ಚೆಕ್ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಜಗಳ – ಮಹಿಳೆಗೆ ಜೀವ ಬೆದರಿಕೆ, ದೂರು ದಾಖಲಿಸಿ ತನಿಖೆ ಆರಂಭ
ಬೆಂಗಳೂರು, ಜುಲೈ 31 2025ಚೆಕ್ ಮೂಲಕ ಹಣದ ವ್ಯವಹಾರದಲ್ಲಿ ಉಂಟಾದ ಗೊಂದಲದಿಂದ ಮಹಿಳೆಯೊಬ್ಬರು ತೀವ್ರವಾಗಿ ಮಾನಸಿಕವಾಗಿ ಪರಿತಪಿಸುತ್ತಿದ್ದು, ಜೀವನಕ್ಕೆ ಬೆದರಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಂಬಂಧಿತ ಮಹಿಳೆಯ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ರುಕ್ಮಿಣಿ ಅವರ ಪ್ರಕಾರ, ಅವರು 2024ರ ಸೆಪ್ಟೆಂಬರ್ 25ರಂದು ಚಿನ್ಮಯಿ ಎಂಬವರೊಂದಿಗೆ ವಿವಾಹವಾಗಿದ್ದರು. ಇವರಿಗೆ ಶೋಭಾ ಎಂಬ ಮಹಿಳೆ ಹಲವಾರು ತಿಂಗಳಿಂದ ಪರಿಚಿತರಾಗಿದ್ದರು. ಶೋಭಾ ಅವರಿಗೆ 2025ರ ಜನವರಿ 23ರಂದು ₹3,00,000 ಮೌಲ್ಯದ ಬ್ಯಾಂಕ್ ಚೆಕ್ ನೀಡಲಾಗಿತ್ತು. ಅದರಿಂದ ನಂತರ ನಿರಂತರವಾಗಿ ಬಡ್ಡಿಯ ಸಹಿತ ಹಣ ಪಾವತಿಸುತ್ತಿದ್ದರು. ಆದರೆ, ಮೇ 26, 2025 ರಂದು ಅವರು ಶೋಭಾ ಅವರ ಮನೆಗೆ ತೆರಳಿ ಹಣ ಹಿಂತಿರುಗಿಸಿ ಚೆಕ್ ವಾಪಸ್ ಕೇಳಿದಾಗ ಕೊಡುವುದಾಗಿ ಹೇಳಿ ನಂತರ ನೀಡಲಿಲ್ಲ. ಪುನಃ ಕೇಳಿದಾಗ, ದೂರಿನ ಪ್ರಕಾರ, ಶೋಭಾ ಅವರು ದೂರುದಾರ ಹಾಗೂ ಅವರ…
ಮುಂದೆ ಓದಿ..
