ಘೋರ ರಸ್ತೆ ಅಪಘಾತದಲ್ಲಿ ಯುವತಿಯ ದುರ್ಮರಣ
ಬೆಂಗಳೂರು ಗ್ರಾಮಾಂತರ 22 ಆಗಸ್ಟ್ 2025ದೊಡ್ಡಬಳ್ಳಾಪುರ ಬಾಷೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನಿವಾಸಿ ಜಯಶ್ರೀ ಬಿ.ಆರ್ (22) ಅವರು ದುರಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ. ಜಯಶ್ರೀ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನದಂತೆ 21 ಆಗಸ್ಟ್ ಬೆಳಿಗ್ಗೆ 8 ಗಂಟೆಗೆ ಮನೆತನಕ್ಕೆ ತಿಳಿಸಿ KA51-X-6439 ನಂಬರಿನ ಟಿವಿಎಸ್ ವೆಗೋ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೊರಟಿದ್ದರು. ಬೆಳಿಗ್ಗೆ ಸುಮಾರು 8:30ಕ್ಕೆ ಮಾರಸಂದ್ರ ಗ್ರಾಮದ ಎಸ್.ಎಂ.ಎಸ್ ಬಾರ್ & ರೆಸ್ಟೋರೆಂಟ್ ಮುಂಭಾಗ ಬೆಂಗಳೂರು–ದೊಡ್ಡಬಳ್ಳಾಪುರ ರಸ್ತೆಯಲ್ಲಿ, KA02-AF-9951 ನಂಬರಿನ ಟಾಟಾ ಟಿಪ್ಪರ್ ಲಾರಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿದ ಪರಿಣಾಮ ಜಯಶ್ರೀ ಅವರ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಜಯಶ್ರೀ ಬಿದ್ದು, ಲಾರಿಯ ಚಕ್ರ ತಲೆಯ ಮೇಲೆ ಹರಿದು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಘಟನೆಯ ಕುರಿತು ಮಾಹಿತಿ ದೊರೆತ ತಕ್ಷಣ ಜಯಶ್ರೀ ಅವರ ತಂದೆ-ತಾಯಿ ಸ್ಥಳಕ್ಕೆ ಬಂದು ಪರಿಶೀಲಿಸಿ ರಾಜಾನುಕುಂಟೆ…
ಮುಂದೆ ಓದಿ..
