ಆನ್‌ಲೈನ್ ಷೇರು ವ್ಯಾಪಾರದ ಹೆಸರಿನಲ್ಲಿ ₹1.75 ಲಕ್ಷ ವಂಚನೆ – ಸೈಬರ್ ಕ್ರೈಂಗೆ ದೂರು
ಬೆಂಗಳೂರು, ಜುಲೈ 5, 2025 : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಅವಕಾಶ ನೀಡುವಂತೆ ಆಮಿಷವೊಡ್ಡಿ, ಟೆಲಿಗ್ರಾಂ ಹಾಗೂ ವಾಟ್ಸಾಪ್ ಚಾನಲ್‌ಗಳ ಮೂಲಕ ಯುವಕನೊಬ್ಬನಿಗೆ ₹1,75,885ರಷ್ಟು ಆರ್ಥಿಕ ನಷ್ಟವನ್ನುಂಟುಮಾಡಿರುವ ಆನ್‌ಲೈನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೀಡಿತ ವ್ಯಕ್ತಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ರಹ್ಮಉಲ್ಲಾ ಶರೀಫ್ ಅವರು “Smack Trading” ಎಂಬ ಟೆಲಿಗ್ರಾಂ ಚಾನೆಲ್ ಮೂಲಕ ಸಂಪರ್ಕಕ್ಕೊಂಡು, ಚಾನಲ್‌ನಲ್ಲಿ ಬಿಂಬಿತವಾಗಿದ್ದ ಪ್ರಸಿದ್ಧ ಷೇರು ತಜ್ಞ ಆಶಿಷ್ ಕ್ಯಾಲ್ ಅವರ ಹೆಸರಿನಲ್ಲಿ ಹೂಡಿಕೆ ಆಮಿಷಕ್ಕೆ ಒಳಗಾಗಿದ್ದಾರೆ. ವಾಸ್ತವವಾಗಿ ಆ ಚಾನೆಲ್ ನಕಲಿ ಆಗಿದ್ದು, ನಂಬಿಕೆ ಮೂಡಿಸಲು ವಾಣಿಜ್ಯ ವಿವರಗಳು, GST ದಾಖಲೆಗಳು ಹಾಗೂ ಹಣ ಪಾವತಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಲಾಗಿದೆ. ವಂಚಕರು ಹೂಡಿಕೆದಾರರನ್ನು ವಾಟ್ಸಾಪ್ ಲಿಂಕ್ (https://wa.me/+918426929422) ಮೂಲಕ ಸಂಪರ್ಕಿಸಿ, ಹಲವಾರು ಬ್ಯಾಂಕ್ ಖಾತೆಗಳು ಹಾಗೂ ಯುಪಿಐ ಐಡಿಗಳನ್ನು ನೀಡಿದ್ದರು. ಕೆಲವು ವಿವರಗಳು ಇಂತಿವೆ: ROHAN –…
ಮುಂದೆ ಓದಿ..
