ಸುದ್ದಿ 

ಯಲಹಂಕದಲ್ಲಿ 23 ವರ್ಷದ ಯುವತಿ ಕಾಣೆಯಾದ ಪ್ರಕರಣ

ಬೆಂಗಳೂರು ಆಗಸ್ಟ್ 11 2025ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 23 ವರ್ಷದ ಯುವತಿ ಕಾಣೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಉಮದ್ರಾಸ್ ಬಿನ್ ಅಬ್ದುಲ್ ಜಬ್ಬರ್ (60) ಅವರು ಯಲಹಂಕ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರು ಬಿಲಿಂಗ್ ಡಮಾಲಿಸ್ ಕೆಲಸ ಮಾಡಿಕೊಂಡಿದ್ದು, ಪತ್ನಿ ಪಾಜೀಲಾ ಬೇಗಂ ಗೃಹಿಣಿಯಾಗಿದ್ದಾರೆ. ದಂಪತಿಗೆ ನಾಲ್ಕು ಮಂದಿ ಮಕ್ಕಳು – ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದಾರೆ. ಇವರ ಮೂರನೇ ಮಗಳಾದ ಇನ್ಮಾಜ್ (23) ಅವರು 05 ಆಗಸ್ಟ್ 2025 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಯಿಂದ ಹೊರಗೆ ತೆರಳಿ, ವಾಪಸು ಮನೆಗೆ ಬಂದಿಲ್ಲ. ಸಂಬಂಧಿಕರು, ಸ್ನೇಹಿತರು ಮತ್ತು ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಆಕೆಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. 07 ಆಗಸ್ಟ್ 2025 ರಂದು ತಡವಾಗಿ ಯಲಹಂಕ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ ಪಿರ್ಯಾದುದಾರರು, ಕಾಣೆಯಾದ…

ಮುಂದೆ ಓದಿ..
ಸುದ್ದಿ 

ಕಿಂಗ್ಸ್ ಪಿಜಿಯಲ್ಲಿ ಕಳವು – ₹1.1 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ ಕಳವು

ಬೆಂಗಳೂರು: ಆಗಸ್ಟ್ 11 2025ಬಾಗಲೂರು ರಸ್ತೆಯ ವಿನಾಯಕ ನಗರದಲ್ಲಿರುವ ಕಿಂಗ್ಸ್ ಪಿಜಿಯಲ್ಲಿ ವಿದ್ಯಾರ್ಥಿಯೊಬ್ಬನ ಕೊಠಡಿಗೆ ಕಳ್ಳರು ನುಗ್ಗಿ ಎರಡು ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಪೀಡಿತನು ಆರ್‌ಸಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿಯಾಲ್ ಪಾರ್ಟ್ನರ್ಸ್‌ನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾನೆ. ಆಗಸ್ಟ್ 4ರಂದು ಬೆಳಿಗ್ಗೆ 6.30ರ ಸುಮಾರಿಗೆ ರೂಮ್‌ಮೇಟ್‌ ಬಾಗಿಲು ಲಾಕ್‌ ಮಾಡದೆ ಮಲಗಿದ್ದ ಪರಿಣಾಮ, ಕಳ್ಳರು ಒಳನುಗ್ಗಿ ಲ್ಯಾಪ್‌ಟಾಪ್‌ಗಳಿದ್ದ ಬ್ಯಾಗ್‌ ಕದ್ದೊಯ್ದಿದ್ದಾರೆ. ಕಳೆದುಹೋದ ವಸ್ತುಗಳಲ್ಲಿ ಲೆನೊವೊ ಥಿಂಕ್‌ಪ್ಯಾಡ್‌ (ಮೌಲ್ಯ ₹60,000) ಮತ್ತು ಆಸಸ್ ವಿವೋಬುಕ್‌ (ಮೌಲ್ಯ ₹50,000) ಸೇರಿದ್ದು, ಒಟ್ಟು ₹1.1 ಲಕ್ಷ ಮೌಲ್ಯದ ನಷ್ಟವಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಕಳ್ಳ ಬ್ಯಾಗ್‌ ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ. ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಯುವಕರ ಮೇಲೆ ಬೈಕ್ ಸವಾರರ ದಾಳಿ – ಬೆದರಿಕೆ ಹಾಕಿದ ಆರೋಪ

