ಸುದ್ದಿ 

ಮಾರಸಂದ್ರ ಬಳಿ ಬೈಕ್ ಅಪಘಾತ: ಇಬ್ಬರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ

ಬೆಂಗಳೂರು, ಜೂನ್ 9– 2025ಮಾರಸಂದ್ರ ಗ್ರಾಮದ ಬಳಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಜೂನ್ 7ರ ಸಂಜೆ ನಡೆದಿದೆ. ರಂಗಸ್ವಾಮಿ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ತಮ್ಮ ರಾಜೇಶ್ ರವರೊಂದಿಗೆ KA-05-HQ-4490 ನಂಬರ್ ನ ಮೋಟಾರ್ ಸೈಕಲ್ ನಲ್ಲಿ ತಮ್ಮ ಖಾಸಗಿ ಕೆಲಸಕ್ಕಾಗಿ ಹೊರಟಿದ್ದರು. ರಾತ್ರಿ ಸುಮಾರು 8:00 ಗಂಟೆಗೆ, ದೊಡ್ಡಬಳ್ಳಾಪುರ – ಬೆಂಗಳೂರು ಹೆದ್ದಾರಿಯ ಮಾರಸಂದ್ರ ಗ್ರಾಮದ ಯು-ಟರ್ನ್ ಡಾಬಾ ಸಮೀಪ, ರಾಜೇಶ್ ಅವರು ಮೋಟಾರ್ ಸೈಕಲ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿದ್ದು, ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ, ರಂಗಸ್ವಾಮಿ ಅವರು ಎಡಕೈ ಮತ್ತು ಬಲಕಾಲಿಗೆ ಗಾಯಗೊಂಡಿದ್ದು, ರಾಜೇಶ್ ಅವರಿಗೆ ತಲೆ ಹಾಗೂ ಕೈ-ಕಾಲುಗಳಿಗೆ ಗಂಭೀರ ರಕ್ತಗಾಯಗಳಾಗಿವೆ. ಸ್ಥಳೀಯರು ಅವರನ್ನು ಸ್ಥಳೀಯ ವೆಲ್ ವರ್ಥ್ ಆಸ್ಪತ್ರೆಗೆ ತಲುಪಿಸಿ ಪ್ರಥಮ…

ಮುಂದೆ ಓದಿ..
ಸುದ್ದಿ 

ಮೋಟಾರ್ ಸೈಕಲ್ ಕಳವು ಪ್ರಕರಣ: ಆನೇಕಲ್ ಬಿಇಒ ಕಚೇರಿ ಬಳಿ ಪಾರ್ಕಿಂಗ್ ಸ್ಥಳದಿಂದ ಪಲ್ಸರ್ ಬೈಕ್ ಕಳವು

ಆನೇಕಲ್, 08 ಜುಲೈ 2025:ಆನೇಕಲ್ ಪಟ್ಟಣದಲ್ಲಿ ಬಿಇಒ ಕಚೇರಿ ಆವರಣದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಪಲ್ಸರ್ ಮೋಟಾರ್ ಸೈಕಲ್ ಕಳವುಗೊಳ್ಳುವ ಘಟನೆ ನಡೆದಿದೆ. ಈ ಸಂಬಂಧ ಶ್ರೀ ಕೃಷ್ಣಪ್ಪ ಬಿನ್ ಲೇ: ತಿಪ್ಪಯ್ಯ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೃಷ್ಣಪ್ಪನವರು ನೀಡಿದ ಮಾಹಿತಿಯಂತೆ, ಅವರು ತಮ್ಮ ನಾಮದೇವರಪೇಟೆ ನಿವಾಸದಿಂದ ಕೆಲಸದ ನಿಮಿತ್ತ ದಿನಾಂಕ 07-07-2025 ರಂದು ಬೆಳಿಗ್ಗೆ 11:00 ಗಂಟೆಗೆ ತಮ್ಮ ಕೆಂಪು ಬಣ್ಣದ ಪಲ್ಸರ್ ಮೋಟಾರ್ ಸೈಕಲ್ (ನಂ: KA-51 EF-9401) ನಲ್ಲಿ ಬಂದು ಬಿಇಒ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದರು. ತಮ್ಮ ಕಾರ್ಯ ಮುಗಿಸಿಕೊಂಡು ಸುಮಾರು 11:30 ಗಂಟೆಗೆ ಹೊರಬಂದಾಗ, ಅವರು ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಕಾಣೆಯಾಗಿದ್ದು, ಕಳವು ಎನೆಂಬುದು ಸ್ಪಷ್ಟವಾಗಿದೆ. ಸೈಕಲ್ ಅನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಿದರೂ ಯಾವುದೇ ಪತ್ತೆಯಾಗದ ಕಾರಣದಿಂದಾಗಿ, ದಿನಾಂಕ 08-07-2025 ರಂದು ಮಧ್ಯಾಹ್ನ 12:30 ಗಂಟೆಗೆ ಅವರು ಪೊಲೀಸ್…

