ಮನವರ ಸಾ:ಇನಾಂನೀಲರಲಗಿ ತಾ:ಹಾನಗಲ್ಲ ಇವರು ಇಬ್ಬರು ಬೆಳಗಿನಜಾವ ಗಣಪತಿ ಮಂಟಪಕ್ಕೆ ಅಲಂಕಾರ ಮಾಡಲು ಮಾವಿನ ತೋರಣ ಮತ್ತು ಗೋವಿನ ಜೋಳದ ತೆನೆ, ಬಾಳೆ ದಿಂಡನ್ನು ತರಲು ಜಮೀನಿಗೆ ಹೋಗಿದ್ದು ಆರೋಪಿತರಾದ ಪ್ರಭು ಹಾವೇರಿ ಮತ್ತು ಅಭಿ ಶಿಗ್ಗಾಂವ ಇವರ ಕೂಡಿಕೊಂಡು ತಮ್ಮ ಜಮೀನಿನಲ್ಲಿ ವಿದ್ಯುತ್ ತಂತಿಯನ್ನು ಏಳೆದರೆ ಜೀವಹಾನಿ ಸಂಬವಿಸುತ್ತದೆ ಅಂತಾ ಗೊತ್ತಿದ್ದರೂ ಕೂಡಾ ತಮ್ಮ ಗೋವಿನ ಜೋಳ ಜಮೀನಿನಲ್ಲಿ ಇರುವ ಜೋಡು ವಿದ್ಯುತ್…

ಮುಂದೆ ಓದಿ..
ಸುದ್ದಿ 

ತಾಲೂಕಿನ ಆಡುರನಲ್ಲಿ ಬೈಕ್ ಕಳ್ಳತನ

ತಾಲೂಕಿನ ಆಡುರನಲ್ಲಿ ಬೈಕ್ ಕಳ್ಳತನಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಮತ್ತೆ ಹೆಚ್ಚಾದ ಬೈಕ್ ಕಳ್ಳರ ಹಾವಳಿದಿನಾಂಕ 17/08/2025ರಂದು ಹಾನಗಲ್ ನಗರದ ಪ್ರಕಾಶ ರಾಮಪ್ಪ ಬಾಗಾಸುರ ಇವರ ಮನೆಯ ಮುಂದೆ ನಿಲ್ಲಿಸಿದ್ದ ತಮ್ಮ ಕಪ್ಪು ಮತ್ತು ಸಿಲ್ವರ ಬಣ್ಣದ ಹೀರೊ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ ಕೆಎ-27/ಇ-6370 ಚೆಸ್ಸಿ ನಂ: MBLHAW127NHB00871, ಇಂಜಿನ್ ನಂ: HA11EYNHB00319 ಅಂದಾಜು 40,000/- ರೂ ಬೆಲೆಯದ್ದು ಹಾಗೂ ಮತ್ತೊಬ್ಬ ಮಹಾಂತೇಶ್ ತಂದೆ ಬಸವಣ್ಣಪ್ಪ ಮಾದಿಗಮಿನ ಇವರ ನೀಲಿ ಮತ್ತು ಪರ್ಪಲ್ ಬಣ್ಣದ ಹೀರೋ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂಬರ ಕೆಎ-53/ಇಸಿ-5298 ಚೆಸ್ಸಿ ನಂ: MBLHA10AMDHF14141, ಇಂಜಿನ್ ನಂ: HA10EJDHF23408 ಅಂದಾಜು 40,000/- ರೂ ಬೆಲೆಯವು ದಿನಾಂಕ: 17-08-2025 ರಂದು ರಾತ್ರಿ 11-00 ಘಂಟೆಯಿಂದ ದಿನಾಂಕ: 18-08-2025 ರಂದು ಬೆಳಿಗ್ಗೆ 07-00 ಘಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು…

ಮುಂದೆ ಓದಿ..
ಅಂಕಣ 

ಅಲೆಮಾರಿ ಬುಡಕಟ್ಟು ಜನಾಂಗ ಮತ್ತು ಒಳ ಮೀಸಲಾತಿ……..