ಬೆಂಗಳೂರು ಆಗಸ್ಟ್ 11 2025ಯಲಹಂಕದಲ್ಲಿ ಬೆಳಗಿನ ಜಾವ ಯುವಕರ ಮೇಲೆ ಬೈಕ್ ಸವಾರರ ಗುಂಪು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಪೀಡಿತರ ಹೇಳಿಕೆಯ ಪ್ರಕಾರ, ಆಗಸ್ಟ್ 6ರಂದು ಬೆಳಗ್ಗೆ ಸುಮಾರು 7 ಗಂಟೆಗೆ, ದೂರುದಾರರು ತಮ್ಮ ತಮ್ಮ ಚೇತನ್ ಹಾಗೂ ಸ್ನೇಹಿತ ಸುಬ್ರಮಣಿಯವರೊಂದಿಗೆ ರೇವಾ ಕಾಲೇಜ್ ಎದುರಿನ ಟೀ ಟೈಮ್ ಅಂಗಡಿ ಮುಂದೆ ನಿಂತುಕೊಂಡಿದ್ದರು. ಆ ವೇಳೆ ಹಳ್ಳಿಯ ಪರಿಚಿತನಿಗೆ ‘ಹಾಯ್’ ಎಂದ ತಕ್ಷಣ, ಬೈಕ್‌ನಲ್ಲಿ ಬಂದ ನಾಲ್ವರಿಂದ ಐದು ಮಂದಿ ಏಕಾಏಕಿ ಹಲ್ಲೆ ನಡೆಸಿದರು. ಆರೋಪಿಗಳು ಹೆಲ್ಮೆಟ್ ಮತ್ತು ಇಟ್ಟಿಗೆಯಿಂದ ದೂರುದಾರರ ತಲೆ, ಬೆನ್ನು, ಮುಖ ಭಾಗಗಳಿಗೆ ಹೊಡೆದು ಗಂಭೀರ ಗಾಯಗೊಳಿಸಿದರು. ದೂರುದಾರರ ತಮ್ಮ ಹಾಗೂ ಸ್ನೇಹಿತನಿಗೂ ಇದೇ ರೀತಿಯ ಹಲ್ಲೆ ನಡೆಸಲಾಯಿತು. ಘಟನೆಯ ನಂತರ ಬಸವರಾಜ್ ಎಂಬಾತ “ಇದು ಸ್ಯಾಂಪಲ್, ಮುಂದೆ ನೀನಾಗಲಿ ನಿನ್ನ ಕಾರಾಗಲಿ ಕಂಡರೆ ಮುಗಿಸುತ್ತೇನೆ” ಎಂದು ಬೆದರಿಕೆ ಹಾಕಿ…

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಸ್ಕೂಟರ್ ಕಳವು ಪ್ರಕರಣ

ಯಲಹಂಕ: ಆಗಸ್ಟ್ 11 2025ಬಾಗಲೂರು ಕ್ರಾಸ್ ಸಮೀಪ ಸ್ಕೂಟರ್ ಕಳುವಿನ ಘಟನೆ ವರದಿಯಾಗಿದೆ. ಪೊಲೀಸರ ಪ್ರಕಾರ, ಜೂನ್ 7, 2025ರಂದು ಬೆಳಿಗ್ಗೆ ಸುಮಾರು 9.45ರ ವೇಳೆಗೆ ವಿನಾಯಕನಗರ, 5ನೇ ಮೈನ್ ರಸ್ತೆಯ ಅಪೋಲೋ ಪಾಮಾಣಿ ಮನೆಯ ಎಡಭಾಗದಲ್ಲಿ ಪಾರ್ಕ್ ಮಾಡಲಾಗಿದ್ದ ಸ್ಕೂಟರ್‌ನ್ನು ಅಪರಿಚಿತರು ಕಳವು ಮಾಡಿಕೊಂಡು ಹೋಗಿದ್ದಾರೆ. ಘಟನೆಯ ನಂತರ, ಮಾಲೀಕರು ಯಲಹಂಕ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಲಾಗಿದೆ. ಕಳುವಾದ ವಾಹನದ ಪತ್ತೆಗಾಗಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಮುಂದುವರೆಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಮಂಚಪ್ಪನಹಳ್ಳಿಯಲ್ಲಿ 32 ವರ್ಷದ ಮಹಿಳೆ ಕಾಣೆಯಾದ ಘಟನೆ

