ಜಮೀನಿನಲ್ಲಿ ಜೆಸಿಬಿ ಕೆಲಸದ ವೇಳೆಯಲ್ಲಿ ದಾಳಿ – ಹಲವು ಮಂದಿಗೆ ತೀವ್ರ ಗಾಯ
ಜಮೀನಿನಲ್ಲಿ ನಡೆಯುತ್ತಿದ್ದ leveling ಕೆಲಸದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ತೀವ್ರ ಘರ್ಷಣೆ ಉಂಟಾಗಿ, ಎಂಟಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಶ್ರೀಮತಿ ಕಾರ್ತಿಕವೇಣಿ ಕೊಂ ಶ್ರೀಧರ್ ರವರು ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ತಮ್ಮ ಜಮೀನಿನಲ್ಲಿ ಜೆಸಿಬಿ ಮೂಲಕ ಸಮತಟ್ಟು ಮಾಡುವ ಕೆಲಸವನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಸ್ಥಳಕ್ಕೆ ಬಂದು, ಕಾಮಗಾರಿ ಪ್ರಶ್ನಿಸಿದಾಗ ತೀವ್ರ ಮಾತಿನ ಚಕಮಕಿ ಉಂಟಾಗಿ, ಹಲ್ಲೆಗೆ ತಿರುಗಿತು. ಆರೋಪಿಗಳಾದ ಭರತ್, ಹರೀಶ್, ರಾಜು ಅಲಿಯಾಸ್ ಗಾರೆ ರಾಜು ಹಾಗೂ ಇತರರು ಸೇರಿ, ಕಾರ್ತಿಕವೇಣಿ ಅವರ ಕುಟುಂಬದವರಾದ ಪ್ರಸಾದ್, ಮುರಳಿ, ಕವಿತಾ, ವಿಜಯ್, ಶ್ರೀನಾಥ್, ಜಯಮ್ಮ ಮತ್ತು ದರ್ಶನ್ ರವರಿಗೆ ಕಬ್ಬಿಣದ ರಾಡು, ಕಲ್ಲು ಹಾಗೂ ದೊಣ್ಣೆಗಳೊಂದಿಗೆ ದಾಳಿ ನಡೆಸಿದ್ದಾರೆ. ಘಟನೆ ವೇಳೆ ಅಪಶಬ್ದಗಳನ್ನೂ ಬಳಸಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಪ್ರಸಾದ್ ಮತ್ತು…
ಮುಂದೆ ಓದಿ..
