ಸುದ್ದಿ 

ಆನ್‌ಲೈನ್‌ OLX ವಂಚನೆ: ದಂಪತಿಯ ₹4.15 ಲಕ್ಷ ನಷ್ಟ – ಸೈಬರ್ ಕ್ರೈಂ ಠಾಣೆಗೆ ದೂರು

ಬೆಂಗಳೂರು, ಜುಲೈ 14:2025 ಆನ್‌ಲೈನ್‌ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತ್ತೀಚೆಗಷ್ಟೇ ಬೆಂಗಳೂರಿನ ದಂಪತಿ ಒಬ್ಬರು ಹಳೆಯ ವಾಹನ ಮಾರಾಟ ಮಾಡುವಾಗ OLX ಪ್ಲಾಟ್‌ಫಾರ್ಮ್‌ನಲ್ಲಿ ₹4.15 ಲಕ್ಷ ವಂಚಿತರಾಗಿರುವ ಘಟನೆ ನಡೆದಿದೆ. ಶೇಖರ್ ದುಗ್ಗಿರಲ ಅವರು ನೀಡಿರುವ ದೂರಿನ ಪ್ರಕಾರ, ಅವರು ದಿನಾಂಕ 04/07/2025 ರಂದು ತಮ್ಮ ಹಳೆಯ ವಾಹನವನ್ನು OLX ಮೂಲಕ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಖರೀದಿದಾರನಂತೆ ನಟನೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬನು ಅವರನ್ನು ಸಂಪರ್ಕಿಸಿ, ವಾಹನ ಖರೀದಿಸುವ ನೆಪದಲ್ಲಿ ನಂಬಿಕೆ ಮೂಡಿಸಿ ಹಣ ಪಾವತಿಸಬೇಕೆಂದು ಒತ್ತಾಯಿಸಿದ್ದಾನೆ. ದಂಪತಿಗಳು ನಂಬಿಕೆಗೆ ಒಳಗಾಗಿ ತಮ್ಮಿಂದ ಕೆಳಗಿನಂತೆ ವಿವಿಧ ಆನ್‌ಲೈನ್‌ ಪಾವತಿ ವಿಧಾನಗಳ ಮೂಲಕ ಹಣ ವರ್ಗಾಯಿಸಿದ್ದಾರೆ: ₹2,00,000 – IMPS ಮೂಲಕ Sekhar Duggirala ಮತ್ತು Arti Duggirala ಅವರ ಜಂಟಿ ಬ್ಯಾಂಕ್ ಖಾತೆಗ ₹90,000 – Sekhar Duggirala ಗೆ UPI…

ಮುಂದೆ ಓದಿ..
ಸುದ್ದಿ 

ಬೆಳಿಕಾಂ ಲೇಔಟ್ ಮೆಡಿಕಲ್ ಅಂಗಡಿಯಲ್ಲಿ ₹3.7 ಲಕ್ಷ ನಗದು ಮತ್ತು ಮೊಬೈಲ್ ಕಳ್ಳತನ – ಕೆಲಸಗಾರನ ಮೇಲೆ ಪ್ರಕರಣ

ಬೆಂಗಳೂರು, ಜುಲೈ 14:2025 ನಗರದ ಬೆಳಿಕಾಂ ಲೇಔಟ್ 1ನೇ ಕ್ರಾಸ್‌ನಲ್ಲಿರುವ ಪಟೇಲ್ ಮೆಡಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಅಂಗಡಿಯ ಕ್ಯಾಷ್ ಕೌಂಟರ್‌ನಿಂದ ₹3.7 ಲಕ್ಷ ನಗದು ಹಾಗೂ ಮೊಬೈಲ್ ಫೋನ್ ಕಳ್ಳತನ ಮಾಡಿದ ಘಟನೆ ವರದಿಯಾಗಿದೆ. ಸಂಪಿಗೆಹಳ್ಳಿ ಪೋಲೀಸ್ ಠಾಣೆಗೆ ದೂರು ನೀಡಿದ ಅಂಗಡಿ ಮಾಲೀಕರ ಹೇಳಿಕೆಗೆ ಪ್ರಕಾರ, ದೋಲಾರಮ್ ಅಲಿಯಾಸ್ ದಿಲೀಫ್ ಪಟೇಲ್ ಎಂಬಾತ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. 08/07/2025ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ, ಅಂಗಡಿಯಲ್ಲಿ ಇಡಲಾಗಿದ್ದ ನಗದು ಮತ್ತು ಮೊಬೈಲ್ ಕಾಣೆಯಾಗಿದ್ದು, ಶಂಕೆ ವ್ಯಕ್ತಪಡಿಸಿದ ಮಾಲೀಕರು ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಯು ಕಳ್ಳತನ ಮಾಡುತ್ತಿರುವ ದೃಶ್ಯಗಳು ಪತ್ತೆಯಾಗಿವೆ. ಕಳ್ಳತನದ ನಂತರ ಆರೋಪಿಗೆ ಸಂಪರ್ಕ ಸಾಧಿಸಲು ಯತ್ನಿಸಿದರೂ, ಅವನ ಫೋನ್ (7259528653) ಸ್ವಿಚ್ ಆಫ್ ಆಗಿತ್ತು. ಪರಿಣಾಮವಾಗಿ, ಮಾಲೀಕರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಫ್‌ಐಆರ್…