ಮುಂದೆ ಓದಿ..
ಸುದ್ದಿ 

ಯಲಹಂಕದ ಬಳಿ ಬೈಕ್‌ಗ ಮೇಲೆ ಕಾರು ಡಿಕ್ಕಿ: ಯುವಕನಿಗೆ ತೀವ್ರ ಗಾಯ

ಯಲಹಂಕ, ಜುಲೈ 9 2025 ರಾಜಾನುಕುಂಟೆಯಿಂದ ಯಲಹಂಕ ಕಡೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ, ಗ್ರಾಸ್ ಹೋಟೆಲ್ ಬಳಿ ಕಾರು ಡಿಕ್ಕಿಯಾದ ಪರಿಣಾಮ ತೀವ್ರ ಗಾಯಗೊಂಡ ಘಟನೆ ಜುಲೈ 6ರಂದು ಬೆಳಿಗ್ಗೆ ಸಂಭವಿಸಿದೆ. ಅಶೋಕ ಎಸ್ ರವರ ಪ್ರಕಾರ, ಅವರು ತಮ್ಮ ಬೈಕ್‌ (ನಂ. KA-50-EK-2441) ನಲ್ಲಿ ಸಾಗುತ್ತಿದ್ದ ವೇಳೆ, KA-04-MY-3240 ಸಂಖ್ಯೆಯ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಡಭಾಗಕ್ಕೆ ಡಿಕ್ಕಿ ಹೊಡೆದು ಬಿದ್ದಿತು. ಪರಿಣಾಮವಾಗಿ ಪಿರ್ಯಾದಿದಾರ ರಸ್ತೆಗೆ ಬಿದ್ದು ಗಾಯಗೊಂಡರು. ಸ್ಥಳೀಯ ಸಾರ್ವಜನಿಕರು ತಕ್ಷ ಅಶೋಕ್ ಎಸ್ ಅವರ ನೆರವಿಗೆ ಬಂದು, ಕುಡಿಯಲು ನೀರು ನೀಡಿ, ಪಕ್ಕದಲ್ಲಿದ್ದ ರಕ್ಷಾ ಆಸ್ಪತ್ರೆಗೆ ತಮ್ಮ ಸಹೋದರ ಲೋಕೇಶ್ ಅವರ ನೆರವಿನಿಂದ ಕರೆದೊಯ್ಯಲಾಯಿತು. ವೈದ್ಯರ ತಪಾಸಣೆಯಲ್ಲಿ ಮೂರು ಹಲ್ಲುಗಳು ಬಿದ್ದಿದ್ದು, ಬಲ ಸೊಂಟದಲ್ಲಿ ತೀವ್ರ ರಕ್ತಗಾಯವಾಗಿರುವುದು ತಿಳಿದುಬಂದಿದೆ. ಈ ಅಪಘಾತಕ್ಕೆ ಕಾರಣನಾದ ಕಾರು ಚಾಲಕನ ವಿರುದ್ಧ ಕಾನೂನು…