ಬೆಂಗಳೂರು ಆಗಸ್ಟ್ 11 2025ಮಂಚಪ್ಪನಹಳ್ಳಿ ಮೂಲದ 32 ವರ್ಷದ ಅರುಣಾ ಎಂಬ ಮಹಿಳೆ ಆಗಸ್ಟ್ 6 ರಂದು ಸಂಜೆ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಜ್ಯೋತಿ ಅವರ ಪ್ರಕಾರ, ಅರುಣಾ ಕಳೆದ ನಾಲ್ಕು ವರ್ಷಗಳಿಂದ ತಮ್ಮ ತಾಯಿ, ಸಹೋದರಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಅವರ ಗಂಡ ನಾಲ್ಕು ವರ್ಷಗಳ ಹಿಂದೆ ನಿಧನ ಹೊಂದಿದ್ದು, ನಂತರ ಗಾರ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದರು. ಆಗಸ್ಟ್ 6ರಂದು ಸಂಜೆ ಸುಮಾರು 7.45ಕ್ಕೆ ಮನೆಯಲ್ಲಿದ್ದ ಅರುಣಾ, ರಾತ್ರಿ 8 ಗಂಟೆಗೆ ಕಾಣೆಯಾಗಿದ್ದಾರೆ. ಕುಟುಂಬಸ್ಥರು ಮತ್ತು ಬಂಧುಗಳು ರಾತ್ರಿ ತನಕ ಹಾಗೂ ನಂತರವೂ ಹುಡುಕಾಡಿದರೂ ಪತ್ತೆಯಾಗಲಿಲ್ಲ. ವಿಚಾರಿಸಿದರೂ ಯಾವುದೇ ಮಾಹಿತಿ ದೊರೆಯದ ಕಾರಣ ತಡವಾಗಿ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಾಗಲೂರು ಪೊಲೀಸರು ಕಾಣೆಯಾದ ಮಹಿಳೆಯ ಪತ್ತೆಗೆ ಶೋಧ ಕಾರ್ಯ ಹಾಗೂ ತನಿಖೆ ಮುಂದುವರೆಸಿದ್ದಾರೆ.

