15 ವರ್ಷದ ಬಾಲಕಿ ಕಾಣೆಯಾದ ಪ್ರಕರಣ
ಬೆಂಗಳೂರು 20 ಆಗಸ್ಟ್ 2025ಬೆಂಗಳೂರು: ಜಡಿಗೇನಹಳ್ಳಿಯ ನಿವಾಸಿ ಮಹಿಳೆಯೊಬ್ಬರು ತಮ್ಮ 15 ವರ್ಷದ ಮಗಳು ಕಾಣೆಯಾದ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಅರುಣಾ ಅವರ ಗಂಡ ರವಿಕುಮಾರ್ ಹಾಗೂ ಇಬ್ಬರು ಮಕ್ಕಳಾದ ಪ್ರೀತಿ ಆರ್ (15 ವರ್ಷ), ಆಕಾಶ್ (12 ವರ್ಷ) ಅವರೊಂದಿಗೆ ವಾಸವಾಗಿದ್ದಾರೆ. ಮಗಳು ಪ್ರೀತಿ ರವರು ಆಗಾಗ ಅತ್ತೆ ಚೆನ್ನಮ್ಮ ಅವರ ಹೂವಿನಾಯಕನಹಳ್ಳಿಯ ಮನೆಯಲ್ಲಿ ತಂಗಿ ಅವರ ಚಿಲ್ಲರೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಳು. ಆಗಸ್ಟ್ 14ರಂದು ರಾತ್ರಿ ಸುಮಾರು 8:45ಕ್ಕೆ ಮಗಳು ಮನೆವರ ಜೊತೆ ವಿಡಿಯೋ ಕಾಲ್ ಮಾಡಿ, ನಂತರ 9:15ರ ವೇಳೆಗೆ ಹೊರಗಿನ ವಾಷ್ ರೂಮ್ಗೆ ಹೋಗುವುದಾಗಿ ಹೇಳಿ ಹೊರಟು ಹೋಗಿದ್ದಳು. ಆದರೆ ಬಳಿಕ ಮನೆಗೆ ಮರಳದೆ ಕಾಣೆಯಾಗಿದ್ದಾಳೆ. ಕುಟುಂಬದವರು ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಮೊಬೈಲ್ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಆತ್ರೆಯಿಂದ…
ಮುಂದೆ ಓದಿ..
