ಯುವಕನ ಮೇಲೆ ಚಾಕು ದಾಳಿ: ಚಿನ್ನದ ಚೈನ್ ಹಾಗೂ ಬೈಕ್ ಲೂಟಿ ಮಾಡಿದ ಅಪರಿಚಿತರು
ಆನೇಕಲ್, ಆಗಸ್ಟ್ 6 — ಆನೇಕಲ್ ಪಟ್ಟಣದ ಸಂತೆ ಬೀದಿ ಹಾಗೂ ಭಜನೆ ಬೀದಿಯ ನಡುವೆ, ಸ್ಕೂಟರ್ನಲ್ಲಿ ಮನೆಗೆ ವಾಪಸ್ಸು ಬರುತ್ತಿದ್ದ ಯುವಕನೊಬ್ಬನ ಮೇಲೆ ಮೂವರು ಅಪರಿಚಿತರು ದಾಳಿ ನಡೆಸಿ, ಚಿನ್ನದ ಚೈನ್ ಕಿತ್ತುಕೊಂಡು, ಸ್ಕೂಟರ್ ಸಹಿತ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಶೇಷಾದ್ರಪ್ಪ ಬಿನ್ ಲೇ: ಹನುಮಂತಪ್ಪ ರವರು ಆನೇಕಲ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರ ಪುತ್ರ ಸುಮನ್ ಅವರು ದಿನಾಂಕ 02-08-2025 ರಂದು ಸಂಜೆ ಸುಮಾರು 7 ಗಂಟೆಗೆ ಬಾಬು ಸ್ಕೂಟರ್ (ನಂ. KA-51-JE-1691) ನಲ್ಲಿ ಆನೇಕಲ್ ಟೌನ್ಗೆ ಹೋಗಿ ಸ್ನೇಹಿತರನ್ನು ಭೇಟಿ ಮಾಡಿ ಮರಳುತ್ತಿದ್ದರು. ಸಂಜೆ ಸುಮಾರು 8:40ರ ಸುಮಾರಿಗೆ, ಭಜನೆ ಬೀದಿ ಹಾಗೂ ಸಂತೆ ಬೀದಿ ಮಾರ್ಗವಾಗಿ ಮನೆಗೆ ಹತ್ತಿರ ಬರುತ್ತಿದ್ದಾಗ, ಒಂದು ಪಲ್ಸರ್ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅವರ ಬೈಕ್ಗೆ ಅಡ್ಡ ಬಂದು ಮುಖಕ್ಕೆ ಹೊಡೆದಿದ್ದಾನೆ.…
ಮುಂದೆ ಓದಿ..