ಮುಂದೆ ಓದಿ..
ಸುದ್ದಿ 

ನಿರ್ಮಾಣ ಸ್ಥಳದಲ್ಲಿ ಭೀಕರ ಅವಘಡ – ಕಾರ್ಮಿಕನ ದುರ್ಮರಣ

ಬೆಂಗಳೂರು:11. 2025ನಗರದಲ್ಲಿನ ಶ್ರೀರಾಮಪುರ ಗ್ರಾಮದಲ್ಲಿರುವ ಉಡುಪಿ ಉಪಚಾರ ಹೋಟೆಲ್ ಎದುರಿನ ಸೊಹೋ ಅಂಡ್ ಸೈ ಪ್ರಾಜೆಕ್ಟ್‌ ನಿರ್ಮಾಣ ಸ್ಥಳದಲ್ಲಿ ಗುರುವಾರ ಬೆಳಿಗ್ಗೆ ಭೀಕರ ಅವಘಡ ಸಂಭವಿಸಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಮಾಹಿತಿ ಪ್ರಕಾರ, ಓಡಿಶಾ ಮೂಲದ ರೋಹಿತ್ ನಾಯಕ್ (ಸೆಂಟ್ರಿಂಗ್ ಕಾರ್ಪೆಂಟರ್ ಅಸಿಸ್ಟೆಂಟ್) ಬೆಳಿಗ್ಗೆ 8ನೇ ಮಹಡಿಯಲ್ಲಿ ಪಿಲ್ಲರ್‌ಗೆ ಸೆಂಟ್ರಿಂಗ್ ಬಾಕ್ಸ್ ಫಿಕ್ಸ್ ಮಾಡುವಾಗ ಕಾಲು ಜಾರಿ ಕೆಳಗೆ ಬಿದ್ದರು. ತೀವ್ರ ಗಾಯಗೊಂಡ ಅವರನ್ನು ತಕ್ಷಣವೇ ಸಹೋದ್ಯೋಗಿಗಳು ಹಾಗೂ ಇಂಜಿನಿಯರ್ ಮಾನಸ ರಂಜನ್ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆಗಮಿಸುವ ವೇಳೆಗೆ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ದೂರುದಾರರ ಪ್ರಕಾರ, ನಿರ್ಮಾಣ ಕಂಪನಿಯ ಸೂಪರ್‌ವೈಸರ್ ನೀಲು ಸೂರೈನ್ ಮತ್ತು ಸೇಪ್ರೀ ಆಫೀಸರ್ ದಕ್ಷಿಣಮೂರ್ತಿ ಅವರು ಕಾರ್ಮಿಕರಿಗೆ ಸುರಕ್ಷತಾ ಬೆಲ್ಟ್ ಹಾಗೂ ನೆಟ್ ಅಳವಡಿಸದೇ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಕೆಲಸ ಮಾಡಿಸಿದ್ದರಿಂದ ಈ…

ಮುಂದೆ ಓದಿ..
ಸುದ್ದಿ 

ಮದುವೆ ಸಮಾರಂಭದಲ್ಲಿ ಬಾಲಕನ ಮೇಲೆ ಹಲ್ಲೆ, ಪ್ರಾಣ ಬೆದರಿಕೆ

ಬೆಂಗಳೂರು:11 2025ನಗರದ ಫಣಿಸಂದ್ರ ಪ್ರದೇಶದಲ್ಲಿರುವ ಕ್ರಿಸ್ಟಲ್ ಪ್ಯಾವೆನ್ ಆವರಣದಲ್ಲಿ ನಡೆದ ಮದುವೆ ಸಮಾರಂಭದಲ್ಲಿ 13 ವರ್ಷದ ಬಾಲಕನ ಮೇಲೆ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ಸಂಪಿಗೆಹಳ್ಳಿ ಪೊಲೀಸರ ಮಾಹಿತಿಯ ಪ್ರಕಾರ, ಜುಲೈ 15ರಂದು ರಾತ್ರಿ ಮದುವೆ ಕಾರ್ಯಕ್ರಮದ ವೇಳೆ ಹಣ್ಣಿನ ಸ್ಟಾಲ್ ಬಳಿ ನಿಂತಿದ್ದ ಬಾಲಕನಿಗೆ ಬಿನ್ ರಷೀದ್ ಖಾನ್ (31) ಎಂಬುವವರು ಅವಾಚ್ಯ ಶಬ್ದಗಳಿಂದ ಬೈದು, ಮುಷ್ಟಿಯಿಂದ ತಲೆಗೆ ಮತ್ತು ಹೊಟ್ಟೆಗೆ ಹೊಡೆದು, ಚಾಕುವಿನಿಂದ ಚುಚ್ಚಲು ಯತ್ನಿಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯ ನಂತರ ಬಾಲಕನನ್ನು ತಕ್ಷಣವೇ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಯಿತು. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಮುಂದೆ ಓದಿ..
ಸುದ್ದಿ 

