ಬೃಹತ್ ರಸ್ತೆ ಅಪಘಾತ: ಸ್ಕೂಟರ್ಗೆ ಡಿಕ್ಕಿ ಹೊಡೆದ ಟಿಪ್ಪರ್ – ಪತ್ನಿಗೆ ಗಂಭೀರ ಗಾಯ
ಬೆಂಗಳೂರು, ಜುಲೈ 21:2025ನಗರದ ಸಮೀಪದ ನಾಗೇನಹಳ್ಳಿ ಗೇಟ್ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಗೆ ಕಾರಣವಾದ ಟಿಪ್ಪರ್ ಲಾರಿ ಚಾಲಕನು ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿಯಂತೆ, ಇಂದು ಬೆಳಿಗ್ಗೆ 10:25ಕ್ಕೆ, ಹೊಂಡಾ ಆಕ್ಟಿವಾ ಸ್ಕೂಟರ್ (ನಂ. KA-19-HG-3507) ಅನ್ನು ವ್ಯಕ್ತಿಯೋರ್ವನು ಚಲಾಯಿಸುತ್ತಿದ್ದು, ಹಿಂದಿನ ಸೀಟಿನಲ್ಲಿ ಅವನ ಪತ್ನಿ ಕುಳಿತಿದ್ದರು. ಅವರು ದೊಡ್ಡಬಳ್ಳಾಪುರ ಮುಖ್ಯರಸ್ತೆಯ ನಾಗೇನಹಳ್ಳಿ ಗೇಟ್ ಬಳಿ ಇರುವ ಆಟೋ ಬ್ರಿಟ್ ಕಾರ್ ಸರ್ವಿಸ್ ಸೆಂಟರ್ ಹತ್ತಿರ ತಲುಪುತ್ತಿದ್ದ ವೇಳೆ, 042-2402 ನಂಬರ್ ಹೊಂದಿರುವ ಟಿಪ್ಪರ್ ಲಾರಿ ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ಸ್ಕೂಟರ್ನಲ್ಲಿದ್ದ ದಂಪತಿಗಳು ರಸ್ತೆಗೆ ಬಿದ್ದಿದ್ದು, ಹಿಂಬದಿ ಸವಾರಿಯಾಗಿದ್ದ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಟಿಪ್ಪರ್ನ ಎಡಭಾಗದ ಚಕ್ರಗಳು ಮಹಿಳೆಯ ತಲೆ ಹಾಗೂ ಮುಖದ ಮೇಲೆ ಹರಿದ ಪರಿಣಾಮ, ಗಂಭೀರವಾದ ರಕ್ತಗಾಯಗಳು ಸಂಭವಿಸಿರುವುದು ತಿಳಿದು ಬಂದಿದೆ. ಅಪಘಾತದ…
ಮುಂದೆ ಓದಿ..
