ಕಾಲೇಜಿಗೆ ಹೋದ 17 ವರ್ಷದ ವಿದ್ಯಾರ್ಥಿನಿ ಕಾಣೆ: ಆತಂಕದಲ್ಲಿ ಪೋಷಕರು
ಆನೇಕಲ್ ತಾಲ್ಲೂಕಿನ ಗೌರೇನಹಳ್ಳಿ ನಿವಾಸಿ ಗಂಗಮ್ಮ ನಾಗರಾಜು ದಂಪತಿಯ ಹಿರಿಯ ಮಗಳು ಅಮೂಲ್ಯ (17), ಜುಲೈ 24 ರಂದು ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೊರಟು ಮರಳದೇ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಈ ಕುರಿತು ಪೋಷಕರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಮೂಲ್ಯ ಚಂದಾಪುರದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ 1ನೇ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಯಾವಾಗಲೂ ಮಾಮೂಲಿಯಾಗಿ ಕಾಲೇಜಿಗೆ ತೆರಳಿ ವಾಪಸ್ಸು ಬರುತ್ತಿದ್ದ ಅಮೂಲ್ಯ, ಆ ದಿನ ಸಂಜೆ ಮನೆಗೆ ಬರಲಿಲ್ಲ. ಸಂಜೆ ವೇಳೆಗೆ ಕಾದರೂ ಮಗಳು ಮನೆಗೆ ಬರದೇ ಇರುವುದರಿಂದ ಪೋಷಕರು ಆತಂಕಗೊಂಡು ಕಾಲೇಜಿಗೆ ಹಾಗೂ ಆಕೆಯ ಸ್ನೇಹಿತರಿಗೆ ಸಂಪರ್ಕಿಸಿದಾಗ, ಕಾಲೇಜು ಮುಗಿಸಿ ಮಧ್ಯಾಹ್ನ 3:30ರ ಸುಮಾರಿಗೆ ಹೊರಟಿದ್ದಳು ಹಾಗೂ ಸ್ನೇಹಿತರು ಹೇಳಿದಂತೆ ಅನೇಕಲ್‌ಗೆ ಸಂಜೆ 4:30ರ ವೇಳೆಗೆ ಬಂದಿದ್ದಾಳೆ ಎಂಬ ಮಾಹಿತಿ ದೊರೆತಿದೆ. ಆದರೆ ಆ ಸಮಯದಿಂದ ಮಗಳು ಎಲ್ಲಿ ಹೋಗಿದಾಳೆ ಎಂಬುದರ…
ಮುಂದೆ ಓದಿ..
