ಬ್ರಿಗೇಡ್ ಎಲ್ಲೋರಾಡೋ ಪಾರ್ಕ್ನಲ್ಲಿ ಗೃಹ ಹಿಂಸೆ ಪ್ರಕರಣ
ಬ್ರಿಗೇಡ್ ಎಲ್ಲೋರಾಡೋ ಪಾರ್ಕ್ನಲ್ಲಿ ಗೃಹ ಹಿಂಸೆ ಪ್ರಕರಣ ಬೆಂಗಳೂರು:20 ಆಗಸ್ಟ್ 2025ನಗರದ ಬ್ರಿಗೇಡ್ ಎಲ್ಲೋರಾಡೋ ಇರೋ ಸ್ಪೇಸ್ ಪಾರ್ಕ್ನಲ್ಲಿ ವಾಸಿಸುತ್ತಿರುವ ಮಹಿಳೆ ತಮ್ಮ ಗಂಡ ಹಾಗೂ ಅತ್ತೆ-ಮಾವನ ವಿರುದ್ಧ ಗೃಹ ಹಿಂಸೆ ಮತ್ತು ಮಾನಸಿಕ ಕಿರುಕುಳದ ಪ್ರಕರಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೀಡಿತ ಮಹಿಳೆಯ ಹೇಳಿಕೆಯ ಪ್ರಕಾರ, ಅವರು 2019ರಲ್ಲಿ ಕುಮಾರಸೌರಭ ಎಂಬವರೊಂದಿಗೆ ವಿವಾಹವಾಗಿದ್ದು, ಮದುವೆಯಾದ ನಂತರದಿಂದಲೇ ಅತ್ತೆ-ಮಾವ ಹಾಗೂ ಗಂಡನಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದಾರೆ. ಮಕ್ಕಳಿಲ್ಲದ ಕಾರಣದಿಂದ ಪೋಷಕರ ಆರೈಕೆಗಾಗಿ ತಮ್ಮ ಗಂಡ ಒಪ್ಪಿಕೊಂಡಿದ್ದರೂ, ನಂತರ ಅತ್ತೆ-ಮಾವರು ಅದನ್ನು ವಿರೋಧಿಸಿ, ಗಂಡನಿಗೆ ತನ್ನ ವಿರುದ್ಧ ಪ್ರಚೋದನೆ ನೀಡುತ್ತಿದ್ದರೆಂದು ದೂರಿನಲ್ಲಿ ಹೇಳಲಾಗಿದೆ. 2025ರ ಆಗಸ್ಟ್ 17ರಂದು ಬೆಳಗ್ಗೆ ಸುಮಾರು 8.30ಕ್ಕೆ ನಡೆದ ಜಗಳದ ವೇಳೆ ಗಂಡನು ಪತ್ನಿಯ ಕೂದಲು ಎಳೆದು ತಲೆಗೆ ಹಾಗೂ ಮುಖಕ್ಕೆ ಕೈಯಿಂದ ಹೊಡೆದಿದ್ದಾನೆ. ಮಧ್ಯಾಹ್ನ 2 ಗಂಟೆಯವರೆಗೂ ಜಗಳ ಮುಂದುವರಿದ…
ಮುಂದೆ ಓದಿ..
