ಸುದ್ದಿ 

10 ಲಕ್ಷ ರೂಪಾಯಿ ವಂಚನೆ ಪ್ರಕರಣ: ಮಲಬಾರ್ ಮಲ್ಟಿ ಸ್ಟೇಟ್ ಸೊಸೈಟಿ ವಿರುದ್ಧ ದೂರು

ಆನೇಕಲ್, ಜುಲೈ 8, 2025:ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿ, ದೊಮ್ಮಸಂದ್ರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಲಬಾರ್ ಮಲ್ಟಿ ಸ್ಟೇಟ್ ಅಗೋ ಕೋ-ಆಪರೇಟಿವ್ ಸೊಸೈಟಿ ಎಂಬ ಖಾಸಗಿ ಹಣಕಾಸು ಸಂಸ್ಥೆ ವಿರುದ್ಧ, ಸ್ಥಳೀಯ ಮಹಿಳೆಯೊಬ್ಬರು 10 ಲಕ್ಷ ರೂಪಾಯಿ ವಂಚನೆಯ ಆರೋಪವನ್ನು ಮೊಳಹಾಕಿದ್ದಾರೆ. ಚಂದ್ರರೆಡ್ಡಿ ಅವರ ಪ್ರಕಾರ, ಸರ್ಜಾಪುರ-ಬೆಂಗಳೂರು ಮುಖ್ಯರಸ್ತೆಯ ಕರಿಯಪ್ಪ ಬಿಲ್ಡಿಂಗ್‌ನಲ್ಲಿ ಕಳೆದ 6-7 ವರ್ಷಗಳಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ರಾಹುಲ್ ಚಕ್ರಪಾಣಿ (ಅಧ್ಯಕ್ಷ), ಸುನ್ನಿ ಅಬ್ರಹಾಂ (ಕಾರ್ಯನಿರ್ವಾಹಕ ಅಧಿಕಾರಿಗಳು), ಅಮ್ಮುಲು ಪಿ.ಎಸ್. (ಮ್ಯಾನೇಜರ್), ಹಾಗೂ ರಾಜೇಶ್ ಟಿ.ಸಿ. (ಸಹಾಯಕ) ಅವರು ಜನರಿಂದ ಹಣ ಸಂಗ್ರಹಿಸುತ್ತಿದ್ದರು. 2022 ರಲ್ಲಿ ಸಂಸ್ಥೆಯ ಸಿಬ್ಬಂದಿ ತನ್ನ ಬಳಿ ಬಂದು ಆಕರ್ಷಕ ಮೂಡಣಿಗಳ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ, ಚಂದ್ರರೆಡ್ಡಿ ಅವರು ತಮ್ಮ ಎಸ್‌ಬಿಐ ಮತ್ತು ಕರ್ನಾಟಕ ಬ್ಯಾಂಕ್ ಖಾತೆಗಳಿಂದ ಒಟ್ಟು 10 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ. 6 ವರ್ಷಗಳಲ್ಲಿ ದುಪ್ಪಟ್ಟು…

ಮುಂದೆ ಓದಿ..
ಸುದ್ದಿ 

ಅಧಿಕ ಬೆಲೆಯಲ್ಲಿ ರಸಗೊಬ್ಬರ ಮಾರಾಟ – ವಿರೋಧಿಸಿದ್ದವರಿಗೆ ಹಲ್ಲೆ: ಶ್ರೀ ಕೃಷ್ಣ ಎಂಟರ್‌ಪ್ರೈಸಸ್ ವಿರುದ್ಧ ಪ್ರಕರಣ ದಾಖಲು