ಮುಂದೆ ಓದಿ..
ಸುದ್ದಿ 

ಅಂಕಿತ್ ಚಾಲನೆ ಮಾಡಿದ ಕಾರು ಅಪಘಾತಕ್ಕೆ ಗುರಿ – ಯಾರಿಗೂ ಗಾಯವಾಗಿಲ್ಲ

ಬೆಂಗಳೂರು, ಜುಲೈ 9 2025: ಯಲಹಂಕ ಬಳಿಯ ಅವಲಹಳ್ಳಿ ನಿವಾಸಿಯಾಗಿರುವ ಬಾಬು ಅವರ ಸ್ವಾಧೀನದಲ್ಲಿರುವ KA50 MD9706 ಸಂಖ್ಯೆಯ ಸ್ವಿಫ್ಟ್ ಕಾರು ಜೂನ್ 3ರ ರಾತ್ರಿ ಅಪಘಾತಕ್ಕೊಳಗಾದ ಘಟನೆ ವರದಿಯಾಗಿದೆ. ಘಟನೆ ಅರಕೆರೆ-ಚಿಕ್ಕನಹಳ್ಳಿ ರಸ್ತೆಯ ಬಳಿ ನಡೆದಿದೆ. ಅದರ ಪ್ರಕಾರ, ಕಾರನ್ನು ಸ್ನೇಹಿತ ವಿವೇಕ್ ಮೂಲಕ ಅಂಕಿತ್ ಎಂಬ ಯುವಕ ಬಳಸಿ ಹಾಸ್ಟೆಲ್‌ಗೆ ಹಿಂದಿರುಗುತ್ತಿದ್ದ ವೇಳೆ, ರಸ್ತೆ ಮೇಲೆ ನಾಯಿ ಅಡ್ಡವಾಗಿ ಬಂದಿದ್ದು, ಅದನ್ನು ತಪ್ಪಿಸಲು ಕಾರು ಬಲಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಾಗೂ ಖಾಸಗಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಜಖಂಗೊಂಡಿದೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಕಾರು ಮಾಲೀಕರಾದ ಬಾಬು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ ಎಂದು ದೃಢಪಟ್ಟಿದೆ. ಅಪಘಾತದ ಹೊಣೆಗಾರನಾಗಿ ಅಂಕಿತ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ನವೀನ್ ಕುಮಾರ್ ಡಿ ಅವರು ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ…

ಮುಂದೆ ಓದಿ..
ಸುದ್ದಿ 

ಕ್ಲಿಕ್ ರೈಡ್ ಪಾರ್ಕಿಂಗ್ ಏರಿಯಾದಿಂದ ಬೈಕ್ ಕಳವು: ಹೈದರಾಬಾದ್‌ನಿಂದ ವಾಪಸ್ ಬಂದಾಗ ಆತಂಕದಲ್ಲಾದ ಗ್ರಾಹಕ

