ಸುರಕ್ಷತಾ ಸಾಧನಗಳಿಲ್ಲದೆ ಪೇಂಟಿಂಗ್ ಕೆಲಸ – ಕಾರ್ಮಿಕನ ದುರ್ಘಟನೆದಲ್ಲಿ ಮರಣ
ಬೆಂಗಳೂರು, ಜುಲೈ 7 2025ಹೆಬ್ಬಾಳದಲ್ಲಿ ನಡೆದ ದುರ್ಘಟನೆಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಇಮಾಮುಲ್ (28) ಎಂಬ ಕಾರ್ಮಿಕನು ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದಾರೆ. ಇಮಾಮುಲ್ ಅವರು ಕಂಟ್ರಾಕ್ಟರ್ ಮಂಜುನಾಥ್ ಮತ್ತು ಇಂಜಿನಿಯರ್ ನವೀನ್ ಅವರ ಬಳಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಜುಲೈ 5ರಂದು ಮಧ್ಯಾಹ್ನ 3:30ರ ಸಮಯದಲ್ಲಿ ಅವರು ಸುರಕ್ಷತಾ ಉಪಕರಣಗಳಿಲ್ಲದೆ ಎತ್ತರದ ಮೇಲೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅಜಾಗರೂಕತೆಯಿಂದ ಅವರು ಬಿದ್ದು ತೀವ್ರ ಗಾಯಗೊಂಡರು. ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕುಟುಂಬಸ್ಥರು ಈ ಘಟನೆಗೆ ಪೂರಕ ಸುರಕ್ಷತಾ ಸಾಧನಗಳನ್ನು ಒದಗಿಸದ ಕೆಲಸದವರೇ ಕಾರಣವೆಂದು ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಮೃತಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮುಂದೆ ಓದಿ..