ಸರ್ಜಾಪುರ, ಜೂನ್ 8,2025:ಸರ್ಜಾಪುರದ ಶ್ರೀ ಕೃಷ್ಣ ಎಂಟರ್‌ಪ್ರೈಸಸ್ ಅಂಗಡಿಯವರು ರೈತರಿಗೆ ರಸಗೊಬ್ಬರವನ್ನು ಗರಿಷ್ಠ ಚಿಲ್ಲರೆ ಬೆಲೆಗಿಂತ (ಎಂಆರ್‌ಪಿ) ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮತ್ತೆ ಸುದ್ದಿ ಶಿರೋನಾಮೆಯಾಗಿದ್ದಾರೆ. ಈ ಹಿಂದೆ ಕೃಷಿ ಇಲಾಖೆಯ ತನಿಖೆಯ ಬಳಿಕ ಅಂಗಡಿಯ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಅಂಗಡಿ ಪುನಃ ಕಾರ್ಯಾಚರಣೆ ಆರಂಭಿಸಿತ್ತು. ಕರ್ನಾಟಕ ರಾಷ್ಟ್ರ ಸಮಿತಿಯ ಉಪಾಧ್ಯಕ್ಷರು ಹಾಗೂ ಪಕ್ಷದ ಇನ್ನಿತರ ಸದಸ್ಯರು ಜೂನ್ 29 ರಂದು ಬೆಳಗ್ಗೆ 11:25 ರಿಂದ 12:00 ಗಂಟೆಯ ನಡುವಿನ ಅವಧಿಯಲ್ಲಿ ಅಂಗಡಿಗೆ ಭೇಟಿ ನೀಡಿದಾಗ, ಅಂಗಡಿ ಮಾಲಿಕ ವೆಂಕಟೇಶ್ ಅವರು ಎಂಆರ್‌ಪಿಗಿಂತ ಹೆಚ್ಚು ಹಣ ವಸೂಲಿ ಮಾಡಿರುವುದನ್ನು ಒಪ್ಪಿಕೊಂಡು ರೈತರಿಗೆ ಹಣ ವಾಪಸ್ ನೀಡಿದ್ದಾರೆ. ಈ ವೇಳೆ ನಡೆದ ವಿವಾದದಲ್ಲಿ ಮಾಲಿಕರ ಮಗ ಈಶ್ವರ್ ಮತ್ತು ಅವರ ಪತ್ನಿ ಶ್ರೀಮತಿ ವೆಂಕಟೇಶ್ ರವರು ಸ್ಥಳಕ್ಕೆ ಬಂದು…

ಮುಂದೆ ಓದಿ..
ಸುದ್ದಿ 

ಗೂಂಡಾ ದಾಳಿ – ಜಮೀನಿನಲ್ಲಿ ಭೀಕರ ಧ್ವಂಸ, ₹10 ಲಕ್ಷ ನಷ್ಟ

ಬೆಂಗಳೂರು, ಜುಲೈ 8,2025:ನಗರದ ಹೊರವಲಯದ ಸರ್ವೆ ನಂ. 31/1 ಜಮೀನಿನಲ್ಲಿ ಜುಲೈ 3ರಂದು ರಾತ್ರಿ ನಡೆದ ಗೂಂಡಾ ದಾಳಿ ಭೀತಿ ಮೂಡಿಸಿದ್ದು, ಜಮೀನಿನ ಹಕ್ಕುದಾರರಿಗೆ ₹10 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎಸ್.ವಿ. ಮಾಲಾ, ಮಧುಕುಮಾರ್ ಮತ್ತು ನವೀನ್ ಕುಮಾರ್ ಎಂಬವರು ಮದ್ದೂರಿನ ಪೋಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಪ್ರಕಾರ, ಅವರುಗಳಿಂದ ತಮ್ಮ ಪೌತ್ರಿಕ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಕಳೆದ 15 ವರ್ಷಗಳಿಂದ ನಿರಂತರವಾಗಿ ಅನಾಮಿಕ ವ್ಯಕ್ತಿಗಳಿಂದ ಕಿರುಕುಳ ಹಾಗೂ ದೌರ್ಜನ್ಯ ಎದುರಿಸುತ್ತಿದ್ದೇವೆ ಎಂದು ಅವರು ದೂರಿದ್ದಾರೆ. ಮಧು ಕುಮಾರ್ ರವರ ಪ್ರಕಾರ, ದಿನಾಂಕ 03/07/2025 ರಂದು ರಾತ್ರಿ ಸುಮಾರು 10:30 ಗಂಟೆ ಸಮಯದಲ್ಲಿ ಸುಮಾರು 12 ರಿಂದ 15 ಮಂದಿ ದುಷ್ಕರ್ಮಿಗಳು ಮೂರು ಕಾರುಗಳಲ್ಲಿ ಆಗಮಿಸಿ, ಮಾರಕಾಸ್ತ್ರಗಳೊಂದಿಗೆ ಜಮೀನಿನ ಬಳಿಗೆ ಬಂದು ಭೀತಿಜನಕ ದೌರ್ಜನ್ಯ ನಡೆಸಿದರು. ಅವರು ಜಮೀನಿಗೆ…