ಅಲೆಮಾರಿ ಬುಡಕಟ್ಟು ಜನಾಂಗ ಮತ್ತು ಒಳ ಮೀಸಲಾತಿ…….. ಅಲೆಮಾರಿಗಳ ಅಲೆದಾಟಕ್ಕೆ ಪೂರ್ಣವಿರಾಮ ನೀಡಬೇಕಾದ ಸಮಯ ಬಂದಿದೆ. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಊಟ, ಬಟ್ಟೆ ಮತ್ತು ವಸತಿ ಬಹಳ ಮುಖ್ಯವಾದದ್ದು. ಆಧುನಿಕ ನಾಗರಿಕ ಸಮಾಜ ಅಭಿವೃದ್ಧಿ ಹೊಂದಿದಂತೆ ಊಟ, ಬಟ್ಟೆಗಿಂತ ಮನೆ ಎಂಬ ವಾಸ ಸ್ಥಳವೇ ಬಹುಮುಖ್ಯವಾಯಿತು. ಪ್ರತಿಯೊಬ್ಬರೂ ಮುಖ್ಯವಾಗಿ ಮಧ್ಯಮ ವರ್ಗದವರು ಮತ್ತು ಬಡವರ ಜೀವನದ ಬಹುದೊಡ್ಡ ಆಸೆ ಸ್ವಂತ ಮನೆ ಹೊಂದುವುದು. ಆದರೆ ಇಲ್ಲಿ ನೆಲೆಯೇ ಇಲ್ಲದ ಅಲೆಮಾರಿ ಬುಡಕಟ್ಟು ಜನಾಂಗದ ಈಗ ಮುಖ್ಯ ವಾಹಿನಿಯ ಗಮನ ಸೆಳೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಒಳ ಮೀಸಲಾತಿಯ ವಿಷಯ ವಿವಾದವಾಗಿ, ಕೊನೆಗೆ ಪರಿಹಾರ ರೂಪದಲ್ಲಿ ಒಂದು ಸೂತ್ರ ಸಿದ್ಧವಾಗಿದೆ. ಆ ಸೂತ್ರದ ಪ್ರಕಾರ ಅಲೆಮಾರಿ ಜನಾಂಗವನ್ನು ಮೂರನೇ ವರ್ಗಕ್ಕೆ ಸೇರಿಸಿ ಅಲ್ಲಿಯ ಬಲಿಷ್ಠರೊಂದಿಗೆ ಸ್ಪರ್ಧಿಸಲು ಹೇಳಿರುವುದರಿಂದ ಅಲೆಮಾರಿ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂಬ ಕೂಗು ಎಲ್ಲೆಡೆಯೂ ಕೇಳಿ ಬರುತ್ತಿದೆ…

ಮುಂದೆ ಓದಿ..
ಅಂಕಣ 

ಭತ್ತದ ರಾಶಿಯ ರೈತ,ಚಿನ್ನದ ಅಂಬಾರಿಯ ರಾಜ,ದಸರಾ ಉದ್ಘಾಟನೆಯ ರಾಜಕೀಯ……..

ಭತ್ತದ ರಾಶಿಯ ರೈತ,ಚಿನ್ನದ ಅಂಬಾರಿಯ ರಾಜ,ದಸರಾ ಉದ್ಘಾಟನೆಯ ರಾಜಕೀಯ…….. ದಸರಾ ಉದ್ಘಾಟನೆ ಮಾಡುವವರ ಬಗ್ಗೆ ವಾದ ವಿವಾದಗಳು ಸಾಕಷ್ಟು ಕಾವೇರಿ ಇರುವಾಗ,ಕಾವೇರಿಯ ತಟದ ಕಾಯಕ ಜೀವಿ, ಉಳುವ ಯೋಗಿ ಮಣ್ಣಿನ ಮಗನೊಬ್ಬನ ಸ್ವಗತ……. ನಾನು ರಾಜನಲ್ಲ,ನಾನೊಬ್ಬ ಸಾಮಾನ್ಯ ಕೃಷಿಕ, ನನಗೆ ಅರಮನೆ ಇಲ್ಲ,ನನಗಿರುವುದು ಹೆಂಚಿನ ಮನೆ, ನಾನು ಆನೆಯ ಮೇಲೆ ಕುಳಿತು ಓಡಾಡುವವನಲ್ಲ,ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಿಸುವವನು ನಾನು, ಸಿಂಹಾಸನ ಮೇಲೆ ಕುಳಿತುಕೊಳ್ಳುವವ ನಾನಲ್ಲ,ಹುಲ್ಲು ಹಾಸಿನ ಮೇಲೆ ಮಲಗುವವ ನಾನು, ಛತ್ರ ಚಾಮರ ಬೀಸಣಿಕೆಯ ತಂಪು ಗಾಳಿ ನನಗಿಲ್ಲ,ಬಿಸಿಲಿನ ಝಳದಲ್ಲಿ, ಗಾಳಿಯ ರಭಸಕ್ಕೆ ಭತ್ತದ ರಾಶಿಯ ಹೊಟ್ಟು ತೂರುವವನು ನಾನು, ಭಕ್ಷ್ಯ ಭೋಜನ ತಿನ್ನುವವನಲ್ಲ,ರಾಗಿ, ರೊಟ್ಟಿ, ಜೋಳ, ಮೆಣಸಿನಕಾಯಿ, ಸೊಪ್ಪು, ಗೊಜ್ಜು ತಿನ್ನುವವನು ನಾನು, ಆಳು ಕಾಳು, ಸೇವಕ, ಸೈನಿಕರು ನನಗಿಲ್ಲ,ನನಗೆ ನಾನೇ ಕಾಲಾಳು, ಮೈತುಂಬ ವೈಭವೋಪೇತ ಬಟ್ಟೆ ತೊಡಲು ನಾನು ಅರಸನಲ್ಲ,ಪಂಚೆ, ಜುಬ್ಬ ಕೆಲವೊಮ್ಮೆ ಬರಿಮೈ…

