ಅಪರಿಚಿತ ವಾಹನ ಡಿಕ್ಕಿಯಿಂದ ವಿದ್ಯುತ್ ಕಂಬ ಧ್ವಂಸ – ತನಿಖೆಗೆ ನ್ಯಾಯಾಲಯದ ಅನುಮತಿ
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ-ಆನೇಕಲ್ ಮುಖ್ಯರಸ್ತೆಯ ಅರೋಗ್ಯಧಾಮ, ಹೊನ್ನ ಕಳಾಸಾಪುರ ಗೇಟ್ ಬಳಿ ಸ್ಥಾಪಿತವಾಗಿದ್ದ ಬೆಸ್ಕಾಂ ಇಲಾಖೆಯ ಎಫ್-18, 11 ಕೆವಿ ವಿದ್ಯುತ್ ಮಾರ್ಗದ ಕಂಬಗಳಿಗೆ ಅಪರಿಚಿತ ವಾಹನವು ಡಿಕ್ಕಿ ಹೊಡೆದು, ಎರಡು ಆರ್.ಆರ್.ಸಿ ವಿದ್ಯುತ್ ಕಂಬಗಳು ಧ್ವಂಸವಾಗಿರುವ ಘಟನೆ ದಿನಾಂಕ 02/06/2025ರಂದು ಮಧ್ಯರಾತ್ರಿ 1.00ರಿಂದ 2.00 ಗಂಟೆಯ ನಡುವೆ ಸಂಭವಿಸಿದೆ. ಈ ಸಂಬಂಧವಾಗಿ ದಿನಾಂಕ 03/06/2025ರಂದು ಬೆಸ್ಕಾಂ ಇಲಾಖೆಯ ಆನೇಕಲ್ ಉಪವಿಭಾಗದ ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ಸುರೇಶ್ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಸಾರ್ವಜನಿಕರಿಗೆ ನಿರಂತರ ವಿದ್ಯುತ್ ಸರಬರಾಜಿನಲ್ಲಿ ಈ ಘಟನೆಯಿಂದ ತೊಂದರೆ ಉಂಟಾದ ಹಿನ್ನೆಲೆಯಲ್ಲಿ, ಸುರೇಶ್ ರವರು ಅಪಘಾತ ಉಂಟುಮಾಡಿದ ಅಪರಿಚಿತ ವಾಹನದ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಆನೇಕಲ್ ಠಾಣೆಯ ಪೊಲೀಸರು ಇದನ್ನು ಅಸಂಜ್ಞೆಯ ಪ್ರಕರಣವಾಗಿ NCR ನಂ. 736/2025ರಲ್ಲಿ ದಾಖಲು ಮಾಡಿಕೊಂಡಿದ್ದರು. ಆದರೆ ವಿಷಯದ ಗಂಭೀರತೆಯನ್ನು ಪರಿಗಣಿಸಿ,…
ಮುಂದೆ ಓದಿ..
