ನಿರ್ಮಾಣ ಸ್ಥಳದಲ್ಲಿ ಭೀಕರ ಅವಘಡ – ಕಾರ್ಮಿಕನ ದುರ್ಮರಣ
ಬೆಂಗಳೂರು:11. 2025ನಗರದಲ್ಲಿನ ಶ್ರೀರಾಮಪುರ ಗ್ರಾಮದಲ್ಲಿರುವ ಉಡುಪಿ ಉಪಚಾರ ಹೋಟೆಲ್ ಎದುರಿನ ಸೊಹೋ ಅಂಡ್ ಸೈ ಪ್ರಾಜೆಕ್ಟ್ ನಿರ್ಮಾಣ ಸ್ಥಳದಲ್ಲಿ ಗುರುವಾರ ಬೆಳಿಗ್ಗೆ ಭೀಕರ ಅವಘಡ ಸಂಭವಿಸಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಮಾಹಿತಿ ಪ್ರಕಾರ, ಓಡಿಶಾ ಮೂಲದ ರೋಹಿತ್ ನಾಯಕ್ (ಸೆಂಟ್ರಿಂಗ್ ಕಾರ್ಪೆಂಟರ್ ಅಸಿಸ್ಟೆಂಟ್) ಬೆಳಿಗ್ಗೆ 8ನೇ ಮಹಡಿಯಲ್ಲಿ ಪಿಲ್ಲರ್‌ಗೆ ಸೆಂಟ್ರಿಂಗ್ ಬಾಕ್ಸ್ ಫಿಕ್ಸ್ ಮಾಡುವಾಗ ಕಾಲು ಜಾರಿ ಕೆಳಗೆ ಬಿದ್ದರು. ತೀವ್ರ ಗಾಯಗೊಂಡ ಅವರನ್ನು ತಕ್ಷಣವೇ ಸಹೋದ್ಯೋಗಿಗಳು ಹಾಗೂ ಇಂಜಿನಿಯರ್ ಮಾನಸ ರಂಜನ್ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆಗಮಿಸುವ ವೇಳೆಗೆ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ದೂರುದಾರರ ಪ್ರಕಾರ, ನಿರ್ಮಾಣ ಕಂಪನಿಯ ಸೂಪರ್‌ವೈಸರ್ ನೀಲು ಸೂರೈನ್ ಮತ್ತು ಸೇಪ್ರೀ ಆಫೀಸರ್ ದಕ್ಷಿಣಮೂರ್ತಿ ಅವರು ಕಾರ್ಮಿಕರಿಗೆ ಸುರಕ್ಷತಾ ಬೆಲ್ಟ್ ಹಾಗೂ ನೆಟ್ ಅಳವಡಿಸದೇ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಕೆಲಸ ಮಾಡಿಸಿದ್ದರಿಂದ ಈ…
ಮುಂದೆ ಓದಿ..