ಮುಂದೆ ಓದಿ..
ಕ್ರೈಂ ಸುದ್ದಿ 

ತಿಳವಳ್ಳಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯ

ತಿಳವಳ್ಳಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಜೂಲೈ 31ನೆ ತಾರಿಕಿನಂದು ಮುಂಜಾನೆ 11 ಗಂಟೆಯ ಸುಮಾರಿಗೆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆದೂರುದಾರ ಮಹಿಳೆ ಮಂಗಳಾ ಮಾದರ ಇವರು ಅವಿವಾಹಿತರಾಗಿದ್ದು ಇವರು ಸುಮಾರು 1 ವರ್ಷ 6ತಿಂಗಳುಗಳಿಂದ ತಿಳವಲ್ಲಿ ಗ್ರಾಮದ ಕೃಷ್ಣಮೂರ್ತಿ ಲಕ್ಷ್ಮಪ್ಪ ಉಡುಗಣಿ ಇವರ ವಿಜಯ ಟೆಕ್ಸಸ್ಟೈಲ್ ಹೆಸರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ ಹೀಗಿದ್ದಾಗ ಈ ಬಟ್ಟೆ ಅಂಗಡಿಯ ಮಾಲೀಕರ ಸ್ವಂತ ಅಣ್ಣನಾದ ಮಹಾಬಲೇಶ್ವರ ಲಕ್ಷ್ಮಪ್ಪ ಉಡುಗಣಿ ಎಂಬಾತನು ಹಿಂದಿನಿಂದಲೂ ಅವರ ಅಣ್ಣನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳಾ ಮಾದರ ಅನ್ನುವ ಮಹಿಳೆಗೆ ಪದೇ ಪದೇ ನೀನು ನನ್ನ ಜೊತೆ ಅಕ್ರಮ ಸಂಬಂಧ ಇಟ್ಟುಕೋ ಎಂದು ಪೀಡಿಸುತ್ತ ಬಂದಿರುತ್ತಾನೆ ಅವಳು ಅದಕ್ಕೆ ಒಪ್ಪದೇ ಇದ್ದಾಗ ನಿನ್ನನ್ನಾ ರೇಪ್ ಮಾಡಿ…

ಮುಂದೆ ಓದಿ..
ಸುದ್ದಿ 

ಸವಣೂರಿನಲ್ಲಿ ಹೆಚ್ಚಿದ ಜೂಜಾಟ ಅಂದರ್ ಬಾಹರ್

ಸವಣೂರಿನಲ್ಲಿ ಹೆಚ್ಚಿದ ಜೂಜಾಟ ಅಂದರ್ ಬಾಹರ್ ಸವಣೂರಿನಲ್ಲಿ ಹೆಚ್ಚಿದ ಜೂಜಾಟ ಅಂದರ್ ಬಾಹರ್ ದಿನಾಂಕ: 24-08-2025 ರಂದು 13-00 ಗಂಟೆ ಸುಮಾರಿಗೆ ಸವಣೂರ ಶಹರದ ಕಲಿವಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು 6-7 ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಆಟ ಆಡಿಸಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಮತ್ತು ನೀವು ಬಂದು ರೇಡ ಮಾಡಿದರೆ ಸಿಗುತ್ತಾರೆ ಅಂತಾ ಆ ಊರಿನ ಒಬ್ಬ ಗ್ರಾಮಸ್ಥ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಕ್ಷಣ ರೇಡ್ ಮಾಡಿದಾಗ ತಪ್ಪಿಸಿಕೊಂಡಿದ್ದಾರೆ ಸದರಿ ವ್ಯಕ್ತಿಗಳ ಮೇಲೆ ಕಲಂ: 87 ಕೆ. ಪಿ. ಯಾಕ್ಟ್ ಅಡಿಯಲ್ಲಿ ಸವಣೂರು ಪೊಲೀಸ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ: ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

ಮುಂದೆ ಓದಿ..