ಮುಂದೆ ಓದಿ..
ಸುದ್ದಿ 

ಸರ್ಜಾಪುರದಲ್ಲಿ ಅಂಗಡಿಯಿಂದ ₹1.45 ಲಕ್ಷ ಮೌಲ್ಯದ ಎಲೆಕ್ಟ್ರಿಕ್ ವೈರ್ ಕಳವು. ಸರ್ಜಾಪುರ, ಬೆಂಗಳೂರು ಗ್ರಾಮಾಂತರ – ಜುಲೈ 8, 2025

ಸರ್ಜಾಪುರದ ಎಲ್ ಎಂ ಎಕ್ಸ್ ಕಾಂಪ್ಲೆಕ್ಸ್‌ನಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ನಡೆದ ಕಳ್ಳತನದಿಂದಾಗಿ ಸುಮಾರು ₹1.45 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ಕೇಬಲ್‌ಗಳು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಅಂಗಡಿ ಮಾಲೀಕರು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊಹಮ್ಮದ್ ಅಶೋಕ್ಯೂ ರವರ ಮಾಹಿತಿ ಪ್ರಕಾರ, ಅಂಗಡಿಯನ್ನು ನವೀಕರಿಸುವ ಕೆಲಸ ನಡೆಯುತ್ತಿದ್ದು, ಲೈಟಿಂಗ್ ಹಾಗೂ ಎಸಿ ಅಳವಡಿಕೆಗಾಗಿ ಅಗತ್ಯವಿರುವ ವೈಯರಿಂಗ್ ಸಾಮಗ್ರಿಗಳನ್ನು ಅಂಗಡಿಗೆ ಹೊಂದಿರುವ ಗೋಡಾನ್‌ನಲ್ಲಿ ಇಡಲಾಗಿತ್ತು. ದಿನಾಂಕ 30/06/2025ರಂದು ರಾತ್ರಿ 10 ಗಂಟೆಗೆ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ ಮೊಹಮ್ಮದ್ ಅಶೋಕ್ಯೂ ರವರು, ದಿನಾಂಕ 03/07/2025ರಂದು ಬೆಳಗ್ಗೆ 11 ಗಂಟೆಗೆ ಅಂಗಡಿಗೆ ಬಂದಾಗ ಕೇಬಲ್‌ಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳತನವಾಗಿರುವ ಸಾಮಗ್ರಿಗಳ ವಿವರ ಈ ರೀತಿಯಾಗಿದೆ: Industrial Cable 300 ಮೀಟರ್ – ₹1,000 4.0 sqmm Industrial Cable 200 ಮೀಟರ್ – ₹59,000…