ಬೆಂಗಳೂರು, ಜುಲೈ 9: 2025ಕ್ಲಿಕ್ ರೈಡ್ ಎಂಬ ಬಾಡಿಗೆ ಆಧಾರಿತ ಬೈಕ್ ಸೇವೆಯ ಪಾರ್ಕಿಂಗ್ ಪ್ರದೇಶದಿಂದ ಗ್ರಾಹಕರೊಬ್ಬರ ಬೈಕ್ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ. ಬಾಡಿಗೆ ಸೇವೆಯ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಮೂಡಿಸುತ್ತಿರುವ ಈ ಘಟನೆ ಈಗ ಪೊಲೀಸರ ತನಿಖೆಗೆ ಕಾರಣವಾಗಿದೆ. ರಾಜೀವ್ ಕುಮಾರ್ ಆರ್ ಅವರು ತಮ್ಮ ಬೈಕ್‌ ಅನ್ನು ದಿನಾಂಕ 25 ಜೂನ್ 2025, ರಾತ್ರಿ 12:30ಕ್ಕೆ ಹೈದರಾಬಾದ್‌ಗೆ ಪ್ರಯಾಣ ಮಾಡುವ ಮುನ್ನ ಕ್ಲಿಕ್ ರೈಡ್ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದರು. ಒಂದು ವಾರದ ನಂತರ, 02 ಜುಲೈ 2025, ಬೆಳಿಗ್ಗೆ 04:00 ಗಂಟೆಗೆ, ಹೈದರಾಬಾದ್‌ನಿಂದ ಬೆಂಗಳೂರಿಗೆ ಮರಳಿದ ಅವರು ಪಾರ್ಕಿಂಗ್ ಪ್ರದೇಶಕ್ಕೆ ಹೋದಾಗ ತಮ್ಮ ಬೈಕ್ ಕಾಣೆಯಾಗಿರುವುದು ತಿಳಿದುಬಂದಿತು. ತಕ್ಷಣವೇ ಅವರು ಕ್ಲಿಕ್ ರೈಡ್ ಸಿಬ್ಬಂದಿ ಮತ್ತು ಚಾಲಕರೊಂದಿಗೆ ಸಂಪರ್ಕಿಸಿಕೊಂಡರೂ, ಯಾರಿಗೂ ಈ ಕುರಿತಂತೆ ಯಾವುದೇ ಮಾಹಿತಿ ಇಲ್ಲವೆಂದು ಉತ್ತರ ದೊರೆತಿದೆ. ಪಿರ್ಯಾದಿದಾರರು…

ಮುಂದೆ ಓದಿ..
ಸುದ್ದಿ 

ಜಯನಗರಕ್ಕೆ ಕೆಲಸಕ್ಕೆ ಹೋದ ಯುವತಿ ನಾಪತ್ತೆ: ‘ವಿಭ್’ ಎಂಬ ಯುವಕನ ಜೊತೆ ಹೋಗಿರಬಹುದೆಂದು ಅನುಮಾನ

ಬೆಂಗಳೂರು ಜುಲೈ 9 2025ಮೈಸೂರಿನ ಮಲ್ಲಿಕ್ಕಂಡ ನಿವಾಸಿಯಾದ 23 ವರ್ಷದ ರಾಜರಾಜೇಶ್ವರಿ ಎಂಬ ಯುವತಿ, ಜುಲೈ 5 ರಂದು ಬೆಳಿಗ್ಗೆ ಮನೆೆಯಿಂದ ಕೆಲಸಕ್ಕೆಂದು ಹೋಗಿ, ರಾತ್ರಿ ವಾಪಸ್ ಬಾರದೆ ನಾಪತ್ತೆಯಾಗಿರುವ ಘಟನೆ ನೆಡೆದಿದೆ. ರಾಜರಾಜೇಶ್ವರಿ ಕಳೆದ ಎರಡು ದಿನಗಳಿಂದ ಜಯನಗರದಲ್ಲಿರುವ ನೇತ್ರಾ ಧಾಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 5ರಂದು ಬೆಳಿಗ್ಗೆ 7 ಗಂಟೆಗೆ ಕೆಲಸಕ್ಕೆಂದು ಮನೆ ಬಿಟ್ಟು ಹೋಗಿದ್ದರು. ಸಂಜೆ 7 ಗಂಟೆಯ ಸುಮಾರಿಗೆ ಅವರು ತಮ್ಮ ತಂದೆಗೆ ಕರೆ ಮಾಡಿ, “ನಾನು ಎನ್.ಇ.எಸ್ ಹತ್ತಿರ ಇದ್ದೇನೆ, ಬನ್ನಿ ಕರೆದುಕೊಂಡು ಹೋಗಿ” ಎಂದು ತಿಳಿಸಿದರು. ಆದರೆ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕರೆದರೂ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಿ, ಕೊನೆಗೆ ಯಲಹಂಕ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ವಿಭ್’ ಎಂಬ ಯುವಕನೊಂದಿಗೆ ಅವರ ಮಗಳು ಹೋಗಿರಬಹುದೆಂದು…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಮಹಿಳಾ ಪೊಲೀಸರಿಗೆ ಬೈಕ್ ಸವಾರನಿಂದ ದೌರ್ಜನ್ಯ – ಒಬ್ಬನ ವಶಕ್ಕೆ ಪಡೆದು ಪ್ರಕರಣ ದಾಖಲು

