ಬಳ್ಳಾರಿಯಲ್ಲಿ ಜಾನಪದ ಸಂಗೀತ ಸೊಬಗು – ಗಂಗಾ ಕಲಾ ಟ್ರಸ್ಟ್ ಹಾಗೂ ಸಂಸ್ಕೃತಿ ಇಲಾಖೆಯಿಂದ ಸಂಯುಕ್ತ ಕಾರ್ಯಕ್ರಮ
ಬಳ್ಳಾರಿ, ಜುಲೈ 15:ಜಾನಪದ ಕಲೆಗಳು ನಾಡಿನ ನಂಟನ್ನು ಪ್ರತಿಬಿಂಬಿಸುವ ಅಪೂರ್ವ ಕಲಾ ರೂಪಗಳು. ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಅಂದವಾದ ಜಾನಪದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬಳ್ಳಾರಿ) ಹಾಗೂ ಗಂಗಾ ಕಲಾ ಟ್ರಸ್ಟ್, ಇಬ್ರಾಹಿಂಪುರ (ಬಳ್ಳಾರಿ) ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 15, ಮಂಗಳವಾರ ಸಂಜೆ 5:30ಕ್ಕೆ, ಬಳ್ಳಾರಿ ನಗರದ ವಟ್ಟಪ್ಪ ಕೇರಿ 30ನೇ ವಾರ್ಡಿನ ಕೆಂಚಮ್ಮನ ಗುಡಿ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಶ್ರೀಮತಿ ನಾರಾಯಣಮ್ಮ, ವಾರ್ಡಿನ ಹಿರಿಯ ಮುಖಂಡರು ಜಂಬೆ ನುಡಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀಮತಿ ನಾಗಮ್ಮನವರು ವಹಿಸಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ, ಬಂಡಿಹಟ್ಟಿ ಹೈಸ್ಕೂಲ್‌ನ ಇಂಗ್ಲಿಷ್ ಉಪನ್ಯಾಸಕ ಶ್ರೀಯುತ ಹೆಚ್. ಏಸಯ್ಯ ಅವರಿಂದ ಮೂಲ ಜಾನಪದ ಕಲೆಗಳ ಮಹತ್ವದ ಕುರಿತ ಉಪನ್ಯಾಸ. ಅವರು ಈ…
ಮುಂದೆ ಓದಿ..