ಮುಂದೆ ಓದಿ..
ಸುದ್ದಿ 

ಅಜಾಗರೂಕ ಬೈಕ್ ಚಾಲಕನಿಂದ ಅಪಘಾತ: ಯುವಕನ ಕಾಲು ಮೂಳೆ ಮುರಿದ ಘಟನೆ

ಆನೇಕಲ್, ಜುಲೈ 8:ತಿಲಕ್ ಸರ್ಕಲ್ ಕಡೆಯಿಂದ ಅತಿವೇಗದಲ್ಲಿ ಓಡಿಸಿಕೊಂಡು ಬಂದ ಯಮಹಾ ಆರ್15 ಬೈಕ್ ಚಾಲಕನ ಅಜಾಗರೂಕ ಚಾಲನೆಯಿಂದ ಸರ್ಜಾಪುರ ನಿವಾಸಿ ಪ್ರಕಾಶ್ ಎಂಬ ಯುವಕನಿಗೆ ಭಾರೀ ಅಪಘಾತ ಸಂಭವಿಸಿದ ಘಟನೆ ದಿನಾಂಕ 02-07-2025 ರಂದು ಸಂಜೆ ನಡೆದಿದೆ. ಅಪಘಾತದ ವೇಳೆ ಪ್ರಕಾಶ್ ತನ್ನ ತಮ್ಮ ಕೌಶಾಲ್‍ನನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದು, ಅವರು ಓಡಿಸಿಕೊಂಡಿದ್ದ ಕೆಎ 59 ಜೆ 6380 ನಂಬರ್‌ನ ಟಿವಿಎಸ್ ಎಕ್ಸ್‌ಎಲ್ ಮೊಪೇಡ್‌ ಅನ್ನು ಸ್ಟ್ರೀಟ್ ಲ್ಯಾಂಡ್ ಬೇಕರಿ ಹತ್ತಿರ ರಸ್ತೆ ದಾಟುವಾಗ, ತಿಲಕ್ ಸರ್ಕಲ್ ಕಡೆಯಿಂದ ಅತಿವೇಗವಾಗಿ ಬಂದುಕೊಂಡ ಕೆಎ 51 ಜೆಎ 4338 ನಂಬರ್‌ನ ಯಮಹಾ ಬೈಕ್‌ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮವಾಗಿ ಪ್ರಕಾಶ್ ತೀವ್ರವಾಗಿ ಗಾಯಗೊಂಡಿದ್ದು, ತಲೆಗೆ, ಕೈಗಳಿಗೆ ಗಾಯಗಳಾಗಿದ್ದು, ಬಲಕಾಲಿನ ಮೂಳೆ ಮುರಿದಿದೆ. ಸ್ಥಳೀಯರು ಕೂಡಲೇ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು…

ಮುಂದೆ ಓದಿ..
ಸುದ್ದಿ 

ಜಮೀನು ದಾರಿ ವಿವಾದದಿಂದ ಹಲ್ಲೆ – ತ್ಯಾವಕನಹಳ್ಳಿಯಲ್ಲಿ ಸಂಬಂಧಿಕರ ಕೈಗಳಿಂದ ಯುವಕನಿಗೆ ಗಂಭೀರ ಗಾಯ