ಮುಂದೆ ಓದಿ..
ಸುದ್ದಿ 

ಉದ್ಯೋಗದ ನಂಬಿಕೆ ಕಲ್ಪಿಸಿ ₹7 ಲಕ್ಷ ವಂಚನೆ – ಅಪರಿಚಿತ ವ್ಯಕ್ತಿಗೆ ಎಫ್‌ಐಆರ್

ಬೆಂಗಳೂರು, ಜುಲೈ 14:2025 ಉದ್ಯೋಗ ನೀಡುವ ನೆಪದಲ್ಲಿ ನಂಬಿಕೆ ಹುಟ್ಟುಹಾಕಿ ಒಟ್ಟು ₹7,00,000 ನಗದು ವಂಚಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ವಿದ್ಯಾರಣ್ಯಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬೆಲೆಗ್ರಾಮ ನಲೆ ಮೂಲದ ಯುವಕನೊಬ್ಬನು ಕೆಲಸ ಹುಡುಕುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಮಿಷನ್ ಆಧಾರಿತ ಉದ್ಯೋಗ ನೀಡುತ್ತೇನೆಂದು ಹೇಳಿ ಪರಿಚಯಕ್ಕೆ ಬಂದಿದ್ದಾರೆ. ಮೊದಲ ಹಂತದಲ್ಲಿ ₹20,000, ನಂತರ ₹10,000, ₹5,00,000 ಮತ್ತು ₹13,50,000 ರಷ್ಟು ಹಣವನ್ನು ಹಂತ ಹಂತವಾಗಿ ಹೂಡಿಕೆಗೆ ರೂಪದಲ್ಲಿ ನೀಡಲಾಗಿದೆ. ಹೀಗಿರುವಾಗ, ಹೆಚ್ಚಿನ ಲಾಭದ ನಂಬಿಕೆ ಉಂಟುಮಾಡಿದ ವ್ಯಕ್ತಿಯು, “ಹೂಡಿದ ಹಣವನ್ನು ಹಿಂದಕ್ಕೆ ಪಡೆಯಬೇಕಾದರೆ ₹2,00,000 ಸೆಕ್ಯುರಿಟಿ ಡಿಪಾಸಿಟ್ ನೀಡಿ” ಎಂದು ಬೇಡಿಕೆ ಇಟ್ಟಿದ್ದಾನೆ. ಪೀಡಿತರು ಅದರಂತೆ ಸೆಕ್ಯುರಿಟಿ ಡಿಪಾಸಿಟ್ ರೂಪದಲ್ಲಿ ಹಣ ನೀಡಿದರೂ ಸಹ, ಯಾವುದೇ ಹಣವನ್ನು ಮರಳಿಸದೆ ನಾಪತ್ತೆಯಾಗಿದ್ದಾನೆ. ಒಟ್ಟು ₹7 ಲಕ್ಷದ ವಂಚನೆ ನಡೆದಿರುವ ಈ ಸಂಬಂಧ ಪೀಡಿತರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ…

