ನಕಲಿ ಪರಿಚಯ ನೀಡಿ ನಿವೃತ್ತ ಸಿಐಎಸ್ಎಫ್ ಅಧಿಕಾರಿ ಬಳಿ ₹45,000 ವಂಚನೆ
ಬೆಂಗಳೂರು, ಜುಲೈ 17:2025 ನಗರದಲ್ಲಿ ಮತ್ತೊಂದು ಆನ್‌ಲೈನ್ ವಂಚನೆ ಬೆಳಕಿಗೆ ಬಂದಿದೆ. ನಿವೃತ್ತ ಸಿಐಎಸ್ಎಫ್ ನೌಕರರೊಬ್ಬರಿಗೆ ತಮ್ಮನ್ನು “ಶರ್ಮ” ಎಂಬ ಸಹೋದ್ಯೋಗಿಯಾಗಿ ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬರು ₹45,000 ವಂಚಿಸಿದ ಘಟನೆ ನಡೆದಿದೆ. ಪ್ರಕಾಶ್ ಕುಮಾರ್ ನಾಯಕ್ ಅವರು ನೀಡಿದ ಮಾಹಿತಿಯ ಪ್ರಕಾರ, ಜುಲೈ 11 ರಂದು ಸಂಜೆ 10:30 ಗಂಟೆಗೆ ಅವರ ಮೊಬೈಲಿಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನ ಫೋನ್ ಕೆಲಸ ಮಾಡುತ್ತಿಲ್ಲ ಎಂದು ಕಾರಣ ನೀಡಿ ತಕ್ಷಣ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದ. ಆತನು ನೀಡಿದ ಮೊಬೈಲ್ ನಂಬರ್ 8955492652 ಗೆ ಪಿರ್ಯಾದಿದಾರರು ಒಟ್ಟು ₹45,000 ಹಣವನ್ನು ನಾಲ್ಕು ಹಂತಗಳಲ್ಲಿ ಜುಲೈ 12 ರಂದು ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿದರು. ಹಣ ವರ್ಗಾವಣೆಯ ನಂತರ, ಪ್ರಕಾಶ್ ಕುಮಾರ್ ತಮ್ಮ ಖಾತೆ ಪರಿಶೀಲನೆ ನಡೆಸಿದಾಗ ಯಾವುದೇ ಹಣದ ಸ್ವೀಕೃತಿ ಇಲ್ಲದೆ, ಕರೆ…
ಮುಂದೆ ಓದಿ..