ತ್ಯಾವಕನಹಳ್ಳಿ, ಜುಲೈ 8, 2025: ತ್ಯಾವಕನಹಳ್ಳಿ ಗ್ರಾಮದಲ್ಲಿ ಜಮೀನಿಗೆ ದಾರಿ ವಿಚಾರವಾಗಿ ಉಂಟಾದ ಗಲಾಟೆ ಹಲ್ಲೆ ಗೆ ದಾರಿಯಾಗಿ, ವ್ಯಕ್ತಿಯೊಬ್ಬ ಆಸ್ಪತ್ರೆಗೆ ಸೇರಿಕೊಳ್ಳುವಂತಾಗಿದೆ. ಸಂಬಂಧಿಕರ ಮಧ್ಯೆ ನಡೆಯುತ್ತಿರುವ ಜಮೀನಿನ ಹಕ್ಕು ವಿವಾದ ಹಿನ್ನಲೆಯಲ್ಲಿ ಈ ದೌರ್ಜನ್ಯ ನಡೆದಿದ್ದು, ಸ್ಥಳೀಯ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನಂದ್ ರವರು ನೀಡಿದ ಮಾಹಿತಿ ಪ್ರಕಾರ, ತ್ಯಾವಕನಹಳ್ಳಿ ಗ್ರಾಮದಲ್ಲಿನ ಸರ್ವೆ ನಂ. 217/2 ಮತ್ತು 117ಬಿ2 ಜಮೀನಿನಲ್ಲಿ ದಾರಿ ಸಂಬಂಧಿತ ವಿಚಾರವನ್ನು ಮಾನ್ಯ ನ್ಯಾಯಾಲಯದ ಮುಂದೆ ವಿಚಾರಣೆಗೆ ಇಟ್ಟಿರುವುದಾದರೂ, ಆರೋಪಿತರಾದ ದೊಡ್ಡಪ್ಪ ವೆಂಕಟಸ್ವಾಮಿ ಮತ್ತು ಆತನ ಅಳಿಯ ಗೊಪಾಲ್ ಅವರು ಈ ವಿಚಾರವಾಗಿ ಗಲಾಟೆ ಮಾಡುತ್ತಿದ್ದರು. ದಿನಾಂಕ 23 ಜೂನ್ 2025 ರಂದು ಬೆಳಿಗ್ಗೆ 9.45ರ ಸುಮಾರಿಗೆ, ಆನಂದ್ ರವರ ಜಮೀನಿನಲ್ಲಿ ಇದ್ದಾಗ, ಆರೋಪಿಗಳು ಸ್ಥಳಕ್ಕೆ ಬಂದು, ಜಮೀನಿಗೆ ದಾರಿ ಬಿಡುವಂತೆ ಕೇಳಿದ ಮಾತಿಗೆ ಕೋಪಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದರು.…

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ ಜೀವ ಬೆದರಿಕೆ ಪ್ರಕರಣ – ಪೊಲೀಸ್ ಇಲಾಖೆ ಕ್ರಮಕ್ಕೆ ವಿಳಂಬ, ನ್ಯಾಯಾಲಯದ ಮಧ್ಯಸ್ಥಿಕೆ

ಆನೇಕಲ್, ಜುಲೈ 8,2025: ಆನೇಕಲ್ ತಾಲೂಕಿನ ಹಾಲೆನಹಳ್ಳಿಯಲ್ಲಿ ಜೀವ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ, ಪೀಡಿತ ವ್ಯಕ್ತಿ ನ್ಯಾಯಾಲಯದ ಮೊರೆಹೋಗಿರುವ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಗತ ವಾದ ವೆಂಕಟಾಚಲಯ್ಯ ಬಿನ್ ಲೇಟ್ ಮುತ್ತರಾಯಪ್ಪ ಅವರು, ದಿನಾಂಕ 07-05-2025 ರಂದು ಬೆಳಿಗ್ಗೆ ಸುಮಾರು 10:45 ಗಂಟೆಯ ಸಮಯದಲ್ಲಿ ಹಾಲೆನಹಳ್ಳಿಯಿಂದ ಹೋಗುವಾಗ ಆರೋಪಿ ವೇಣುಗೋಪಾಲ್ ಎಲ್ ಬಿನ್ ಲಕ್ಷ್ಮಯ್ಯ ಎಂಬವರು ದಿನ್ನೂರು ಕ್ರಾಸ್ ಬಳಿ ದಾರಿ ತಡೆದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ “ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ಜೀವ ಬೆದರಿಕೆ ಹಾಕಿದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೀಡಿತರು ತಮ್ಮ ಮೊಬೈಲ್‌ನಲ್ಲಿ ಈ ಬೆಳವಣಿಗೆಯ ರೆಕಾರ್ಡಿಂಗ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅದೇ ದಿನ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಾಥಮಿಕ ವರದಿ ದಾಖಲಾಗದೆ ಕೇವಲ NCR (Non-Cognizable…