ಮುಂದೆ ಓದಿ..
ಸುದ್ದಿ 

ಮಹಿಳೆಯ ಮಾಂಗಲ್ಯ ಸರ ಕಳವಿಗೆ ಸಂಬಂಧಿಸಿ ಎಫ್‌ಐಆರ್

– ಬೆಂಗಳೂರು, ಜುಲೈ 14:2025 ನಗರದ ಹಲಸೂರು ಪ್ರದೇಶದಲ್ಲಿ ನಿದ್ರೆ ಮಧ್ಯೆ ಕಳ್ಳತನ ನಡೆದಿರುವ ಘಟನೆ ವರದಿಯಾಗಿದ್ದು, ಮಹಿಳೆಯ ಮಾಂಗಲ್ಯ ಸರ ಕಳವಾಗಿರುವ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಶ್ರೀಮತಿ ಸರಸ್ವತಿ ಎ. ಆರ್. ಎಂಬವರ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರು ಹಲಸೂರಿನಲ್ಲಿರುವ ಪಿಎಂಎಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಗಂಡ ಮತ್ತು ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಘಟನೆ ನಡೆದಿದೆ ಎನ್ನಲಾಗಿದೆ. ಸರಸ್ವತಿ ಅವರ ಪತಿ ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಅವರು 10-07-2025 ರಂದು ರಾತ್ರಿ ಪಾಳಿಯ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ, ಮನೆಯಲ್ಲಿ ಸರಸ್ವತಿ ಅವರು ತಮ್ಮ ರೂಮ್‌ನ ಕಿಟಕಿಯನ್ನು ತೆರೆದು ಮಲಗಿದ್ದರು. ಮಧ್ಯರಾತ್ರಿ ಸುಮಾರು 2:00 ಗಂಟೆಗೆ ನಿದ್ರೆಗೆ ಹೋಗಿದ್ದ ಅವರು, ಸುಮಾರು 3:45ರ ವೇಳೆಗೆ ಎಚ್ಚರಗೊಂಡಾಗ, ಅವರ ಕುತ್ರಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ…

ಮುಂದೆ ಓದಿ..
ಅಂಕಣ 

ಸಮಸ್ಯೆಗಳು – ಸಲಹೆಗಳು – ಮನವಿ..

ಸಮಸ್ಯೆಗಳು – ಸಲಹೆಗಳು – ಮನವಿ. ಶಿಕ್ಷಣ ಸಂಘಟನೆಗಳು – ಶಿಕ್ಷಕರು – ಪೋಷಕರು – ಸಾಮಾಜಿಕ ಕಾರ್ಯಕರ್ತರು – ಚಿಂತಕರು – ಶಿಕ್ಷಣ ತಜ್ಞರು – ಶಿಕ್ಷಣ ಇಲಾಖೆಯವರು ಕಡ್ಡಾಯವಾಗಿ ಓದಬೇಕು… ಮಾನ್ಯ ಮುಖ್ಯಮಂತ್ರಿಗಳು,ಮಾನ್ಯ ಶಿಕ್ಷಣ ಸಚಿವರು,ಮಾನ್ಯ ಮುಖ್ಯ ಕಾರ್ಯದರ್ಶಿಗಳು,ಮಾನ್ಯ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಶಿಕ್ಷಣ ಕ್ಷೇತ್ರದಸಂಬಂಧಪಟ್ಟವರು……. ( ಇವರಿಗೆ ದಯವಿಟ್ಟು ತಲುಪಿಸಿ ) ಚುನಾವಣೆ ಮತ್ತು ಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಕಡ್ಡಾಯವಾಗಿ ಉಪಯೋಗಿಸಿಕೊಳ್ಳಬೇಕು ಏಕೆಂದರೆ ಅವರಿದ್ದಲ್ಲಿ ಹೆಚ್ಚು ನಿಖರತೆ ಇರುತ್ತದೆ ಎನ್ನುವ ಕಾರಣದಿಂದ ಅವರಿಗೆ ಈ ವಿಷಯದಲ್ಲಿ ಯಾವುದೇ ವಿನಾಯಿತಿ ನೀಡಬಾರದು ಎಂದು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವಾಗ ಶಿಕ್ಷಕರ ಸಮಸ್ಯೆಗಳ ಕುರಿತು ಒಂದು ಟಿಪ್ಪಣಿ……. ರಾಜ್ಯದ ವಿವಿಧ ಭಾಗಗಳ ನನ್ನ ಕೆಲವು ಆತ್ಮೀಯ ಶಿಕ್ಷಕರುಗಳೊಂದಿಗೆ ಖಾಸಗಿಯಾಗಿ ಮಾತನಾಡಿದ ನಂತರ ಅವರುಗಳು ನೀಡಿದ ಕೆಲವು ಸಲಹೆಗಳನ್ನು ಕ್ರೋಢೀಕರಿಸಿ ಈ ಸಮಸ್ಯೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದು…

ಮುಂದೆ ಓದಿ..
ಅಂಕಣ 

ಓದು ಮತ್ತು ಮಾನವೀಯ ಪ್ರಜ್ಞೆ…..ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ?…..