ಯಲಹಂಕ, ಜುಲೈ 9:2025ಅನಂತಪುರ ಗೇಟ್ ಜಂಕ್ಷನ್ ಬಳಿ ಸಂಚಾರ ನಿಯಮ ಉಲ್ಲಂಘಿಸಿದ್ದ ಬೈಕ್ ಸವಾರನೊಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಗೆ ದೌರ್ಜನ್ಯ ಎಸಗಿ, ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ ಘಟನೆ ಜುಲೈ 7ರಂದು ಬೆಳಗ್ಗೆ ಸಂಭವಿಸಿದೆ. ಘಟನೆ ವೇಳೆ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ, ಹೆಲ್ಮೆಟ್ ಇಲ್ಲದೆ ಹಾಗೂ ಮೊಬೈಲ್ ಬಳಸುತ್ತಾ ಬೈಕ್ ಓಡಿಸುತ್ತಿದ್ದ ಕೆಎ–50–ಇಎಚ್–1912 ಸಂಖ್ಯೆಯ ವಾಹನ ಸವಾರನನ್ನು ತಡೆಯುತ್ತಿದ್ದರು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾದ ಕಾರಣದಿಂದ ಎಫ್‌ಟಿವಿಆರ್ ಆ್ಯಪ್ ಮೂಲಕ ಪ್ರಕರಣ ದಾಖಲಿಸಲಾಗುತ್ತಿತ್ತು. ಆ ವೇಳೆ ಆರೋಪಿಯಾಗಿರುವ ಜೈ. ಬಗಿರಾಜು (27), ಯಲಹಂಕ ನಿವಾಸಿ, ತನ್ನ ಬೈಕ್ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ಮಹಿಳಾ ಪೊಲೀಸರಿಂದ ಫೋಟೋ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ದಾಖಲೆ ಮಾಡಲು ಯತ್ನಿಸಿದನು. ಅಧಿಕಾರ ಕೇಳಿದ ವೇಳೆ, ಆತನ ನಡೆ ಕೆರಳಿತು. “ನೀನು ಎಷ್ಟು ಭಾರಿ ನನ್ನ ಮೇಲೆ ಅಧಿಕಾರ ತೋರಿಸುತ್ತೀಯ?…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ Movers & Packers ಕಂಪನಿಯಿಂದ ವಂಚನೆ – ಮನೆ ಸಾಮಾನುಗಳು ತಲುಪದೇ ಪೀಡಿತರಿಂದ ₹2.5 ಲಕ್ಷ ಮೌಲ್ಯದ