ಮುಂದೆ ಓದಿ..
ಸುದ್ದಿ 

ಲೇಬರ್ ಶೆಡ್ಡಿನಿಂದ ಯುವಕ ನಾಪತ್ತೆ: ತನಿಖೆ ಆರಂಭಿಸಿದ ಪೊಲೀಸರು

ಬೆಂಗಳೂರು, ಜುಲೈ 8, 2025:ನಗರದ ಲೇಬರ್ ಶೆಡ್ಡಿನಲ್ಲಿ ವಾಸವಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಕಾರ್ಪೆಂಟರ್ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ, ಅವರು ಲೇಬರ್ ಶೆಡ್ಡಿನಲ್ಲಿ ವಾಸವಿದ್ದು, 01 ಜುಲೈ 2025 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ತಮ್ಮ ಪರಿಚಿತನಾದ ರಾಹುಲ್ ಪ್ರಸಾದ್ ಶಾ ಎಂಬುವನನ್ನು ಕೆಲಸಕ್ಕಾಗಿಯೇ ಕರೆದುಕೊಂಡು ಬಂದಿದ್ದರು. ನಾಳೆ ದಿನವಾದ 02 ಜುಲೈ 2025 ರಂದು ರಾಹುಲ್ ಕೆಲಸ ಮಾಡಿದರೂ, ಅದೇ ದಿನ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಶೆಡ್ಡಿನಿಂದ ಯಾರಿಗೂ ಮಾಹಿತಿ ನೀಡದೆ ಹೊರಟು ಹೋಗಿದ್ದಾನೆ. ಆತನಿಗೆ ಸಂಬಂಧಿಸಿದವರು ಹಾಗೂ ವಿಜಯ್ ಕುಮಾರ ಶಾ ವಿವಿಧ ಕಡೆಗಳಲ್ಲಿ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಆಪತ್ಕಾಲದ ಪರಿಸ್ಥಿತಿ ಅನಿಸಿದ ವಿಜಯ್ ಕುಮಾರ್ ಶಾ 04 ಜುಲೈ 2025 ರಂದು…