ಟೆಲಿಗ್ರಾಂ ಮೂಲಕ ಆನ್‌ಲೈನ್ ವಂಚನೆ – ₹1.00 ಲಕ್ಷಕ್ಕೂ ಹೆಚ್ಚು ನಷ್ಟ

ಬೆಂಗಳೂರು ಆಗಸ್ಟ್ 11 2025ಟೆಲಿಗ್ರಾಂ ಆಪ್ ಮೂಲಕ ಪಾರ್ಟ್‌ಟೈಮ್ ಕೆಲಸದ ಆಫರ್ ನೀಡಿ ವ್ಯಕ್ತಿಯಿಂದ ಲಕ್ಷಕ್ಕೂ ಹೆಚ್ಚು ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. 28 ಜುಲೈ 2025ರಂದು ಬೆಳಿಗ್ಗೆ ಸುಮಾರು 10 ಗಂಟೆಯ ಸುಮಾರಿಗೆ paxfun.com ಹೆಸರಿನ ಖಾತೆಯಿಂದ ದೂರುದಾರರಿಗೆ “ಪಾರ್ಟ್‌ಟೈಮ್ ಜಾಬ್” ಕುರಿತು ಸಂದೇಶ ಬಂತು. ಗೂಗಲ್‌ನಲ್ಲಿ ವಿಮರ್ಶೆ (ರಿವ್ಯೂ) ಮಾಡಿದರೆ ಹಣ ನೀಡುವುದಾಗಿ ಭರವಸೆ ನೀಡಲಾಗಿತ್ತು. ಪ್ರಾರಂಭದಲ್ಲಿ 100 ರೂ. ದೂರುದಾರರ ಖಾತೆಗೆ ಜಮಾ ಮಾಡಲಾಯಿತು. ನಂತರ ಹೆಚ್ಚಿನ ಆದಾಯಕ್ಕಾಗಿ ಹಣ ಹಾಕಬೇಕೆಂದು ಒತ್ತಾಯಿಸಿ, hariom1427@axl, akkhankhan1119-2@okicici, yogeshendge@oksbi, bshshsvsgs@upi, ಹಾಗೂ 9951649166@rapl ಖಾತೆಗಳಿಗೆ ಒಟ್ಟು ₹1,00,500 ವರ್ಗಾಯಿಸಲಾಯಿತು. ಮತ್ತೆ ಹಣ ಹಾಕುವಂತೆ ಒತ್ತಾಯಿಸಿದಾಗ ವಂಚನೆ ನಡೆದಿದೆ ಎಂಬುದು ತಿಳಿದುಬಂದಿದ್ದು, ಗಣಪತಿ ಭಟ್ ಅವರು ತಕ್ಷಣವೇ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಮುಂದೆ ಓದಿ..
ಸುದ್ದಿ 

ರಾತ್ರಿ ಪಾಳಿ ( Night shift ) ತುಂಬಾ ಗಂಭೀರ ವಿಷಯ. ದಯವಿಟ್ಟು ಸಾರ್ವಜನಿಕ ಚರ್ಚೆಗೆ ಒಳಪಡಿಸಿ………