ವಂಚನೆಬೆಂಗಳೂರು, ಜುಲೈ 9 , 2025 ನಗರದ ನಿವಾಸಿಯೊಬ್ಬರು Verified Team Packers and Movers Logistic ಎಂಬ ಆನ್‌ಲೈನ್ ಕಂಪನಿಯಿಂದ ಮನೆ ಬದಲಾವಣೆಗೆ ಬುಕ್ಕಿಂಗ್ ಮಾಡಿದ ಸಂದರ್ಭದಲ್ಲಿ ಭಾರೀ ವಂಚನೆಯ ಬಲಿಯಾದ ಘಟನೆ ಬೆಳಕಿಗೆ ಬಂದಿದೆ. ಅಕ್ಕಳನ್ನ ಬಾಯ್ಸ್ ಅವರು Shift Easy ವೆಬ್‌ಸೈಟ್ ಮೂಲಕ ಸಂಸ್ಥೆಯ ಸೇವೆಗಳನ್ನು ದಿನಾಂಕ 29/06/2025 ರಂದು ಬುಕ್ ಮಾಡಿಕೊಂಡು ₹12,000 ಮೊತ್ತವನ್ನು ಪಾವತಿಸಿದ್ದರು. ಆ ದಿನವೇ ರಾತ್ರಿ 7 ಗಂಟೆಗೆ KA-05 ನೋಂದಣಿಯ ವಾಹನದಲ್ಲಿ ಸಂಸ್ಥೆಯವರು ಬಂದು ಮನೆ ಸಾಮಾನುಗಳನ್ನು ಎತ್ತಿಕೊಂಡು ಹೋದರು. ನಿಯಮಿತವಾಗಿ, ಸಾಮಾನುಗಳನ್ನು 30/06/2025 ರಂದು ಡೆಲಿವರಿ ಮಾಡುವ ಭರವಸೆ ನೀಡಲಾಗಿತ್ತು.ಆದರೆ, ನಿರ್ಧಿಷ್ಟ ದಿನಾಂಕಕ್ಕೆ ಯಾವುದೇ ಸಾಮಾನುಗಳು ತಲುಪದ ಕಾರಣ, ಪೀಡಿತರು ಕಂಪನಿಯನ್ನು ಸಂಪರ್ಕಿಸಿದಾಗ, ಸಂಸ್ಥೆಯವರು ಮತ್ತಷ್ಟು ₹28,000 ಪಾವತಿಸಿದರೆ ಮಾತ್ರ ಡೆಲಿವರಿ ಮಾಡುತ್ತೇವೆ ಎಂದು ಬೆದರಿಕೆ ನೀಡಿದರೆ. ಈ ಮೂಲಕ ಪೀಡಿತರು ಒತ್ತಡದಡಿ ಹಣ…

ಮುಂದೆ ಓದಿ..
ಸುದ್ದಿ 

ಇಂಜಿನಿಯರಿಂಗ್ ಪದವಿದಾರ ಯುವತಿಗೆ ಮೊಬೈಲ್ ಮೂಲಕ ಕಿರುಕುಳ – ಅಶ್ಲೀಲ ಮೆಸೇಜ್, ಬೆದರಿಕೆ ನೀಡಿದ ಅನಾಮಿಕನ ವಿರುದ್ಧ ದೂರು

ಬೆಂಗಳೂರು, ಜುಲೈ 9:2025ನಗರದ ವಿಜಯನಗರ ಪ್ರದೇಶದಲ್ಲಿ ಇಂಜಿನಿಯರಿಂಗ್ ಮುಗಿಸಿ ಮನೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದ ಯುವತಿಗೆ, ಅನಾಮಿಕ ವ್ಯಕ್ತಿಯೊಬ್ಬನು ಎರಡು ವರ್ಷಗಳಿಂದ ವಿವಿಧ ಮೊಬೈಲ್ ನಂಬರ್‌ಗಳಿಂದ ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆ ನೀಡುತ್ತಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ. ಪೀಡಿತೆಯ ತಂದೆಯ ಮಹಾದೇವ್ ಪ್ರಸಾದ್ ರವರ ಮಾಹಿತಿ ಪ್ರಕಾರ, 76194933395, 8688807542 ಮತ್ತು 7022337134 ಮುಂತಾದ ನಂಬರ್‌ಗಳಿಂದ “ನೀನು ಪ್ರೀ ಇದ್ದೀಯಾ”, “ಇಲ್ಲೋಗೋಣ ಬಾ” ಎಂಬ ಸಂದೇಶಗಳು ಬರುತ್ತಿದ್ದುವು. ಪೀಡಕನು ಯುವತಿಯನ್ನು ಹಿಂಬಾಲಿಸುತ್ತಿದ್ದಾನೆಂಬ ಆರೋಪವೂ ಇದೆ. ಇನ್ನೂ ತೀವ್ರವಾಗಿ, ಆ ವ್ಯಕ್ತಿ ಬೆತ್ತಲೆ ಫೋಟೋಗಳನ್ನು ಕಳುಹಿಸಿ “ನೀನು ಬರದೆ ಹೋದರೆ ನಿನಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತು” ಎಂಬ ಬೆದರಿಕೆಯ ಮೆಸೇಜ್‌ಗಳನ್ನು ಕೂಡ ಕಳುಹಿಸಿದ್ದಾನೆ. ಈ ಪ್ರಕರಣದ ಕುರಿತು ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಪ್ರಾರಂಭಿಸಿದ್ದು, ಶೀಘ್ರದಲ್ಲೇ ಕಾನೂನು…

