ಭಾರತ್ ಬಂದ್…….ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ..
ಭಾರತ್ ಬಂದ್…….ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ……..ಸುಮಾರು 30 ವರ್ಷಗಳು ಅಥವಾ ಅದಕ್ಕಿಂತ ಹಿಂದೆ ಹೀಗೆ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದರೆ ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೆಂದರೆ ಇಡೀ ದೇಶದಲ್ಲಿ ಬಹುತೇಕ ಬಂದ್ ಆಚರಿಸಲಾಗುತ್ತಿತ್ತು. ಸಣ್ಣಪುಟ್ಟ ಗ್ರಾಮಗಳಲ್ಲಿ ಸಹ ಅಂಗಡಿಗಳನ್ನು ಮುಚ್ಚಲಾಗುತ್ತಿತ್ತು. ನಗರ ಪ್ರದೇಶಗಳಲ್ಲಿ ಬೃಹತ್ ಮೆರವಣಿಗೆ ಘೋಷಣೆಗಳು ನಡೆಯುತ್ತಿದ್ದವು. ಜನರ ಪ್ರತಿಕ್ರಿಯೆ ಅದ್ಭುತವಾಗಿರುತ್ತಿತ್ತು. ವಾಹನ ಸಂಚಾರ ಸಂಪೂರ್ಣ ನಿಂತು ರಸ್ತೆಗಳು ಭಣಗುಡುತ್ತಿದ್ದವು. ಬೀದಿಗಳಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಅಲ್ಲಲ್ಲಿ ಒಂದಷ್ಟು ಗಲಭೆ, ಬೆಂಕಿ, ಹಿಂಸಾಚಾರ, ಲಾಠಿಚಾರ್ಜ್, ಅಶ್ರುವಾಯು, ಗೋಲಿಬಾರ್ ನಡೆಯುತ್ತಿದ್ದವು. ಸರ್ಕಾರಗಳು ನಡುಗುತ್ತಿದ್ದವು. ಆದರೆ 2025 ರ ಜುಲೈ 9 ರ ಈ ಬಂದ್ ಇಷ್ಟೊಂದು ಸಂಪರ್ಕ ಕ್ರಾಂತಿಯ ನಡುವೆಯೂ ಎಷ್ಟೋ ಜನರಿಗೆ ಗೊತ್ತೇ ಆಗಲಿಲ್ಲ. ಮಾಧ್ಯಮಗಳು ಪ್ರಚಾರವನ್ನೂ ಕೊಡಲಿಲ್ಲ. ಕಾರಣ ಕಾರ್ಮಿಕ ಸಂಘಟನೆಗಳು ದುರ್ಬಲವಾಗಿರುವುದೇ ಅಥವಾ…
ಮುಂದೆ ಓದಿ..