ಓದು ಮತ್ತು ಮಾನವೀಯ ಪ್ರಜ್ಞೆ….. ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ?….. ಈ ರೀತಿಯ ಅನುಮಾನ ಬಲವಾಗುತ್ತಿದೆ.ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ.ತುಂಬಿದ ಕೊಡ ತುಳುಕಲು ಸಾಧ್ಯವಿಲ್ಲ ಮತ್ತು ಅವಕಾಶವೂ ಇಲ್ಲ. ಅದು ನಮ್ಮಲ್ಲಿ ಜೀವಪರ ನಿಲುವನ್ನೂ, ವಿನಯವನ್ನು, ಪ್ರಬುದ್ದತೆಯನ್ನು, ತಾಳ್ಮೆಯನ್ನು ಮತ್ತು ಒಟ್ಟಾರೆ ಸಮಷ್ಟಿ ಪ್ರಜ್ಞೆಯನ್ನು ಬೆಳೆಸುತ್ತದೆ…… ಆದರೆ,ಅದೇ ಓದು ಬಹಳಷ್ಟು ಜನರಲ್ಲಿ ಅಹಂಕಾರವನ್ನು,ಸಣ್ಣ ಮನಸ್ಸನ್ನು, ಅಸೂಯಾಪರ ಗುಣವನ್ನು, ಕ್ಷುಲ್ಲಕ ವ್ಯಕ್ತಿತ್ವವನ್ನು ರೂಪಿಸುವ ಸಾಧ್ಯತೆ ಇದೆ.ನಾನು ಎಲ್ಲರಿಗಿಂತ ಹೆಚ್ಚು ಓದಿದ್ದೇನೆ‌‌. ಎಲ್ಲಾ ಶ್ಲೋಕಗಳು, ಅಧ್ಯಾಯಗಳು, ಮಂತ್ರಗಳು, ಕಾಲಂಗಳು ನನಗೆ ನೆನಪಿದೆ, ನಾನು ಅದನ್ನು ಅತ್ಯಂತ ಸಮರ್ಥವಾಗಿ ನೆನಪಿಟ್ಟು ವಾದಿಸಬಲ್ಲೆ, ನನ್ನ ಸಹವರ್ತಿಗಳಿಗೆ ಆ ಮಟ್ಟದ ನೆನಪು ಮತ್ತು ಜ್ಞಾನ ಇಲ್ಲ, ಅವರ ವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂದು ಸಹಜ…

ಮುಂದೆ ಓದಿ..
ಅಂಕಣ 

ಪ್ರೀತಿ ಎಂಬ ಮಾಯೆಯೊಳಗೆ ಸಿಲುಕಿ………

ಪ್ರೀತಿ ಎಂಬ ಮಾಯೆಯೊಳಗೆ ಸಿಲುಕಿ……… ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು…………… ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್ರೀತಿಯ ಆಳಕ್ಕೆ ಇಳಿದು ಬಿಡುತ್ತಾರೆ. ಅದು ಎಷ್ಟು ಆಳವಾಗಿ ಇರುತ್ತದೆಯೆಂದರೆ ಎಷ್ಟೋ ಮುಗ್ಧ ಮನಸ್ಸುಗಳು ಅಲ್ಲಿಂದ ಹೊರ ಬರುವ ದಾರಿಯನ್ನೇ ಗುರುತಿಸಲು ವಿಫಲರಾಗುತ್ತಾರೆ. ಒಂದು ವೇಳೆ ಪ್ರೀತಿಯ ಆಳದಲ್ಲಿ ಅವರಿಗೆ ಒಂದಷ್ಟು ಕಷ್ಟ, ಬೇಸರ, ಜಗಳ, ಅಸಮಾಧಾನ, ನಿರಾಸೆಯ ಅನುಭವವಾದರು ಪ್ರೀತಿ ಎಂಬ ಭಾವ ತೀವ್ರತೆ ಅದನ್ನೆಲ್ಲಾ ಹೇಗೋ ಸಹಿಸಿಕೊಳ್ಳುತ್ತದೆ. ಕೊನೆಗೆ ತೀರಾ ಹೊಂದಾಣಿಕೆ ಸಾಧ್ಯವಾಗದಿದ್ದರೆ ಮುಂದೆ ಬಿಡುಗಡೆ ಹೊಂದಬಹುದು ಅಥವಾ ಅದು ಕೋಪವಾಗಿ ಪರಿವರ್ತನೆ ಹೊಂದಿ ಬೇರೆ ಬೇರೆಯಾಗಬಹುದು. ಇದೊಂದು ಸಹಜ ಪ್ರಕ್ರಿಯೆ.ಆದರೆ ಪ್ರೀತಿಯಲ್ಲಿ ಇದನ್ನು ಮೀರಿದ ಈ ಎರಡು ಘಟನೆಗಳು ಪ್ರೀತಿಸುವ ಜೀವಗಳನ್ನು ವಯಸ್ಸು, ಲಿಂಗದ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಎಂ.ಡಿ.ಎಂ.ಎ ಮಾರಾಟ – ಇಬ್ಬರು ವಿದೇಶಿಯರ ವಿರುದ್ಧ ಎನ್‌ಡಿಪಿಎಸ್ ಕೇಸು ದಾಖಲು