ಮುಂದೆ ಓದಿ..
ಸುದ್ದಿ 

ಸಾತನೂರಿನಲ್ಲಿ ಭೂ ಹಗರಣ: ಒಂದೇ ನಿವೇಶನವನ್ನು ಎರಡು ಬಾರಿ ಮಾರಾಟ ಮಾಡಿದ ಆರೋಪ

ಬೆಂಗಳೂರು, ಜುಲೈ 9 2025: ಸಾತನೂರು ಗ್ರಾಮದಲ್ಲಿ ಒಂದೇ ನಿವೇಶನವನ್ನು ಬೇರೆಯವರ ಹೆಸರಿಗೆ ಮತ್ತೆ ಮಾರಾಟ ಮಾಡಿದ ಭೂ ಹಗರಣ ಬೆಳಕಿಗೆ ಬಂದಿದೆ. ಈ ಕುರಿತು ಶ್ರೀ ನೀರಜ್ ಕುಮಾರ್ ಚೌರಾಸಿಯಾ ಅವರು ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನೀರಜ್ ಕುಮಾರ್ ಅವರು ಸೈಟ್ ನಂ.47 ಮತ್ತು 48 ಅನ್ನು ದಿನಾಂಕ 05/01/2013 ರಂದು ಶ್ರೀ ಪೌಲ್ ರಾಜ್ ಎಂ.ಕೆ. ಅವರಿಂದ ಖರೀದಿಸಿದ್ದರು. ಆದರೆ ನಂತರದ ಪರಿಶೀಲನೆಯಿಂದ ಈ ಸೈಟ್‌ಗಳನ್ನು ಮೂಲದ ಮಾಲೀಕರಾದ ವಿ. ಮೋಹನ್ ರಾಜು ಅವರು 06/07/2017 ರಂದು ಮತ್ತೊಂದು ದಂಪತಿಯಾದ ಶ್ರೀ ಸುನೀಲ್ ಕುಮಾರ್ ಮತ್ತು ಶ್ರೀಮತಿ ಆಶಾ ಅವರಿಗೆ ಮಾರಾಟ ಮಾಡಿರುವುದು ದೃಢವಾಗಿದೆ. ಇತ್ತೀಚೆಗೆ ಪೌಲ್ ರಾಜ್ ಅವರು ಲೇಔಟ್ ಪರಿಶೀಲನೆಗೆ ಬಂದಾಗ, ನೆರೆವಾಸಿ ಶ್ರೀ ಸಂಜೀವ್ ಕುಮಾರ್ ಸಾಯಿ ಅವರ ಕಾಂಪೌಂಡ್ ಗೋಡೆಯನ್ನು ಕೆಡವಲಾಗಿದ್ದು, “ಮಾರಾಟಕ್ಕಿಲ್ಲ” ಎಂಬ ಬೋರ್ಡ್…

ಮುಂದೆ ಓದಿ..