” ನಿಲ್ಲಿ ಮೋಡಗಳೇ,ಎಲ್ಲಿ ಹೋಗುವಿರಿ ನಾಲ್ಕು ಹನಿಯ ಚೆಲ್ಲಿ………….
” ನಿಲ್ಲಿ ಮೋಡಗಳೇ,ಎಲ್ಲಿ ಹೋಗುವಿರಿ ನಾಲ್ಕು ಹನಿಯ ಚೆಲ್ಲಿ…………. “ಸಂಜೆ ಮೈದಾನದಲ್ಲಿ ಓಡುತ್ತಿರುವಾಗ ತುಂತುರು ಹನಿಗಳು ನನ್ನ ಓಟಕ್ಕೆ ತಡೆಯಾಗಿ ಮೈದಾನದ ಮರಗಳ ಕೆಳಗೆ ನಿಂತು ಧಣಿವಾರಿಸಿಕೊಳ್ಳುತ್ತಿರುವಾಗ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಈ ಸಾಲುಗಳು ನೆನಪಾಗಿ ಮೊಬೈಲ್ ನಲ್ಲಿ ಭಾವಗೀತೆಯ ಶೈಲಿಯ ಈ ಹಾಡು ಕೇಳುತ್ತಿರುವಾಗ ಕಾರಣವಿಲ್ಲದೇ ಆಗಿನ ಗ್ರಾಮೀಣ ಭಾಗದ ಒಬ್ಬ ಸಂದೇಶವಾಹಕ ಪಾತ್ರವೂ ನೆನಪಾಯಿತು. ಮೈಸೂರು ಮಲ್ಲಿಗೆಯ ಕವಿ ಕೆ ಎಸ್ ನರಸಿಂಹ ಸ್ವಾಮಿಯವರ ಬಳೆಗಾರ ಚೆನ್ನಯ್ಯ. ಆ ಭಾವಗೀತೆಯನ್ನೂ ಕೇಳುತ್ತಾ ಇಂದಿನ ಯುವಕ ಯುವತಿಯರಿಗೆ ಆತನನ್ನು ಪರಿಚಯಿಸಬೇಕೆಂದು ಆಸೆಯಾಗಿ……. ” ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು………. “ಎಲ್ಲಿ ಹೋದೆ ನೀ ಬಳೆಗಾರ ಚೆನ್ನಯ್ಯ…………. ಮನಸ್ಸು ಭಾರವಾಗುತ್ತದೆ,ಹೃದಯ ಭಾವುಕವಾಗುತ್ತದೆ,ಕಣ್ಣುಗಳು ತೇವವಾಗುತ್ತದೆ…… ತಂಗಿಯರೆ – ತಮ್ಮಂದಿರೇ – ಮಕ್ಕಳೇ……………. ಬಳೆಗಾರರೆಂಬ ಚೆನ್ನಯ್ಯ ಹೊನ್ನಯ್ಯ ಸಿದ್ದಯ್ಯ ಮಾರಯ್ಯ ರಾಮಯ್ಯ ಕೃಷ್ಣಯ್ಯರೆಂಬ ಹೆಸರಿನ ಜನರಿದ್ದರುಹಳ್ಳಿಗಳಲ್ಲಿ………,…
ಮುಂದೆ ಓದಿ..