ಬೆಂಗಳೂರು, ಜುಲೈ 12 :2025 ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಅಕ್ರಮ ಮಾರಾಟದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ವಿದೇಶಿಯರನ್ನು ಬಂಧಿಸಿದ್ದಾರೆ.‌ ದಿನಾಂಕ 10/07/2025 ರಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ಬಾತ್ಮೀದಾರರಿಂದ ಮಾಹಿತಿ ಬಂದಿದ್ದು, ಯಲಹಂಕದ ವಿದ್ಯಾರಣ್ಯಪುರ ಹತ್ತಿರದ ಒಂದು ಮನೆಯಲ್ಲಿರುವ ಇಬ್ಬರು ವಿದೇಶೀಯರು – 1) ಅಡ್ಮಾಕೋ ಬ್ರೈಟ್ ಮತ್ತು 2) ಎಂಕೆಟಾಯಿ ಕೊಫಿ ಎಂಬವರು ತಮ್ಮ ವಸತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮೆಥಾಂಫೆಟಮಿನ್/ಎಂ.ಡಿ.ಎಂ.ಎ ಅನ್ನು ಸಂಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದಾಗಿ ತಿಳಿದುಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಮಾದಕ ವಸ್ತುಗಳು ಅಕ್ರಮವಾಗಿ ಸಿಕ್ಕಿದ್ದು, ಆರೋಪಿಗಳು ಎನ್‌ಡಿಪಿಎಸ್ ಆಕ್ಟ್ 1985 ಪ್ರಕಾರ…

ಮುಂದೆ ಓದಿ..
ಸುದ್ದಿ 

ಸೈಟ್ ಹೆಸರಿನಲ್ಲಿ ₹33.25 ಲಕ್ಷ ವಂಚನೆ ಜೀವ ಬೆದರಿಕೆ ನೀಡಿದ ವ್ಯಕ್ತಿಗೆ ವಿರುದ್ಧ ಎಫ್‌ಐಆರ್

ಬೆಂಗಳೂರು, ಜುಲೈ 12:2025 ನಗರದ ನಿವಾಸಿ ಯುವತಿಗೆ ಸೈಟ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿ, ನಂತರ ಜೀವ ಬೆದರಿಕೆ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಮಾರನಹಳ್ಳಿ ಗ್ರಾಮದ ರವಿಕುಮಾರ್ ಎಸ್.ವಿ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಜನಿ ಡಿ ಕೆ ಅವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಅಪ್ಪ-ಅಮ್ಮನೊಂದಿಗೆ ವಾಸವಾಗಿದ್ದು, ಸುಮಾರು 5 ವರ್ಷಗಳಿಂದ ರವಿಕುಮಾರ್ ಎಸ್.ವಿ ಎಂಬ ವ್ಯಕ್ತಿಯ ಪರಿಚಯದಲ್ಲಿದ್ದರು. ಈತನು ಅವರ ಅಣ್ಣ ಹರೀಶಕುಮಾರ್ ಅವರ ಸ್ನೇಹಿತನಾಗಿದ್ದರಿಂದ ಆಗಾಗ ಅವರ ಮನೆಯಲ್ಲಿ ಬರುತ್ತಿದ್ದನು. ರಜನಿ ಡಿ ಕೆ ಅವರ ಕುಟುಂಬವು ಎರಡು ವರ್ಷಗಳ ಹಿಂದೆ ದೊಡ್ಡ ಜಾಲ ಗ್ರಾಮದ ಜಮೀನನ್ನು ಮಾರಾಟ ಮಾಡಿ ₹50 ಲಕ್ಷ ಹಣ ಪಡೆದಿತ್ತು. ಈ ಹಣದಿಂದ ಅವರು ಸೈಟ್ ಖರೀದಿಸಲು ಇಚ್ಛಿಸಿದರು. ಈ ಸಂದರ್ಭದಲ್ಲಿ ರವಿಕುಮಾರ್ ಎಸ್.ವಿ “ನಾನು ನಿಮಗೆ ಉತ್ತಮ…

ಮುಂದೆ ಓದಿ..