ರಾತ್ರಿ ಪಾಳಿ ( ನೈಟ್ ಶಿಫ್ಟ್ ) ಎಂಬ ಉದ್ಯೋಗಿಗಳ ಕೆಲಸದ ಅವಧಿಯು ಒಂದು ಯುವ ಪೀಳಿಗೆಯನ್ನೇ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯೆಗಳಿಗೆ ಸಿಲುಕಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತುಂಬಾ ದುಷ್ಪರಿಣಾಮವನ್ನು ಬೀರುತ್ತಿದೆ. ನನಗೆ ಪರಿಚಯದ ಎಲ್ಲಾ ಕ್ಷೇತ್ರಗಳ ಕಂಪನಿ, ಕಾರ್ಖಾನೆ, ಇತ್ಯಾದಿಗಳಲ್ಲಿ  ರಾತ್ರಿ ಪಾಳಿಯಲ್ಲಿ ನಿಯಮಿತವಾಗಿ ಕೆಲಸ ಮಾಡುವ ಉದ್ಯೋಗಿಗಳನ್ನು, ಆತ್ಮೀಯರನ್ನು ಮಾತನಾಡಿಸಿದೆ. ಅವರೆಲ್ಲರ ಅನಿಸಿಕೆ, ಅಭಿಪ್ರಾಯವೇನೆಂದರೆ ರಾತ್ರಿ ಪಾಳಿಯಲ್ಲಿ ಖಂಡಿತವಾಗಲೂ ನಿದ್ರಾಹೀನತೆಯಿಂದ ಕೆಲವಷ್ಟು ಸಾಮಾನ್ಯ ಮತ್ತು ದೀರ್ಘ ಖಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಕೆಲವರಂತೂ ರಾತ್ರಿ ಪಾಳಯ ಒಂದು ದುಃಸ್ವಪ್ನ. ಅದರಿಂದಾಗಿ ನಾನು ಖಿನ್ನತೆಗೆ ಒಳಗಾಗಿ ವೈದ್ಯರ ಸಲಹೆ ಪಡೆಯುತ್ತಿದ್ದೇನೆ ಎಂದರು. ಹಲವರು ಕೌಟುಂಬಿಕ ಸಮಸ್ಯೆಗೂ ಇದು ಕಾರಣವಾಗಿದೆ ಎಂದು ಹೇಳಿದರು. ಕೆಲವು  ಕ್ಷೇತ್ರಗಳಲ್ಲಿ ರಾತ್ರಿ ಪಾಳಿಯು ಅನಿವಾರ್ಯವೇನೋ ನಿಜ. ಆದರೆ ಅದಕ್ಕೆ ಕೆಲವೊಂದು ಪರಿಹಾರ ರೂಪದ ಬದಲಾವಣೆಯು ತೀರ ಅಗತ್ಯವಾಗಿದೆ. ಇದು ಅತಿಯಾಗಿ ದೇಹ ಮತ್ತು…

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ಸೇತುವೆ ಬಳಿ ಕಂಟೈನರ್ ಲಾರಿ ಡಿಕ್ಕಿ – ತಾಯಿ-ಮಗನಿಗೆ ಗಂಭೀರ ಗಾಯ

ಬೆಂಗಳೂರು: ಅಕ್ಕಿಪೇಟೆಯಿಂದ ಕೋಡಿಗೆಹಳ್ಳಿಯಲ್ಲಿರುವ ಬಂಧುವಿನ ಮನೆಗೆ ತೆರಳುತ್ತಿದ್ದ ತಾಯಿ-ಮಗನ ಸ್ಕೂಟರ್‌ಗೆ ಮಧ್ಯರಾತ್ರಿ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಆಗಸ್ಟ್ 6ರ ಮಧ್ಯರಾತ್ರಿ ನಡೆದಿದೆ. ಪೊಲೀಸರ ಪ್ರಕಾರ, ಗಾಯಗೊಂಡವರು ರಾಜೇಶ್ ಎ. (ಮಗ) ಮತ್ತು ಶಾಂತಿ (ತಾಯಿ). ಇಬ್ಬರೂ ಸ್ಕೂಟರ್ (KA-01-JC-6720) ನಲ್ಲಿ ಬಿಬಿ ರಸ್ತೆ ಮಾರ್ಗವಾಗಿ ಹೆಬ್ಬಾಳ ನ್ಯಾರೋ ಬ್ರಿಡ್ಜ್ ಹತ್ತಿರ ಕೋಡಿಗೆಹಳ್ಳಿಯ ಕಡೆಗೆ ತೆರಳುತ್ತಿದ್ದಾಗ, ಸುಮಾರು 1 ಗಂಟೆಗೆ ಹಿಂಬದಿಯಿಂದ ಬಂದ ಕಂಟೈನರ್ ಲಾರಿ (RJ-14-GG-8561) ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ, ಸ್ಕೂಟರ್ ಸವಾರರು ರಸ್ತೆ ಮೇಲೆ ಬಿದ್ದು, ಲಾರಿಯ ಚಕ್ರ ಕಾಲುಗಳ ಮೇಲೆ ಹರಿದ ಪರಿಣಾಮ ರಾಜೇಶ್ ಎ. ಅವರಿಗೆ ಎರಡೂ ಕಾಲು, ಎಡ ಕೈ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಎಡ ಕಾಲಿನ ಮಂಡಿಯ ಕೆಳಭಾಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗಿದೆ. ಶಾಂತಿ…

ಮುಂದೆ ಓದಿ..