ಮುಂದೆ ಓದಿ..
ಸುದ್ದಿ 

ದಲೈಲಾಮಾ 90…….ಉತ್ತರಾಧಿಕಾರಿಯ ಹುಡುಕಾಟದಲ್ಲಿ ಮೌಢ್ಯ………

ಜಗತ್ತಿನ ಮಾನವ ಇತಿಹಾಸದಲ್ಲಿ ಕೆಲವೇ ಕೆಲವು ಅತ್ಯುತ್ತಮ ತತ್ವಜ್ಞಾನಿಗಳಲ್ಲಿ ಭಾರತದ ಸಿದ್ದಾರ್ಥ ಎಂಬ ಗೌತಮ ಬುದ್ಧರು ಒಬ್ಬರು.ಅವರ ಚಿಂತನೆಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸಹಜತೆ, ಅನುಭಾವಿಕತೆ, ದೇಹ ಮತ್ತು ಮನಸ್ಸುಗಳ ದಂಡನೆಯಿಂದ ಸಿಗುವ ಅನುಭವ ಎಲ್ಲವನ್ನು ಒಳಗೊಂಡ ಜೀವಪರ ನಿಲುವಿನ ಅತ್ಯಂತ ಮಾನವೀಯ ನಡೆನುಡಿಗಳು ಅಡಕವಾಗಿದೆ.ಅಂತಹ ಬುದ್ಧರ ಚಿಂತನೆಗಳ ಪ್ರಭಾವದಿಂದ ಬೌದ್ಧ ಧರ್ಮ ವಿಶ್ವದ ಅನೇಕ ದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ. ಚೀನಾ, ಜಪಾನ್, ಕೊರಿಯಾ, ವಿಯೆಟ್ನಾಂ, ತೈವಾನ್, ಭೂತಾನ್, ಭಾರತ, ಶ್ರೀಲಂಕಾ, ನೇಪಾಳ, ಇಂಡೋನೇಷ್ಯಾ, ಸಿಂಗಾಪುರ, ಥಾಯ್ಲೆಂಡ್, ಟಿಬೆಟ್ ಮುಂತಾದ ದೇಶಗಳಲ್ಲಿ ಬೌದ್ಧ ಧರ್ಮ ಪೂರ್ಣವಾಗಿ ಮತ್ತು ಕೆಲವು ಕಡೆ ಭಾಗಶಃ ಆಚರಣೆಯಲ್ಲಿದೆ. ಇದೀಗ ಟಿಬೆಟ್ ನ ಧರ್ಮಗುರು ದಲೈಲಾಮ ಅವರಿಗೆ 90 ವರ್ಷ ಆದ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿಯ ಹುಡುಕಾಟ ಪ್ರಾರಂಭವಾಗಿದೆ. ಅದರಲ್ಲಿ ವಿಶೇಷತೆ ಏನು ಎಂದರೆ, ಉತ್ತರಾಧಿಕಾರಿಯನ್ನು ಪುನರ್ಜನ್ಮದ ನಂಬಿಕೆಯ ವಿಧಾನದಲ್ಲಿ ಆಯ್ಕೆ ಮಾಡಲಾಗುತ್ತದೆ. ಅಂದರೆ…

ಮುಂದೆ ಓದಿ..
ಸುದ್ದಿ 

ಲಾರಿ ನಿರ್ಲಕ್ಷ್ಯದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಅಪಘಾತ – ಮೂವರಿಗೆ ಗಾಯ

ಬೆಂಗಳೂರು, ಜುಲೈ 8 – 2025 ನಗರದ ಹೊರವಲಯ ಬನ್ನೇರ್‌ಘಟ್ಟ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಮೇಲೆ ಲಾರಿ ಚಾಲಕನ ಅಜಾಗರೂಕತೆಯಿಂದಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ದೂರುದಾರರಾದ ರಾಮ ಬಾಬು ಮಹಾತೊ (35 ವರ್ಷ) ನೀಡಿದ ಮಾಹಿತಿಯಂತೆ, ಜುಲೈ 4ರ ರಾತ್ರಿ ಸುಮಾರು 11:30 ಗಂಟೆಗೆ, ಅವರು ತಮ್ಮ ವಾಹನದಲ್ಲಿ ಪ್ರಯಾಣಿಸುತ್ತಿರುವಾಗ ಒಂದು ಲಾರಿ (ನಂಬರ್ ಕೆಎ-01 ಎಎಲ್-9053) ಚಾಲಕನು ಯಾವುದೇ ಸುರಕ್ಷತಾ ಸೂಚನೆ ಅಥವಾ ಇಂಡಿಕೇಟರ್ ಹಾಕದೇ, ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಮೇಲೆ ರಸ್ತೆಯ ಮಧ್ಯದಲ್ಲಿ ಲಾರಿಯನ್ನು ನಿಲ್ಲಿಸಿದ್ದ. ಅದರ ಬೆನ್ನಲ್ಲೇ ಬರುತ್ತಿದ್ದ ಟೆಂಪೋ ಟ್ರಾವೆಲರ್ ವಾಹನ ಹಿಂದಿನಿಂದ ಆ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಅಪಘಾತದ ಪರಿಣಾಮವಾಗಿ, ಟೆಂಪೋ ಟ್ರಾವೆಲರ್ ಚಾಲಕ ಪಿರೋಜ್ ಪಾಷಾ ಅವರ ಕಾಲು ಮತ್ತು ಬೆನ್ನು ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಅಲ್ಲದೇ, ಆತನೊಂದಿಗೆ…

ಮುಂದೆ ಓದಿ..